Breaking News
Home / ರಾಜಕೀಯ / ಸಿಎಂ ಬಿಎಸ್‌ವೈಗೆ 11 ಸಲಹೆ ನೀಡಿದ ಸಿದ್ದರಾಮಯ್ಯ:

ಸಿಎಂ ಬಿಎಸ್‌ವೈಗೆ 11 ಸಲಹೆ ನೀಡಿದ ಸಿದ್ದರಾಮಯ್ಯ:

Spread the love

ಬೆಂಗಳೂರು: ರಾಜ್ಯದಲ್ಲಿ ಮಿತಿಮೀರಿರುವ ಕೊರೊನಾ ಸೋಂಕನ್ನು ನಿಯಂತ್ರಣ ಮಾಡಲು ಮತ್ತು ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುವ ಸಂಬಂಧ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು 11 ಸಲಹೆಗಳನ್ನು ನೀಡಿದ್ದಾರೆ.

ಸಿಎಂ ಬಿಎಸ್‌ವೈಗೆ 11 ಸಲಹೆ ನೀಡಿದ ಸಿದ್ದರಾಮಯ್ಯ:
ರಾಜ್ಯದ ಜನರ ರಕ್ಷಣೆಯ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿರುವ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಶೇ. 50ರಷ್ಟು ಕೊವಿಡ್‌ಗೆ ಬೆಡ್ ವ್ಯವಸ್ಥೆ ಮಾಡಿ. ಇದಕ್ಕಾಗಿ ಶಾಲೆ, ಕಾಲೇಜು, ಹಾಸ್ಟೆಲ್, ಹೋಟೆಲ್, ಕಲ್ಯಾಣ ಮಂಟಪ, ಸಮುದಾಯ ಭವನಗಳನ್ನು ಬಳಸಿಕೊಳ್ಳಿ. ಚಿಕಿತ್ಸೆಗಾಗಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ. ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಪತ್ರ ಬರೆದು ಪ್ರಧಾನಿ ಮೋದಿ ಮತ್ತು ಸಿಎಂ ಬಿಎಸ್‌ವೈಗೆ ಸಲಹೆ ನೀಡಿದ ಸಿದ್ದರಾಮಯ್ಯ:
ವೆಂಟಿಲೇಟರ್, ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಹೆಚ್ಚಿಸಬೇಕು. ಶೇಕಡಾ 30ರಿಂದ 40ರಷ್ಟು ಬೆಡ್‌ಗಳ ವ್ಯವಸ್ಥೆ ಮಾಡಬೇಕು. 4-5 ದಿನಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಕೇಂದ್ರದಿಂದ ಕೊರೊನಾ ಲಸಿಕೆಗಳನ್ನು ತರಿಸಿಕೊಳ್ಳಿ. ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ತರಿಸಿಕೊಳ್ಳಿ. ರಾಜ್ಯದಲ್ಲಿ ಪ್ರತಿದಿನ ಆಕ್ಸಿಜನ್, ಬೆಡ್ ಬಗ್ಗೆ ಮಾಹಿತಿ ನೀಡಿ. ರಾಜ್ಯದ ಎಲ್ಲ ಕಡೆ ಗಮನ ಕೊಡಬೇಕೆಂದು ಸಲಹೆ ನೀಡಿರುವ ಸಿದ್ದರಾಮಯ್ಯ, ಕಾಳಸಂತೆಯಲ್ಲಿ ಔಷಧ ಮಾರಾಟದ ಬಗ್ಗೆ ವರದಿಯಾಗ್ತಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಪತ್ರ ಬರೆದು ಸಲಹೆ ನೀಡಿದ್ದಾರೆ.

ಶುಗರ್, ಬಿಪಿ, ಥೈರಾಯ್ಡ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ, ಲಿವರ್, ಮೆದುಳು ಸಮಸ್ಯೆಗಳಿದ್ದರೂ ಚಿಕಿತ್ಸೆ ನೀಡಬೇಕು. ಇದರ ಜತೆಗೆ ಕೊರೊನಾಗೂ ಚಿಕಿತ್ಸೆಯನ್ನು ನೀಡಬೇಕು. ಎಲ್ಲ ವಯೋಮಾನದವರಿಗೆ ಉಚಿತವಾಗಿ ಲಸಿಕೆ ನೀಡಿ ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇದೇ ವೇಳೆ, 70 ವರ್ಷದ ಪರಿಶ್ರಮ 7 ವರ್ಷದಲ್ಲಿ ನೆಲಸಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಡುಬು, ದಡಾರ, ಪೋಲಿಯೋ ಲಸಿಕೆಗೆ ದುಡ್ಡು ಕೇಳಿಲ್ಲ. ಈಗ ಕೊರೊನಾಗೆ ಏಕೆ ದುಡ್ಡು ಕೇಳುತ್ತಿದ್ದೀರೆಂದು ಪ್ರಧಾನಿ ಮೋದಿ ಮತ್ತು ಸಿಎಂ ಬಿಎಸ್‌ವೈಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಕೊರೊನಾ 2ನೇ ಅಲೆಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರಣವೆಂದು ಸಿದ್ದರಾಮಯ್ಯ ಸಿಡಿಮಿಡಿಯಾಗಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ವರದಿಯನ್ನು ನಿರ್ಲಕ್ಷ್ಯ ಮಾಡಿದ್ದೀರಿ. ಹಾಸಿಗೆ, ಆಯಂಬುಲೆನ್ಸ್, ಔಷಧ, ಐಸಿಯು ಬೆಡ್‌ಗಳು, ಆಕ್ಸಿಜನ್ ವ್ಯವಸ್ಥೆಯ ಬಗ್ಗೆ ಅಭಿಯಾನ ನಡೆಸಬೇಕಿತ್ತು ಎಂದು ಡಾ. ದೇವಿಪ್ರಸಾದ್ ಶೆಟ್ಟಿ ವರದಿಯ ಬಗ್ಗೆ ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಕೊರೊನಾ ನಿಯಂತ್ರಣ, ಚಿಕಿತ್ಸೆ: ಮುಖ್ಯಮಂತ್ರಿ ಯಡಿಯೂರಪ್ಪಗೆ 11 ಸಲಹೆ ನೀಡಿದ ಸಿದ್ದರಾಮಯ್ಯ

ಕೊರೊನಾ ನಿಯಂತ್ರಣ: ಮುಖ್ಯಮಂತ್ರಿ ಯಡಿಯೂರಪ್ಪಗೆ 11 ಸಲಹೆ ನೀಡಿದ ಸಿದ್ದರಾಮಯ್ಯ

ಕೊರೊನಾ ನಿಯಂತ್ರಣ, ಚಿಕಿತ್ಸೆ: ಪ್ರಧಾನಿ ಮೋದಿಗೆ 11 ಸಲಹೆ ನೀಡಿದ ಸಿದ್ದರಾಮಯ್ಯ

ಕೊರೊನಾ ನಿಯಂತ್ರಣ, ಚಿಕಿತ್ಸೆ: ಪ್ರಧಾನಿ ಮೋದಿಗೆ 11 ಸಲಹೆ ನೀಡಿದ ಸಿದ್ದರಾಮಯ್ಯ

ಕೊರೊನಾ ನಿಯಂತ್ರಣ, ಚಿಕಿತ್ಸೆ: ಮುಖ್ಯಮಂತ್ರಿ ಯಡಿಯೂರಪ್ಪಗೆ 11 ಸಲಹೆ ನೀಡಿದ ಸಿದ್ದರಾಮಯ್ಯ


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ