Breaking News

ಅಪ್ಪನ ಸಿನಿಮಾದ ಟ್ರೈಲರ್ ರಿಲೀಸ್ ಮಾಡುತ್ತಿದ್ದಾನೆ ಜೂ.ಚಿರು

Spread the love

ನಟ ಚಿರಂಜೀವಿ ಸರ್ಜಾ ನಟನೆಯ ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ಚಿರು ಇಲ್ಲದಿದ್ದರೂ ಅವರ ಸಿನಿಮಾಗಳ ಮೇಲಿನ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಸದ್ಯ ರಿಲೀಸ್ ಗೆ ರೆಡಿಯಾಗಿರುವ ರಾಜಮಾರ್ತಾಂಡ ಸಿನಿಮಾದ ಮೇಲು ನಿರೀಕ್ಷೆ ಹೆಚ್ಚಾಗಿದೆೆ.

ವಿಶೇಷ ಎಂದರೆ ರಾಜಮಾರ್ತಂಡ ಸಿನಿಮಾದ ಟ್ರೈಲರ್ ಅನ್ನು ವಿಶೇಷ ಅತಿಥಿಯೊಬ್ಬರು ಬಿಡುಗಡೆ ಮಾಡುತ್ತಿದ್ದಾರೆ. ಮತ್ಯಾರು ಅಲ್ಲ ಚಿರಂಜೀವಿ ಮತ್ತು ಮೇಘನಾ ರಾಜ್ ಪುತ್ರ ಜೂ.ಚಿರು. ಪುಟ್ಟ ಪೋರ ಜೂ ಚಿರು ಅಪ್ಪನ ಸಿನಿಮಾದ ಟ್ರೈಲರ್ ಅನ್ನು ರಿಲೀಸ್ ಮಾಡುತ್ತಿರುವುದು ವಿಶೇಷವಾಗಿದೆ.

ನಾಳೆ ಫೆಬ್ರವರಿ 19ಕ್ಕೆ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಈ ಬಗ್ಗೆ ಸ್ವತಃ ಮೇಘನಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ‘ಎಲ್ಲಾ ಅವನ ತಂದೆಗಾಗಿ. ಅಪ್ಪನ ಏಂಜಲ್, ರಾಜಮಾರ್ತಾಂಡ ಟ್ರೈಲರ್ ಅನ್ನು ನನ್ನ ಮಗ ನಾಳೆ ಬಿಡುಗಡೆ ಮಾಡಲಿದ್ದಾನೆ’ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ನಟ ಯಶ್‌ ತಾಯಿ ಹಾಸನ ಸೈಟ್‌ ಜಟಾಪಟಿ – ಕಾಂಪೌಂಡ್‌ ಕೆಡವಿದ್ದ ಮಾಲೀಕನ ಜೊತೆ ವಾಗ್ವಾದ

Spread the loveಹಾಸನ: ರಾಕಿಂಗ್ ಸ್ಟಾರ್ ಯಶ್  ತಾಯಿ ಮನೆ ಸಮೀಪದ ನಿವೇಶನ ಮಾಲೀಕತ್ವ‌ ಜಟಾಪಟಿ ಮತ್ತೆ ಸುದ್ದಿಯಾಗಿದೆ. ಯಶ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ