Breaking News

ಗೋಕಾಕ ತಾಲೂಕು ಕಳ್ಳಿಗುದ್ದಿ ಗ್ರಾಮದ ‘ಅಸಲಿ’ ಅಭ್ಯರ್ಥಿಯೊಬ್ಬನ ‘ನಕಲಿ’ ಬಣ್ಣ ವಿಡಿಯೋ

Spread the love

ಪೊಲೀಸ್ ಪೇದೆಯಾಗಿ ಆಯ್ಕೆಗೊಂಡಿದ್ದ ‘ಅಸಲಿ’ ಅಭ್ಯರ್ಥಿಯೊಬ್ಬನ ‘ನಕಲಿ’ ಬಣ್ಣ ವಿಡಿಯೋ ವೀಕ್ಷಣೆ ವೇಳೆ ಬಹಿರಂಗವಾಗಿದೆ. ಇಂಥದ್ದೊಂದು ವಿಚಿತ್ರ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಪೊಲೀಸ್ ನೇಮಕಾತಿಯಲ್ಲಿ ಗೋಕಾಕ ತಾಲೂಕು ಕಳ್ಳಿಗುದ್ದಿ ಗ್ರಾಮದ ಲಕ್ಷ್ಮಣ ವೆಂಕಣ್ಣ ಹೊಸಕೋಟಿ ನೇಮಕಗೊಂಡಿದ್ದು ಈತ ಕರ್ತವ್ಯಕ್ಕೆ ಹಾಜರಾಗಲು ಬೆಳಗಾವಿ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ಆಗಮಿಸಿದ್ದಾನೆ.

 

ಈ ವೇಳೆ ದೈಹಿಕ ಸಾಮರ್ಥ್ಯ ಪರೀಕ್ಷೆ ವಿಡಿಯೋ ವೀಕ್ಷಣೆ ಮಾಡಿದಾಗ ಅಸಲಿ ಅಭ್ಯರ್ಥಿ ಲಕ್ಷ್ಮಣ ವೆಂಕಣ್ಣ ಹೊಸಕೋಟಿ ಬದಲಿಗೆ ಘಟಪ್ರಭಾದ ಮಾರುತಿ ಗಲ್ಲಿಯ ಸಚಿನ್ ಅಶೋಕ ಗುಗ್ಗರಿ ಹಾಜರಾಗಿರುವುದು ಬೆಳಕಿಗೆ ಬಂದಿದೆ.

ದೈಹಿಕ ಪರೀಕ್ಷೆಯಲ್ಲಿ ತಾನು ಅನುತ್ತೀರ್ಣನಾಗುವ ಭಯದಿಂದ ಲಕ್ಷ್ಮಣ ವೆಂಕಣ್ಣ ಹೊಸಕೋಟಿ ತನ್ನ ಬದಲಿಗೆ ಅಶೋಕ ಗುಗ್ಗರಿಯನ್ನು ಕಳಿಸಿದ್ದನೆಂದು ಹೇಳಲಾಗಿದೆ. ಇದೀಗ ವಿಡಿಯೋ ಮೂಲಕ ಇಬ್ಬರ ಬಣ್ಣ ಬಯಲಾಗಿದ್ದು, ಪೊಲೀಸರ ಅತಿಥಿಯಾಗಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ