Breaking News
Home / ರಾಜ್ಯ / ಇಂದಿನ ನಿಮ್ಮ ಗ್ರಹಬಲ

ಇಂದಿನ ನಿಮ್ಮ ಗ್ರಹಬಲ

Spread the love

ಮೇಷ: ಆಕರ್ಷಕವಾದ ದೇಹ ಸೌಂದರ್ಯ ಹಾಗೂ ಒಳ್ಳೆಯ ನಡತೆ, ಸದಾಚಾರ, ಆತ್ಮಚಿಂತನೆ ಹೆಚ್ಚಾಗಿರುವ ನೀವು ಸದಾ ಒಳಿತನ್ನೇ ಬಯಸುವಿರಿ. ಪರರ ದುಃಖ, ಕಾತುರತೆ, ದೃಢ ಮನಸ್ಸಿನ ನೀವು ಕರಗುವಿರಿ.

ವೃಷಭ: ಸತ್ಯವಾದಿಗಳಾಗಿ ಗುರುಹಿರಿಯಲ್ಲಿ ಭಕ್ತಿಯುಳ್ಳ ವರಾಗಿದ್ದ ನೀವು ನೀತಿ ನಿಯಮಗಳಿಗೆ ಬದ್ಧರಾಗುತ್ತೀರಿ. ಪ್ರತ್ಯಕ್ಷವಾಗಲೀ ಪರೋಕ್ಷವಾಗಲೀ ವಂಚನೆಯನ್ನು ಮಾಡಲು ಬಯಸುವುದಿಲ್ಲ.

ಮಿಥುನ: ಉತ್ತಮ ಆತ್ಮಬಲವನ್ನು ಹೊಂದಿರುವ ನೀವು ನಿರ್ದಿಷ್ಟ ಸಂಕಲ್ಪವನ್ನು ಸ್ವಪ್ರಯತ್ನದಿಂದ ಪೂರ್ಣಗೊಳಿಸುವಿರಿ. ದಾಕ್ಷಿಣ್ಯ, ಸಂಕೋಚ ಪ್ರವೃತ್ತಿಯನ್ನು ಸ್ವಲ್ಪ ದೂರ ಮಾಡಿಕೊಳ್ಳಿರಿ. ಶುಭವಿರುತ್ತದೆ.

ಕರ್ಕ: ವೈಯಕ್ತಿಕವಾಗಿ ಕಷ್ಟನಷ್ಟಗಳನ್ನು ಲೆಕ್ಕಿಸದೆ ಪರೋಪಕಾರವನ್ನು ಮಾಡುವ ನಿಮ್ಮ ಮನಸ್ಸು ಸದಾ ಪರರಿಗಾಗಿ ಮಿಡಿಯುವುದು. ವೈಮನಸ್ಸನ್ನು ಪರಿಹರಿಸುವ ಪ್ರವೃತ್ತಿ ನಿಮ್ಮನ್ನು ಮುನ್ನಡೆಸಲಿದೆ.

ಸಿಂಹ: ಸೂಕ್ಷ್ಮಗ್ರಾಹಿಗಳೂ ಮತ್ತು ಪ್ರೀತಿ ಪುರಸ್ಸರವಾದ ನಡವಳಿಕೆಯನ್ನು ಜೀವನದಲ್ಲಿ ಹೊಂದಿರುತ್ತೀರಿ. ಎಂತಹ ಪರಿಸ್ಥಿತಿಯಲ್ಲೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಕಿರು ಸಂಚಾರ ಒದಗಿ ಬರುವುದು.

ಕನ್ಯಾ: ಗುರು ಕಾರುಣ್ಯದಿಂದ ನಿಮ್ಮೆಣಿಕೆಯ ಎಲ್ಲಾ ಕೆಲಸ ಕಾರ್ಯಗಳು ನೆರವೇರಲಿದೆ. ಧನವಿನಿಯೋಗದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುರಿ. ಗೃಹಕೃತ್ಯದಲ್ಲಿ ಖರ್ಚುವೆಚ್ಚ ಗಳನ್ನು ನಿಯಂತ್ರಿಸುವುದು.

ತುಲಾ: ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಹೊಂದಿಯಾರು. ಆದರೂ ಪ್ರಯತ್ನಬಲದಿಂದ ಅಧಿಕ ಲಾಭವನ್ನು ಹೊಂದುವಿರಿ. ವಿಳಂಬವಾದರೂ ಉತ್ತಮವಾಗಲಿದೆ. ಪತ್ನಿ, ಮಕ್ಕಳಿಂದ ಸಮಾಧಾನ ಸಿಗಲಿದೆ.

ವೃಶ್ಚಿಕ: ವೈವಾಹಿಕ ಜೀವನದಲ್ಲಿ ಅಸ್ತವ್ಯಸ್ತತೆ, ಭಿನ್ನಾಭಿಪ್ರಾಯಗಳಿಂದ ಕಲಹ ತಂದೀತು. ವೃತ್ತಿರಂಗದಲ್ಲಿ ಮೇಲಾಧಿಕಾರಿ ವರ್ಗದವರಿಂದ ಕಿರಿಕಿರಿಯು ಕಂಡು ಬರಲಿದೆ. ಪ್ರಯಾಣದಲ್ಲಿ ಅಡಚಣೆ ಕಂಡುಬರಬಹುದು.

ಧನು: ಅನಾರೋಗ್ಯದ ದಿನವಿದು. ಶೈಕ್ಷಣಿಕ ವೃತ್ತಿಯವರಿಗೆ ಆರ್ಥಿಕವಾಗಿ ತೊಂದರೆಗಳು ಕಂಡು ಬರಲಿವೆ. ಮಂಗಲ ಕಾರ್ಯಗಳ ಮಾತುಕತೆಗೆ ಅಡ್ಡಿ ಆತಂಕಗಳು ಎದುರಾದವು. ಸಹನೆಯ ಅಗತ್ಯವಿದೆ.

ಮಕರ: ಅನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯು ಕಂಡುಬರುವುದು. ವಿದ್ಯಾರ್ಥಿಗಳಿಗಂತೂ ವಿದ್ಯಾಭ್ಯಾಸದಲ್ಲಿ ಸ್ವಪ್ರಯತ್ನದಿಂದಲೇ ಮುಂದುವರಿಕೆ ಅನಿವಾರ್ಯವಾದೀತು. ರಾಜಕೀಯದವರಿಗೆ ವಿರೋಧಗಳಿವೆ.

ಕುಂಭ: ಹಲವು ಬಾರಿ ಅವಮಾನ, ಅಪವಾದ ಪ್ರಸಂಗಗಳು ಎದುರಾದರೂ ಅದನ್ನು ಧೈರ್ಯಗುಂದದೆ ಎದುರಿಸುವುದು. ಮುಖ್ಯವಾಗಿ ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸ, ಚಾಣಾಕ್ಷತನ ನಿಮ್ಮನ್ನು ಕಾಪಾಡಲಿದೆ.

ಮೀನ: ನಿಮ್ಮ ಕೆಲಸಕಾರ್ಯಗಳಿಗೆ ಪೂರಕವಾದ ವಾತಾವರಣವು ಕಂಡುಬರುವುದು. ಕೌಟುಂಬಿಕವಾಗಿ ಬಂಧುಮಿತ್ರರೇ ಶತ್ರುಗಳಾದಾರು. ನೀವು ದೃಢ ಮನಸ್ಸಿಂದ ಮುನ್ನಡೆದರೆ ನಿಮ್ಮ ಕೆಲಸವಾಗಲಿದೆ.

ಎನ್‌.ಎಸ್‌. ಭಟ್‌


Spread the love

About Laxminews 24x7

Check Also

ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ: ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ ಪತಿ!

Spread the love ಮೈಸೂರು: ಫಾಸ್ಟ್ ಹಾಗೂ ಬ್ಯೂಸಿ ಲೈಫ್ ಇಂದಿನ ಯುವ ದಂಪತಿಗಳು ರೆಡಿ ಟು ಈಟ್ ಫುಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ