Breaking News

ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು

Spread the love

ಬೆಂಗಳೂರು: ರಮೇಶ್‌ ಜಾರಕಿಹೊಳಿಯ ಅಶ್ಲೀಲ ವೀಡಿಯೋದಲ್ಲಿದ್ದ ಯುವತಿಯ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಆಕೆಯನ್ನು ಹುಡುಕಿ ಕರೆತಂದು, ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಯುವತಿಯು ಮಾ.1ರವರೆಗೂ ಬೆಂಗಳೂರಿನಲ್ಲಿದ್ದು, ಬಳಿಕ ನಾಪತ್ತೆಯಾಗಿಯಾಗಿದ್ದಾಳೆ. ಬಳಿಕ, ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಅಶ್ಲೀಲ ವಿಡಿಯೋ(ಸಿ.ಡಿ) ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವತಿ, ನಗರದಲ್ಲಿ ವಾಸವಿದ್ದಳು ಎಂಬ ಮಾಹಿತಿ ಮೇರೆಗೆ ಪೊಲೀಸರು, ಹಲವು ಪಿ.ಜಿ (ಪೇಯಿಂಗ್‌ ಗೆಸ್ಟ್‌)ಗಳನ್ನು ಪರಿಶೀಲಿಸಿದ್ದು, ಆಗ ಆಕೆಯ ವಿಳಾಸದ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.

2018ರಿಂದ ಆ ಮನೆಯಲ್ಲಿ ಯುವತಿ ವಾಸವಿದ್ದು, ಆಕೆಯ ಸ್ನೇಹಿತರು ಆಗಾಗ ಬಂದು ಹೋಗುತ್ತಿದ್ದರು ಎಂದು ಮಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ಆಕೆಯ ಮೊಬೈಲ್‌ ಸಂಖ್ಯೆ ಹಾಗೂ ಯುವತಿ ಬಗೆಗಿನ ಇತರ ಮಾಹಿತಿ ಸಿಕ್ಕಿದೆ. ಉತ್ತರ ಕರ್ನಾಟಕ ಮೂಲದವಳಾಗಿದ್ದ ಆಕೆ ಎಂಜಿನಿಯರಿಂಗ್‌ ಓದಿದ್ದಳು. ಆದರೆ ಕೋರ್ಸ್‌ ಪೂರ್ತಿಯಾಗದ ಕಾರಣ ನಗರದ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಳು ಎಂಬ ಮಾಹಿತಿ ಸಿಕ್ಕಿದ್ದು, ಪೊಲೀಸರು ಆಕೆಯ ಪತ್ತೆಗೆ ಬಲೆ ಬೀಸಿದ್ದಾರೆ.

ನಕಲಿ ಇನ್‌ಸ್ಟಾಗ್ರಾಮ್‌ ಐಡಿ ಪತ್ತೆ
ಯುವತಿಯಲ್ಲಿ ನಾಲ್ಕು ನಕಲಿ ಇನ್‌ಸ್ಟಾಗ್ರಾಮ್‌ ಖಾತೆಗಳಿದ್ದವು ಎನ್ನಲಾಗಿದೆ. ಕೇವಲ ಎರಡು ದಿನಗಳಲ್ಲಿ ನಾಲ್ಕು ನಕಲಿ ಐಡಿ ರಚಿಸಿದ್ದು, ಈ ಐಡಿಗೆ ತಲಾ ಒಂದು, ಎರಡು, ನೂರು ಮತ್ತು 400 ಫಾಲೋವರ್ಸ್‌ ಇರುವುದು ಬೆಳಕಿಗೆ ಬಂದಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ