Home / ರಾಜ್ಯ / ದಿಶಾ ರವಿ ಬಂಧನ ಖಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್

ದಿಶಾ ರವಿ ಬಂಧನ ಖಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್

Spread the love

ನವದೆಹಲಿ, ಫೆ.15 (ಪಿಟಿಐ)- ಟೂಲ್‍ಕಿಟ್ ಡಾಕ್ಯುಮೆಂಟ್ ಪ್ರಕರಣದಲ್ಲಿ ಹವಾಮಾನ ಚಳವಳಿಗಾರ ದಿಶಾ ರವಿ ಅವರ ಬಂಧನವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಂಡಿಸಿದ್ದಾರೆ. ರವಿ ಅವರ ಮೇಲಿನ ನಡೆ ನಮ್ಮ ದೇಶದ ಪ್ರಜಾಪ್ರಭುತ್ವದ ಮೇಲೆ ಹಿಂದೆಂದು ಕಂಡಿರದ ಅಭೂತಪೂರ್ವ ದಾಳಿಯಾಗಿದೆ ಎಂದರು.

ರೈತರ ಪ್ರತಿಭಟನೆಗೆ ಸಂಬಂಸಿದ ಟೂಲ್‍ಕಿಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ 21 ವರ್ಷದ ಚಳವಳಿಗಾರನನ್ನು ಶನಿವಾರ ಬೆಂಗಳೂರಿನಿಂದ ಬಂಸಲಾಗಿದೆ. ದಿಶಾ ರವಿ ಬಂಧನವು ಪ್ರಜಾಪ್ರಭುತ್ವದ ಮೇಲೆ ಅಭೂತಪೂರ್ವ ದಾಳಿಯಾಗಿದೆ. ನಮ್ಮ ರೈತರಿಗೆ ಬೆಂಬಲ ವ್ಯಕ್ತಪಡಿಸುವುದು ಅಪರಾಧವಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಕಾಲೇಜಿನಿಂದ ಬಿಸಿನೆಸ್ ಅಡ್ಮಿನಿಸ್ಟೇಷನ್‍ನಲ್ಲಿ ಪದವಿ ಪಡೆದಿರುವ ದಿಶಾ ರವಿ, ಫ್ರೈಡೇಸ್ ಫಾರ್ ಫ್ಯೂಚರ್ ಇಂಡಿಯಾ ಎಂಬ ಗುಂಪಿನ ಸ್ಥಾಪಕ ಸದಸ್ಯರಲ್ಲಿ ಒಬ್ಬ ಎಂದು ತಿಳಿದುಬಂದಿದೆ. ಕೆಲವು ವಿಮರ್ಶಕರು ಟೂಲ್‍ಕಿಟ್ ಅನ್ನು ಭಾರತದಲ್ಲಿ ಪ್ರತಿಭಟನೆಗಳನ್ನು ಉತ್ತೇಜಿಸುವ ಪಿತೂರಿಯ ಪುರಾವೆ ಇದಾಗಿದೆ ಎಂದು ಉಲ್ಲೇಖಿಸಿದ್ದಾರೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ