Breaking News
Home / ರಾಜಕೀಯ / ಇಂದು ಐಪಿಎಲ್‌ ಮಿನಿ ಹರಾಜು; 61 ಸ್ಥಾನಕ್ಕೆ 292 ಕ್ರಿಕೆಟಿಗರ ರೇಸ್‌

ಇಂದು ಐಪಿಎಲ್‌ ಮಿನಿ ಹರಾಜು; 61 ಸ್ಥಾನಕ್ಕೆ 292 ಕ್ರಿಕೆಟಿಗರ ರೇಸ್‌

Spread the love

ಚೆನ್ನೈ: ಬಹು ನಿರೀಕ್ಷೆಯ 14ನೇ ಐಪಿಎಲ್‌ ಪಂದ್ಯಾವಳಿಗಾಗಿ ಗುರುವಾರ ಚೆನ್ನೈಯಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇಲ್ಲಿನ “ಐಟಿಸಿ ಗ್ರ್ಯಾಂಡ್‌ ಚೋಳ ಹೊಟೇಲ್‌’ನಲ್ಲಿ ಅಪರಾಹ್ನ ಮೂರರಿಂದ ಹರಾಜು ಆರಂಭವಾಗಲಿದ್ದು, ನೇರ ಪ್ರಸಾರ ಸ್ಟಾರ್‌ ಸ್ಪೋರ್ಟ್ಸ್ ನಲ್ಲಿರಲಿದೆ. ಎಲ್ಲ ತಂಡಗಳು ತಮ್ಮ ಸೀಮಿತ ಮೊತ್ತದ ಚೌಕಟ್ಟಿನಲ್ಲಿ ಸ್ಟಾರ್‌ ಆಟಗಾರರನ್ನು ಖರೀದಿಸಲು ಪೈಪೋಟಿಗೆ ಇಳಿಯಲಿವೆ. 8 ಫ್ರಾಂಚೈಸಿಗಳಿಗೆ ಒಟ್ಟು 61 ಆಟಗಾರರ ಅಗತ್ಯವಿದೆ. ರೇಸ್‌ನಲ್ಲಿರುವವರು 292 ಮಂದಿ. ಇದರಲ್ಲಿ ಭಾರತದ 164, ವಿದೇಶದ 125 ಮತ್ತು ಅಸೋಸಿಯೇಟ್‌ ಸದಸ್ಯ ರಾಷ್ಟ್ರಗಳ ಮೂವರಿದ್ದಾರೆ. ಪ್ರತಿಯೊಂದು ತಂಡದಲ್ಲಿ 25 ಮಂದಿ ಆಟಗಾರರಿಗಷ್ಟೇ ಅವಕಾಶ. ಇದರಲ್ಲಿ ವಿದೇಶಿ ಕ್ರಿಕೆಟಿಗರ ಸಂಖ್ಯೆ 8ಕ್ಕೆ ಸೀಮಿತ ಎಂಬುದು ಐಪಿಎಲ್‌ ನಿಯಮ. ಯಾವ ಫ್ರಾಂಚೈಸಿಯ ಪರ್ಸ್‌ನಲ್ಲಿ ಎಷ್ಟು ಹಣವಿದೆ, ಇವರಿಗೆ ಬೇಕಿರುವ ಆಟಗಾರರ ಸಂಖ್ಯೆ ಎಷ್ಟು, ಇದರಲ್ಲಿ ವಿದೇಶಿ ಆಟಗಾರರು ಎಷ್ಟು ಎಂಬುದರ ಕಿರುನೋಟ ಇಲ್ಲಿದೆ.

1. ರಾಜಸ್ಥಾನ್‌ ರಾಯಲ್ಸ್‌
ಹೊಂದಿರುವ ಹಣ: 37.85 ಕೋಟಿ ರೂ.
ಬೇಕಿರುವ ಆಟಗಾರರು: 9 (ವಿದೇಶಿಗರು 3)
ಈಗಿನ ಪ್ರಮುಖ ಆಟಗಾರರು: ಸಂಜು ಸ್ಯಾಮ್ಸನ್‌ (ನಾಯಕ), ಸ್ಟೋಕ್ಸ್‌, ಬಟ್ಲರ್‌, ರಾಹುಲ್‌ ತೆವಾತಿಯಾ, ಜೋಫÅ ಆರ್ಚರ್‌, ಉನಾದ್ಕತ್‌, ತ್ಯಾಗಿ.
ಸಂಭಾವ್ಯ ಟಾರ್ಗೆಟ್‌: ಕೇದಾರ್‌, ಗುರುಕೀರತ್‌ ಮಾನ್‌, ದುಬೆ, ನಥನ್‌ ಕೋಲ್ಟರ್‌ ನೈಲ್‌, ಉಮೇಶ್‌ ಯಾದವ್‌, ಹರ್ಭಜನ್‌ ಸಿಂಗ್‌, ಎಲ್‌. ಮರಿವಾಲಾ, ಚೇತನ್‌ ಸಕಾರಿಯಾ.

2. ಚೆನ್ನೈ ಸೂಪರ್‌ ಕಿಂಗ್ಸ್‌
ಹೊಂದಿರುವ ಹಣ: 19.90 ಕೋಟಿ ರೂ.
ಬೇಕಿರುವ ಆಟಗಾರರು: 6 (ವಿದೇಶಿಗರು 1)
ಈಗಿನ ಪ್ರಮುಖ ಆಟಗಾರು: ಎಂ.ಎಸ್‌. ಧೋನಿ (ನಾಯಕ), ರವೀಂದ್ರ ಜಡೇಜ, ಡ್ವೇನ್‌ ಬ್ರಾವೊ, ಶಾದೂìಲ್‌ ಠಾಕೂರ್‌, ಲುಂಗಿ ಎನ್‌ಗಿಡಿ.
ಸಂಭಾವ್ಯ ಟಾರ್ಗೆಟ್‌: ಮ್ಯಾಕ್ಸ್‌ ವೆಲ್‌, ಮೊಯಿನ್‌ ಅಲಿ, ಅಲೆಕ್ಸ್‌ ಹೇಲ್ಸ್‌/ಜಾಸನ್‌ ರಾಯ್‌/ಡೇವಿಡ್‌ ಮಾಲನ್‌/ಫಿಂಚ್‌, ಎಲ್‌. ಮರಿವಾಲಾ, ಚೇತನ್‌ ಸಕಾರಿಯಾ, ಕೆ. ಗೌತಮ್‌, ದುಬೆ, ಸ್ಯಾಮ್‌ ಬಿಲ್ಲಿಂಗ್ಸ್‌.

3. ಪಂಜಾಬ್‌ ಕಿಂಗ್ಸ್‌
ಹೊಂದಿರುವ ಹಣ: 53.20 ಕೋಟಿ ರೂ.
ಬೇಕಿರುವ ಆಟಗಾರರು: 9 (ವಿದೇಶಿಗರು 5)
ಈಗಿನ ಪ್ರಮುಖ ಆಟಗಾರರು: ಕೆ.ಎಲ್‌. ರಾಹುಲ್‌ (ನಾಯಕ), ಕ್ರಿಸ್‌ ಗೇಲ್‌, ಮಾಯಾಂಕ್‌ ಅಗರ್ವಾಲ್‌, ರವಿ ಬಿಶ್ನೋಯಿ, ಮನ್‌ದೀಪ್‌ ಸಿಂಗ್‌, ಶಮಿ.
ಸಂಭಾವ್ಯ ಟಾರ್ಗೆಟ್‌: ಶಕಿಬ್‌, ಮಾರಿಸ್‌, ಕಟಿಂಗ್‌, ಡಿ. ಕ್ರಿಸ್ಟಿಯನ್‌, ಜೇ ರಿಚರ್ಡ್‌ಸನ್‌, ಮುಸ್ತಫಿಜುರ್‌, ಸ್ಟೀವ್‌ ಸ್ಮಿತ್‌, ಮೊಯಿನ್‌ ಅಲಿ, ಹರ್ಭಜನ್‌, ಮಾನ್‌, ರಜಪೂತ್‌, ಉಮೇಶ್‌ ಯಾದವ್‌, ವಿಷ್ಣು ಸೋಲಂಕಿ.

4. ಕೋಲ್ಕತಾ ನೈಟ್‌ರೈಡರ್
ಹೊಂದಿರುವ ಹಣ: 10.75 ಕೋಟಿ ರೂ.
ಬೇಕಿರುವ ಆಟಗಾರರು: 8 (ವಿದೇಶಿಗರು 2)
ಈಗಿನ ಪ್ರಮುಖ ಆಟಗಾರರು: ಇಯಾನ್‌ ಮಾರ್ಗನ್‌ (ನಾಯಕ), ಗಿಲ್‌, ನಿತೀಶ್‌ ರಾಣಾ, ರಸೆಲ್‌, ಕಮಿನ್ಸ್‌, ನಾರಾಯಣ್‌.
ಸಂಭಾವ್ಯ ಟಾರ್ಗೆಟ್‌: ಬೆಹ್ರೆಂ ಡಾರ್ಫ್‌, ಮುಸ್ತಫಿಜುರ್‌, ಡೇವಿಡ್‌ ವಿಲ್ಲಿ, ಜೇ ರಿಚರ್ಡ್‌ಸನ್‌, ಜಾಮೀಸನ್‌, ಉಮೇಶ್‌ ಯಾದವ್‌, ರಜಪೂತ್‌, ಎಂ. ಸಿದ್ಧಾರ್ಥ್, ಎಂ. ಅಜರುದ್ದೀನ್‌, ಅವಿ ಬರೋಟ್‌.

5. ಆರ್‌ಸಿ ಬೆಂಗಳೂರು
ಹೊಂದಿರುವ ಹಣ: 35.40 ಕೋಟಿ ರೂ.
ಬೇಕಿರುವ ಆಟಗಾರರು: 11 (ವಿದೇಶಿಗರು 3)
ಈಗಿನ ಪ್ರಮುಖ ಆಟಗಾರರು: ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್, ದೇವದತ್ತ ಪಡಿಕ್ಕಲ್‌, ವಾಷಿಂಗ್ಟನ್‌ ಸುಂದರ್‌, ಸಿರಾಜ್‌.
ಸಂಭಾವ್ಯ ಟಾರ್ಗೆಟ್‌: ಮ್ಯಾಕ್ಸ್‌ವೆಲ್‌, ಶಕಿಬ್‌, ಸ್ಮಿತ್‌, ಕ್ರಿಸ್ಟಿಯನ್‌, ಮಾರಿಸ್‌, ಕೋಲ್ಟರ್‌ ನೈಲ್‌, ಜಾಮೀಸನ್‌, ಮುಸ್ತಫಿಜುರ್‌, ಶಾರೂಖ್‌ ಖಾನ್‌, ದುಬೆ, ಎಂ. ಅಜರುದ್ದೀನ್‌, ವಿಷ್ಣು ಸೋಲಂಕಿ.

6. ಸನ್‌ರೈಸರ್ ಹೈದರಾಬಾದ್‌
ಹೊಂದಿರುವ ಹಣ: 10.75 ಕೋಟಿ ರೂ.
ಬೇಕಿರುವ ಆಟಗಾರರು: 3 (ವಿದೇಶಿಗರು 1)
ಈಗಿನ ಪ್ರಮುಖ ಆಟಗಾರರು: ಡೇವಿಡ್‌ ವಾರ್ನರ್‌ (ನಾಯಕ), ವಿಲಿಯಮ್ಸನ್‌, ಬೇರ್‌ಸ್ಟೊ, ಮನೀಷ್‌ ಪಾಂಡೆ, ಜಾಸನ್‌ ಹೋಲ್ಡರ್‌, ಮೊಹಮ್ಮದ್‌ ನಬಿ, ರಶೀದ್‌ ಖಾನ್‌.
ಸಂಭಾವ್ಯ ಟಾರ್ಗೆಟ್‌: ರಿಲೀ ಮೆರೆಡಿತ್‌, ಮಾರ್ಕ್‌ ವುಡ್‌, ಒಶೇನ್‌ ಥಾಮ್ಸನ್‌, ಕೋಲ್ಟರ್‌ ನೈಲ್‌, ಮ್ಯಾಟ್‌ ಹೆನ್ರಿ, ಶಿವಂ ದುಬೆ, ಕೇದಾರ್‌ ಜಾಧವ್‌.

7. ಡೆಲ್ಲಿ ಕ್ಯಾಪಿಟಲ್ಸ್‌
ಹೊಂದಿರುವ ಹಣ: 13.40 ಕೋಟಿ ರೂ.
ಬೇಕಿರುವ ಆಟಗಾರರು: 8 (ವಿದೇಶಿಗರು 3)
ಈಗಿನ ಪ್ರಮುಖ ಆಟಗಾರು: ಶ್ರೇಯಸ್‌ ಅಯ್ಯರ್‌ (ನಾಯಕ), ಶಿಖರ್‌ ಧವನ್‌, ರಿಷಭ್‌ ಪಂತ್‌, ಶಿಮ್ರನ್‌ ಹೆಟ್‌ಮೈರ್‌, ಆರ್‌. ಅಶ್ವಿ‌ನ್‌, ಕಾಗಿಸೊ ರಬಾಡ.
ಸಂಭಾವ್ಯ ಟಾರ್ಗೆಟ್‌: ಉಮೇಶ್‌, ರಜಪೂತ್‌, ಮರಿವಾಲಾ, ಚೇತನ್‌ ಸಕಾರಿಯಾ, ಮೋಹಿತ್‌ ಶರ್ಮ, ಕ್ರಿಸ್ಟಿಯನ್‌, ಕೋಲ್ಟರ್‌ ನೈಲ್‌, ಮಾರಿಸ್‌, ಎಂ. ಅಜರುದ್ದೀನ್‌, ಅವಿ ಬರೋಟ್‌, ಜಾಕ್ಸನ್‌.

8. ಮುಂಬೈ ಇಂಡಿಯನ್ಸ್‌
ಹೊಂದಿರುವ ಹಣ: 15.35 ಕೋಟಿ ರೂ.
ಬೇಕಿರುವ ಆಟಗಾರರು: 7 (ವಿದೇಶಿಗರು 4)
ಈಗಿನ ಪ್ರಮುಖ ಆಟಗಾರರು: ರೋಹಿತ್‌ ಶರ್ಮ (ನಾಯಕ), ಸೂರ್ಯಕುಮಾರ್‌ ಯಾದವ್‌, ಪೊಲಾರ್ಡ್‌, ಬುಮ್ರಾ, ಬೌಲ್ಟ್, ಪಾಂಡ್ಯ.
ಸಂಭಾವ್ಯ ಟಾರ್ಗೆಟ್‌: ಪೀಯೂಷ್‌ ಚಾವ್ಲಾ, ಜೇ ರಿಚರ್ಡ್‌ಸನ್‌, ಕ್ರಿಸ್ಟಿಯನ್‌, ಮೊಯಿನ್‌ ಅಲಿ, ಕೋಲ್ಟರ್‌ ನೈಲ್‌, ಜಾಮೀಸನ್‌, ಟಾಮ್‌ ಕರನ್‌, ಕಟಿಂಗ್‌, ಶಿವಂ ದುಬೆ, ಹರ್ಭಜನ್‌ ಸಿಂಗ್‌.


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ