Breaking News
Home / ರಾಜ್ಯ / ಸಿಡಿ ಲೇಡಿ ಪರ ವಕಾಲತ್ತು ವಹಿಸಿದ ವಕೀಲರಿಗೆ ಬಂತು ಕುತ್ತು

ಸಿಡಿ ಲೇಡಿ ಪರ ವಕಾಲತ್ತು ವಹಿಸಿದ ವಕೀಲರಿಗೆ ಬಂತು ಕುತ್ತು

Spread the love

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕುತೂಹಲ ಹುಟ್ಟಿಸಿದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆಡೆ ಹಲವು ತಿರುವುಗಳು ಕಳೆದುಕೊಳ್ಳುತ್ತಿದ್ದಾರೆ, ಇನ್ನೊಂದೆಡೆ ಇವತ್ತು ಪರ ವಕಾಲತ್ತು ವಹಿಸಿದ ವಕೀಲರನ್ನು ಅಮಾನತುಗೊಳಿಸುವ ತಯಾರಿ ನಡೆಯುತ್ತದೆ.

ಮಾಧ್ಯಮಗಳ ಮುಂದೆ ಸಿಡಿ ಲೇಡಿಯ ಪರವಾಗಿ ಕೆ.ಎನ್​. ಜಗದೀಶ್​ ಅವರು ಮಾಹಿತಿ ನೀಡುತ್ತಿದ್ದರೆ, ಅಸಲಿಗೆ ಅವರು ಯುವತಿಯ ಪರವಾದ ನಿಜವಾದ ವಕೀಲರಲ್ಲ. ಬದಲಿಗೆ ಜಗದೀಶ್​ ಅವರ ಪಕ್ಕ ಇರುವ ಆರ್​.ಮಂಜುನಾಥ್​ ಅವರು ಯುವತಿಯ ಪರವಾಗಿ ವಕಾಲತ್ತು ವಹಿಸಿದ್ದಾರೆ. ಕೋರ್ಟ್​ನಲ್ಲಿ ವಾದ ಮಾಡುತ್ತಿರುವವರು ಇದೇ ಮಂಜುನಾಥ್​.

ಆದರೆ ಇದೀಗ ರಾಜ್ಯ ವಕೀಲರ ಪರಿಷತ್ತಿನ ನ (ಬಾರ್​ ಕೌನ್ಸೆಲ್​) ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ತಮ್ಮ ವಕೀಲಿವೃತ್ತಿಗೆ ಕುತ್ತು ತಂದುಕೊಂಡಿದ್ದಾರೆ. ವಕೀಲರ ಪರಿಷತ್ತಿನ ವಿರುದ್ಧ ಕೆಲವು ಆರೋಪ ಮಾಡಿರುವ ಜಗದೀಶ್​ ಅವರು, ವಕೀಲರ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ವೆಲ್​ಫೇರ್​ ಸ್ಟ್ಯಾಂಪ್​ಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ.

ಯಾವುದೇ ವಕೀಲ ಒಂದು ಕೇಸ್​ನಲ್ಲಿ ವಕಾಲತ್ತು ವಹಿಸುವಾಗ ವೆಲ್​ಫೇರ್​ ಫಂಡ್​ ಸ್ಟ್ಯಾಂಪ್​ ಆ ವಕಾಲತ್ತಿಗೆ ಅಂಟಿಸುವುದು ಕಡ್ಡಾಯವಾಗಿದೆ. ಈ ಸ್ಟ್ಯಾಂಪ್​ ಹಣದ ರೂಪದಲ್ಲಿ ಅಥವಾ ಡಿಮಾಂಡ್​ಡ್ರಾಫ್ಟ್​ ರೂಪದಲ್ಲಿ ಇರಬಹುದು. ಇದು ವಕೀಲರ ಕ್ಷೇಮಾಭ್ಯುಯದ ದೃಷ್ಟಿಯಿಂದ ಇದನ್ನು ಜಾರಿಗೊಳಿಸಲಾಗಿದೆ. ಇದರ ವಿರುದ್ಧ ಮಂಜುನಾಥ್​ ವಕೀಲ ಸ್ಟ್ಯಾಂಪ್ ನಿಂದ ಸಂಗ್ರಹಿಸಿದ್ದ ಹಣದಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ವಕೀಲರ ಪರಿಷತ್ತು, ತನ್ನ ಸಭೆಯಲ್ಲಿ ಮಂಜುನಾಥ್​ ಅವರಿಗೆ ನೋಟಿಸ್​ ನೀಡಿದ್ದು, ಮುಂದಿನ ಆದೇಶದವರೆಗೆ ಸನ್ನದನ್ನು ಅಮಾನತುಗೊಳಿಸಿದೆ. ಯಾವುದೇ ವಕೀಲ ವಕೀಲಿವೃತ್ತಿ ನಡೆಸಲು ಅಥವಾ ಯಾವುದೇ ಕೇಸ್​ನಲ್ಲಿ ವಾದ ಮಂಡಿಸಲು ಈ ಪತ್ರದ ಅಗತ್ಯ ಬಹಳಷ್ಟಿದೆ. ಆದರೆ ಇದೀಗ ಅದರ ಅಮಾನತ್ತಿನ ಮೂಲಕ ಅವರಿಗೆ ಬಗ್ಗೆ ಇಲ್ಲ ವೃತ್ತಿಯನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ.

ಅಷ್ಟೇ ಅಲ್ಲದೆ , ಅವರು ಕಳಿಸಿರುವ ನೋಟಿಸ್ಗೆ 10 ದಿನದೊಳಗೆ ಉತ್ತರಿಸಬೇಕು ಎಂದು ಮಂಜುನಾಥ್ ಅವರಿಗೆ ತಿಳಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಅವರು ಯಾವುದೇ ಕೇಸ್ ಗಳಲ್ಲಿ ವಾದ ಮಂಡಿಸುತ್ತಿಲ್ಲ.


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ