Breaking News

ದಿಯಾ ಮಿರ್ಜಾ ಗೆ ಎರಡನೇ ಮದುವೆ: ವರ ಯಾರು ಗೊತ್ತೆ?

Spread the love

2001 ರಲ್ಲಿ ಬಿಡುಗಡೆ ಆದ ‘ರೆಹನಾ ಹೇ ತೇರಿ ದಿಲ್‌ ಮೇ’ ಮೂಲಕ ಬಾಲಿವುಡ್ ಪ್ರವೇಶಿಸಿದ ನಟಿ ದಿಯಾ ಮಿರ್ಜಾ ಆ ನಂತರ ಹಲವು ವರ್ಷ ಬಾಲಿವುಡ್‌ನ ಖ್ಯಾತ ನಟಿಯಾಗಿ ಮೆರೆದರು.

ಇದೀಗ ಸಹನಟಿಯಾಗಿ, ನಿರ್ಮಾಪಕಿಯಾಗಿ ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ದಿಯಾ ಮಿರ್ಜಾ, ಮೊದಲ ಮದುವೆಯಿಂದ 2019 ರಲ್ಲಿ ವಿಚ್ಛೇಧನ ಪಡೆದಿದ್ದು, ಎರಡು ವರ್ಷದ ಒಂಟಿ ಜೀವನದ ಬಳಿಕ ಈಗ ಮತ್ತೆ ಮದುವೆ ಆಗಲು ತಯಾರಾಗಿದ್ದಾರೆ.

ದಿಯಾ ಮಿರ್ಜಾ 2014 ರಲ್ಲಿ ತಮ್ಮ ಬ್ಯುಸಿನೆಸ್ ಪಾರ್ಟನ್ ಆಗಿದ್ದ ಸಾಹಿಲ್ ಸಂಘಾ ಅವರೊಟ್ಟಿಗೆ ಮದುವೆಯಾದರು. ಅದಾದ ಬಳಿಕ 2019 ರಲ್ಲಿ ಇಬ್ಬರೂ ಬೇರಾದರು. ಇದೀಗ ಮತ್ತೆ ಮದುವೆ ಆಗುತ್ತಿದ್ದಾರೆ ಈ ನಟಿ.

40 ವರ್ಷ ವಯಸ್ಸಿನ ನಟಿ ದಿಯಾ ಮಿರ್ಜಾ ವೈಭವ್ ರೇಖಿ ಜೊತೆಗೆ ಸರಳವಾದ ಖಾಸಗಿ ಸಮಾರಂಭದಲ್ಲಿ ಮದುವೆ ಆಗುತ್ತಿದ್ದಾರೆ. ಇವರ ಮದುವೆ ಇಂದೇ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ದಿಯಾ ಮಿರ್ಜಾ ಹೇಳಿಕೆ ನೀಡಿಲ್ಲ.

ದಿಯಾ ಮಿರ್ಜಾ ಮದುವೆ ಆಗುತ್ತಿರುವ ವೈಭವ್ ರೇಖಿ ಮುಂಬೈನಲ್ಲಿ ಉದ್ಯಮಿ ಆಗಿದ್ದಾರೆ. ಪಿರಾಮಲ್ ಫಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲೀಕರಾಗಿದ್ದಾರೆ. ಈ ಮೊದಲು ಯೋಗ ತರಬೇತುದಾರ್ತಿ ಸುನೈನಾ ರೇಖಿ ಜೊತೆಗೆ ವಿವಾಹವಾಗಿದ್ದರು. ವಿಚ್ಛೇದನ ಪಡೆದ ಬಳಿಕ ಈಗ ದಿಯಾ ಜೊತೆ ವಿವಾಹವಾಗುತ್ತಿದ್ದಾರೆ. ವೈಭವ್ ಗೆ ಮಗಳು ಸಹ ಇದ್ದಾಳೆ.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ