Home / ರಾಜ್ಯ / ಹೋಟೆಲ್, ರೆಸ್ಟೋರೆಂಟ್ ನಲ್ಲಿ ನೀರಿನ ಬಾಟಲಿಯನ್ನು ಖರೀದಿಸುತ್ತೀರಾ..?ಹಾಗಾದ್ರೆ ಈ ಸ್ಟೋರಿ ನೋಡಿ

ಹೋಟೆಲ್, ರೆಸ್ಟೋರೆಂಟ್ ನಲ್ಲಿ ನೀರಿನ ಬಾಟಲಿಯನ್ನು ಖರೀದಿಸುತ್ತೀರಾ..?ಹಾಗಾದ್ರೆ ಈ ಸ್ಟೋರಿ ನೋಡಿ

Spread the love

ಹೋಟೆಲ್‌ಗಳಲ್ಲಿ MRP – ಗಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲಿ ಮಾರಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ . ಇದನ್ನು ಪ್ರಶ್ನಿಸಿದ ಕೇಂದ್ರ ಸರ್ಕಾರಕ್ಕೆ ನ್ಯಾ . ಎಫ್ ನಾರಿಮನ್ ಪೀಠ , ಹೋಟೆಲ್ , ರೆಸ್ಟೋರೆಂಟ್ – ಗೆ ಯಾರೂ ಕುಡಿಯವ ನೀರನ್ನು ಖರೀದಿಸಲು ಹೋಗುವುದಿಲ್ಲ ಎಂದು ಉತ್ತರಿಸಿದೆ . ಫೆಡರೇಷನ್ ಆಫ್ ಹೋಟೆಲ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ( FHRAI ) ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್

ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಲೀಗಲ್ ಮೆಟ್ರೋಲಜಿ ಕಾಯ್ದೆಯ ವ್ಯಾಪ್ತಿಯ ಅಡಿಯಲ್ಲಿ ಬರುವುದಿಲ್ಲ ಅದಕ್ಕೆ MRP – ಗಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲಿ ಮಾರಲು ಏನು ಅಡ್ಡಿ ಇಲ್ಲ ಎಂದಿದೆ, ಏನಿದು ವಿವಾದ ಅಂತೀರ , 2009 ರ ಕಾಯ್ದೆಯಡಿ ನೀರಿನ ಬಾಟಲಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡೋ ರೆಸ್ಟೋರೆಂಟ್ ಹಾಗೂ ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳುವ ಸರ್ಕಾರದ ಅಧಿಕಾರವನ್ನು ದೆಹಲಿ ಹೈ ಕೋರ್ಟ್ 2015ರ ಆಗಸ್ಟ್ ನಲ್ಲಿ ಎತ್ತಿ ಹಿಡಿದಿತ್ತು .

ಈ ಆದೇಶಕ್ಕೆ ಪ್ರಶ್ನಿಸಿ FHRAI ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು ಆದ್ರೆ ಅದು ತಿರಸ್ಕೃತವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು , ಈ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ , MRP – ಗಿಂತ ಹೆಚ್ಚಿನ ಬೆಲೆಯಲ್ಲಿ ಯಾರೇ ನೀರಿನ ಬಾಟಲಿಗಳನ್ನು ಮಾರಾಟ ಮಾಡಿದರೆ ಅವರು ದಂಡ ತೆರಬೇಕಾಗುತ್ತದೆ ಅಥವಾ ಜೈಲು ಶಿಕ್ಷೆ ಎದುರಿಸಬೇಕು ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು .

MRP – ಗಿಂತ ಹೆಚ್ಚಿನ ಬೆಲೆಗೆ ಮಾರಾಟ , ವಿತರಣೆ ಅಥವಾ ಡೆಲಿವರಿ ಮಾಡುವಾಗ ಸಿಕ್ಕಿಬಿದ್ದರೆ ಮೊದಲನೇ ಬಾರಿ 25 ಸಾವಿರ ರೂ , ಎರಡನೇ ಬಾರಿ ಅಪರಾಧಕ್ಕೆ 50 ಸಾವಿರ ರೂ . ಹಾಗೂ ನಂತರದ ಅಪರಾಧಗಳಿಗೆ 1 ಲಕ್ಷ ರೂ ದಂಡ ಅಥವಾ 1 ವರ್ಷ ಜೈಲು ಶಿಕ್ಷೆ ಅಥವಾ ಎರಡೂ ಶಿಕ್ಷೆ ವಿಧಿಸಲಾಗುತ್ತದೆ ದಂಡ ವಿಧಿಸಲಾಗುತ್ತದೆ ಎಂದು ಲೀಗಲ್ ಮೆಟ್ರೋಲಜಿ ಕಾಯ್ದೆಯ ಸೆಕ್ಷನ್ 36 ಹೇಳುತ್ತದೆ ,


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ