Breaking News
Home / ರಾಜ್ಯ / ನಮ್ಮ ಮೆಟ್ರೋ ರೈಲಿನಲ್ಲಿ ಮತ್ತೆ ನಗದು ಪಾವತಿ ವ್ಯವಸ್ಥೆಗೆ ಆಗ್ರಹ

ನಮ್ಮ ಮೆಟ್ರೋ ರೈಲಿನಲ್ಲಿ ಮತ್ತೆ ನಗದು ಪಾವತಿ ವ್ಯವಸ್ಥೆಗೆ ಆಗ್ರಹ

Spread the love

ಬೆಂಗಳೂರು,ಫೆಬ್ರವರಿ 15:ಕೊರೊನಾ ಲಾಕ್‌ಡೌನ್‌ನಿಂದಾಗಿ ನಮ್ಮ ಮೆಟ್ರೋ ಸಂಚಾರವನ್ನು ಹಲವು ತಿಂಗಳುಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ಇದೀಗ ಸೇವೆ ಪುನಾರಂಭಗೊಂಡಿದ್ದು, ಪ್ರತಿಯೊಬ್ಬರಿಗೂ ಕಾರ್ಡ್‌ ಪಡೆದು ಪ್ರಯಾಣಿಸುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಟೋಕನ್ ಹಾಗೂ ನಗದು ಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು ಎನ್ನುವ ಆಗ್ರಹ ಕೇಳಿಬಂದಿದೆ.

ಮೆಟ್ರೋ ರೈಲು ಸೇವೆ ಪಡೆಯಬೇಕಾದರೆ 50 ರೂ. ನೀಡಿ ಮೆಟ್ರೋ ಕಾರ್ಡ್ ಖರೀದಿಸಿದ ಬಳಿಕವಷ್ಟೇ ಸೇವೆ ಲಭ್ಯವಾಗಲಿದೆ.ಕಾರ್ಡ್ ಖರೀದಿ ವೇಳೆಯೂ ನಗದು ಸ್ವೀಕರಿಸುತ್ತಿಲ್ಲ, ಬದಲಾಗಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಅಥವಾ ಆನ್‌ಲೈನ್ ಹಣ ವರ್ಗಾವಣೆ ಪೋರ್ಟಲ್‌ಗಳಾದ ಗೂಗಲ್ ಪೇ,ಫೋನ್‌ ಪೇಯನ್ನೇ ಅವಲಂಬಿಸಬೇಕಿದೆ. ಇದರಿಂದ ಇಲ್ಲಿಯವರೆಗೂ ನಗದು ಪಾವತಿ ಮಾಡುತ್ತಿದ್ದವರುಅನಿವಾರ್ಯವಾಗಿ ಆನ್‌ಲೈನ್ ಪೇಮೆಂಟ್ ಮಾಡಬೇಕಿದೆ.

ಈ ಕುರಿತು ಬಿಎಂಆರ್‌ಸಿಎಲ್ ಪ್ರತಿಕ್ರಿಯಿಸಿ ಈಗಾಗಲೇ ದೆಹಲಿ ಮೆಟ್ರೋ ಸೇರಿದಂತೆ ದೇಶದ ವಿವಿಧ ಮೆಟ್ರೋ ರೈಲು ನಿಗಮಗಳು ನಗದು ಪಾವತಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿವೆ. ಕೇಂದ್ರ ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ.ಶೀಘ್ರದಲ್ಲಿಯೇ ನಗದು ಪಾವತಿಗೆ ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್ ಬಳಿಕ ಮೆಟ್ರೋ ಸೇವೆ ಪುನರಾರಂಭಗೊಳಿಸಿದ ಸಂದರ್ಭದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸುವುದಕ್ಕಾಗಿ ಟೋಕನ್ ಬಳಸುತ್ತಿರಲಿಲ್ಲ.

ಸೆಪ್ಟೆಂಬರ್ ತಿಂಗಳಿನಲ್ಲಿಮೆಟ್ರೋ ಸೇವೆ ಆರಂಭವಾಗಿದ್ದು,ಸೇವೆ ಆರಂಭಗೊಂಡು ಐದು ತಿಂಗಳು ಕಳೆದಿದೆ. ಅದೇ ನಿಯಮವನ್ನೇ ಮೆಟ್ರೋ ನಿಗಮ ಮುಂದುವರೆಸಿದೆ.

ಇದರಿಂದ ದಿನಗೂಲಿ ನೌಕರರು, ಬ್ಯಾಂಕ್ ಖಾತೆ ಹೊಂದಿಲ್ಲದವರಿಗೆ , ಸ್ಮಾರ್ಟ್ ಫೋನ್ ಬಳಕೆ ಮಾಡದವರಿಗೆ ತೊಂದರೆಯಾಗುತ್ತಿದೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ