Breaking News
Home / ರಾಜ್ಯ / ಫೆ.19ರಂದು1200 ಥಿಯೇಟರ್​​ಗಳಲ್ಲಿ ಬಿಡುಗಡೆಯಾಗಲಿದೆ ಧ್ರುವಾ ಸರ್ಜಾ ಅಭಿನಯದ ಪೊಗರು

ಫೆ.19ರಂದು1200 ಥಿಯೇಟರ್​​ಗಳಲ್ಲಿ ಬಿಡುಗಡೆಯಾಗಲಿದೆ ಧ್ರುವಾ ಸರ್ಜಾ ಅಭಿನಯದ ಪೊಗರು

Spread the love

ಬೆಂಗಳೂರು: ನಾಳೆ ಫೆಬ್ರವರಿ 19 ರಥಸಪ್ತಮಿ. ಆಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ (Dhruva Sarja) ಅಭಿಮಾನಿಗಳಿಗೆ ವಿಶೇಷ ದಿನ.. ಕಾರಣ ಧ್ರುವ ಸರ್ಜಾ ಅಭಿನಯದ, ಬಹುನಿರೀಕ್ಷಿತ ಪೊಗರು (Pogaru) ಸಿನಿಮಾ ನಾಳೆ ಬಿಡುಗಡೆಯಾಗಲಿದೆ. ಕೊರೊನಾ ಲಾಕ್​ಡೌನ್ ನಂತರ ಸ್ಯಾಂಡಲ್​ವುಡ್​ನಲ್ಲಿ ಸಿನಿಜಾತ್ರೆ ಶುರುವಾಗಿದೆ. ಆಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಪೊಗದಸ್ತಾಗಿ ಬಿಗ್ ಸ್ಕ್ರೀನ್​ಗೆ ಎಂಟ್ರಿ ಕೊಡೋಕೆ ಕ್ಷಣಗಣನೆ ಶುರುವಾಗಿದೆ. ಇನ್ನು ಅಭಿಮಾನಿಗಳಂತೂ ಫುಲ್​ ಉತ್ಸಾಹದಲ್ಲಿದ್ದು, ತಮ್ಮ ನೆಚ್ಚಿನ ನಟನಿಗೆ ಆರತಿ ಎತ್ತಿ, ಪಟಾಕಿ ಹೊಡೆದು ಸಂಭ್ರಮಿಸಲು ರೆಡಿ ಆಗಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್​ವುಡ್​ನಲ್ಲಿ ಪೊಗರು ಆರ್ಭಟ ಭರ್ಜರಿಯಾಗಿದ್ದು, ಸಿನಿಮಾದ ಓಪನಿಂಗ್ ಹೇಗಿರತ್ತೆ? ಹೈಲೆಟ್ಸ್​ಗಳೇನು ನೋಡೋಣ..

ಇನ್ನು ಧ್ರುವ ಸರ್ಜಾ ಭರ್ಜರಿಯ ಬ್ಲಾಕ್​ ಬಸ್ಟರ್ ಯಶಸ್ಸಿನ ನಂತರ, ಮೂರು ವರ್ಷಗಳ ಬಳಿಕ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ಕಳೆದ 3ವರ್ಷಗಿಂದ ಧ್ರುವ ಸರ್ಜಾ ಸಿನಿಮಾ ಇಲ್ಲದೆ ಬೇಸರಗೊಂಡಿದ್ದ ಫ್ಯಾನ್ಸ್​ ನಾಳೆ ಥಿಯೇಟರ್​​ಗಳಲ್ಲಿ ಪೊಗರು ಉತ್ಸವ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಲವು ಥಿಯೇಟರ್​ಗಳು ಈಗಾಗಲೇ ಅಲಂಕಾರಗೊಂಡಿವೆ.

1200 ಥಿಯೇಟರ್​​ಗಳಲ್ಲಿ ಪೊಗರು ಆರ್ಭಟ
ನಾಳೆ ಒಟ್ಟು 1200 ಥಿಯೇಟರ್​ಗಳಲ್ಲಿ ಪೊಗರು ಸಿನಿಮಾ ಬಿಡುಗಡೆಯಾಗಲಿದ್ದು, 15 ಚಿತ್ರಮಂದಿರಗಳಲ್ಲಿ ಸೂರ್ಯ ಹುಟ್ಟುವ ಮೊದಲೇ ಶೋ ಪ್ರಾರಂಭವಾಗಲಿದೆ. ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಪೊಗರು, ಆಂಧ್ರಪ್ರದೇಶ-ತಮಿಳುನಾಡಿನಲ್ಲೂ ಆರ್ಭಟಿಸಲಿದೆ. ನಗರದ ಮುಖ್ಯ ಥಿಯೇಟರ್​ ನರ್ತಕಿಯಲ್ಲಿ ನಾಳೆ ಬೆಳಗ್ಗೆ 10.30ರಿಂದ ಆಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಮತ್ತು ಅವರ ಮಾವ ಆಯಕ್ಷನ್​ ಕಿಂಗ್ ಅರ್ಜುನ್ ಸರ್ಜಾ ಪ್ರೇಕ್ಷಕರ ಜತೆ ಕುಳಿತು ಸಿನಿಮಾ ನೋಡಲಿದ್ದಾರೆ.

ಪೊಗರು ಸಿನಿಮಾದ ಒಂದು ದೃಶ್ಯ

ಸಿನಿಮಾಗಾಗಿ ಧ್ರುವ ಸರ್ಜಾ ಡೆಡಿಕೇಶನ್ ಹೇಗಿತ್ತು?
ಪೊಗರು ಔಟ್​ ಆಯಂಡ್​ ಔಟ್​ ಮಾಸ್​ ಎಂಟರ್​ಟೈನರ್​ ಸಿನಿಮಾ ಆಗಿದ್ದು, ಧ್ರುವಸರ್ಜಾ ಕದಂಬ ಬಾಹುಗಳನ್ನು ಪ್ರದರ್ಶಿಸುತ್ತ ನಟೋರಿಯಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪೊಗರು ಅನ್ನೋ ಟೈಟಲ್​​ನಲ್ಲೇ ಧಮ್​ ಇದ್ದು, ಈ ಸಿನಿಮಾ ಧೂಳೆಬ್ಬಿಸುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಈಗಾಗಲೇ ಬಿಡುಗಡೆಯಾದ ಹಾಡು, ಡೈಲಾಗ್​ ಟ್ರೇಲರ್​ನಿಂದ ಗೊತ್ತಾಗುತ್ತಿದೆ. ಬಾಸು ಖರಾಬು ಹಾಡಿನಲ್ಲಿ ಧ್ರುವ ಸರ್ಜಾ ಜಬರ್​ದಸ್ತ್​ ಸ್ಟೆಪ್​ ಹಾಕಿದ್ದು, ಈ ಹಾಡು ಯೂಟ್ಯೂಬ್​ನಲ್ಲಿ ಭರ್ಜರಿ ವೀವ್ಸ್​ ಪಡೆದಿದೆ. ಡೈಲಾಗ್​ ಟ್ರೇಲರ್​ಗೂ ಅಭಿಮಾನಿಗಳು ಸಿಕ್ಕಾಪಟೆ ಫಿದಾ ಆಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಬಾಡಿಬಿಲ್ಡರ್​ಗಳೊಂದಿಗೆ ಧ್ರುವಸರ್ಜಾ

ಪೊಗರು ಸಿನಿಮಾದ ಮುಖ್ಯ ಹೈಲೆಟ್ ಅಂದರೆ ಧ್ರುವ ಸರ್ಜಾ. ಅವರು ಈ ಸಿನಿಮಾಗಾಗಿ ನೀಡಿರೋ ಡೆಡಿಕೇಶನ್ ಮತ್ತು ಕಮಿಟ್​ಮೆಂಟ್​. ಕಟ್ಟು ಮಸ್ತಾದ ಬಾಡಿ ಹೊಂದಿರುವ ಧ್ರುವ ಸರ್ಜಾ, ಸ್ಕೂಲ್ ಬಾಯ್​ ಪಾತ್ರಕ್ಕಾಗಿ 35 ಕೆಜಿ ತೂಕ ಕಡಿಮೆಗೊಳಿಸಿ, ನಂತರ ಹೆಚ್ಚು ಮಾಡಿಕೊಂಡಿದ್ದರು. ಇನ್ನು ಪೊಗರು ನಾಯಕಿ ನ್ಯಾಶನಲ್​ ಕ್ರಷ್​ ರಷ್ಮಿಕಾ ಮಂದಣ್ಣ ಮೊದಲೇ ಲಕ್ಕಿ ಚಾರ್ಮ್​. ಇವರಿಬ್ಬರ ಜೋಡಿ ಮ್ಯಾಜಿಕ್​ ಮಾಡೋದ್ರಲ್ಲಿ ಅನುಮಾನವೇ ಇಲ್ಲ.

ಹಾಗೇ, ಪೊಗರು ಚಿತ್ರದ ಮತ್ತೊಂದು ವಿಶೇಷ ಎಂದರೆ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಅಂತಾರಾಷ್ಟ್ರೀಯ ಬಾಡಿಬಿಲ್ಡರ್​ಗಳಾದ ಮೊರ್ಗನ್​, ಆಸ್ಟೆ, ಕೈ ಗ್ರೀನ್, ಜಾನ್​ ಲೂಕಾಸ್​. ಇವರೆಲ್ಲ ಕ್ಲೈಮ್ಯಾಕ್ಸ್​ ಆಯಕ್ಷನ್​ ಸೀನ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಂಡಲ್​ವುಡ್​ನ ಖಳನಟನ ಪಾತ್ರದಲ್ಲಿ ಮಿಂಚಲಿದ್ದಾರೆ. ಸ್ಯಾಂಡಲ್​​ವುಡ್​ ಡಾಲಿ ಖಳನಟನ ಪಾತ್ರ ನಿರ್ವಹಿಸಿದ್ದಾರೆ. ನಟ ರಾಘವೇಂದ್ರ ರಾಜ್​ಕುಮಾರ್​ ಅವರು ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. ಈಗಲೇ ಪೊಗರು ಭರ್ಜರಿ ಹವಾ ಸೃಷ್ಟಿಸಿದ್ದು, ಸ್ಯಾಂಡಲ್​ವುಡ್​, ಟಾಲಿವುಡ್​, ಕಾಲಿವುಡ್ ಬಾಕ್ಸ್​ ಆಫೀಸ್​ಗಳಲ್ಲಿ ಯಶ ಗಳಿಸುವ ನಿರೀಕ್ಷೆ ಹುಟ್ಟಿಸಿದೆ.


Spread the love

About Laxminews 24x7

Check Also

ಬೆಂಗಳೂರಿನಲ್ಲಿ ಕೃತಕ ನೀರಿನ ಕೊರತೆ: ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಬೆಲ್ಲದ್ ಆರೋಪ

Spread the loveಹುಬ್ಬಳ್ಳಿ, ಏಪ್ರಿಲ್ 18: ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಇದೇ ವಿಚಾರವಾಗಿ ರಾಜಕೀಯ ಪಕ್ಷಗಳು ಕೆಸರೆರಚಾಟ ಮುಂದುವರೆಸಿವೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ