Breaking News
Home / ರಾಜ್ಯ / ಸಖತ್ ವೈರಲ್ ಆದ ಈ ವೆಡ್ಡಿಂಗ್ ಮೆನು ವಿಶೇಷತೆ ಏನು ಗೊತ್ತಾ..?

ಸಖತ್ ವೈರಲ್ ಆದ ಈ ವೆಡ್ಡಿಂಗ್ ಮೆನು ವಿಶೇಷತೆ ಏನು ಗೊತ್ತಾ..?

Spread the love

ಕೋಲ್ಕತ್ತಾ: ಆಧಾರ್ ಕಾರ್ಡ್ ಪಡೆಯುವುದು ಅದರಲ್ಲಿನ ಮಾಹಿತಿ ತಿದ್ದುಪಡಿ ಮಾಡಿಸುವುದೆಂದರೆ ದೊಡ್ಡ ಸಾಹಸವೇ ಸರಿ. ಆಧಾರ್ ಕೇಂದ್ರಗಳ ಮುಂದೆ ಉದ್ದದ ಕ್ಯೂ ಇರುವುದನ್ನು ಕಾಯಂ ಕಾಣುತ್ತೇವೆ. ಆದರೆ, ಇವರ ಮದುವೆಗೆ ಬಂದವರಿಗೆಲ್ಲ ಸುಲಭವಾಗಿ ಆಧಾರ್ ಕಾರ್ಡ್ ಸಿಕ್ಕಿದೆ.!!!!

ಹೌದು, ಕೊಲ್ಕತ್ತಾದ ಗೋಗೋಲ್ ಶಹಾ ಹಾಗೂ ಸುಬರ್ನಾ ದಾಸ್ ಈ ವಾರದ ಪ್ರಾರಂಭದಲ್ಲಿ ವಿವಾಹವಾದರು. ಅವರ ಮದುವೆಗೆ ಹೋದವರಿಗೆಲ್ಲ ಆಧಾರ್ ಕಾರ್ಡ್ ನೀಡಲಾಗಿತ್ತು. ಆದರೆ, ಕಾರ್ಡ್ ನಿಜವಾದುದಲ್ಲ. ಮದವೆಯ ಊಟದಲ್ಲಿದ್ದ ತಿಂಡಿಗಳ ಮೆನು ಅದರಲ್ಲಿತ್ತು. ಪಕ್ಕಾ ಆಧಾರ್ ಕಾರ್ಡ್ ಮಾದರಿಯಲ್ಲೇ ಡಿಸೈನ್ ಮಾಡಿ ಮೆನು ಮುದ್ರಿಸಲಾಗಿತ್ತು.

ಫೇಸ್‌ಬುಕ್‌ನಲ್ಲಿ ಈ ಆಧಾರ್ ವೆಡ್ಡಿಂಗ್ ಮೆನು ಸಖತ್ ವೈರಲ್ ಆಗಿದೆ. ಕಾರ್ಡ್‌ನಲ್ಲಿ ಪೀಸ್ ಕಚೋರಿ, ಫಿಶ್ ಫ್ರೈ, ಮಟನ್ ಖಾಶಾ, ಸ್ಟಫ್ಟ್ಡ್ ಪೊಟ್ಯಾಟೊ ಮುಂತಾದ ತಿಂಡಿಗಳ ಪಟ್ಟಿಯಿದೆ. ಸಂಪರ್ಕ ಸಂಖ್ಯೆ ಹಾಗೂ ಈ ಆಧಾರ್ ಕಾರ್ಡ್ ಒಂದು ದಿನಕ್ಕೆ ಮಾತ್ರ ಊರ್ಜಿತವಾಗಿರಲಿದೆ ಎಂದೂ ಬರೆಯಲಾಗಿದೆ.


Spread the love

About Laxminews 24x7

Check Also

ಬಡವರಿಗಲ್ಲ, ರೈಸ್ ಮಿಲ್‍ಗಳಿಗೆ ಸೇರುತ್ತಿದೆ ‘ಅನ್ನಭಾಗ್ಯ’ ಅಕ್ಕಿ

Spread the loveಕೋಲಾರ: ಬಡವರ ಹಸಿವು ನೀಗಿಸಲು ಸರ್ಕಾರ ಕೊಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಜಿಲ್ಲೆಯ ಬಂಗಾರಪೇಟೆಯ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ