ಬೀದರ್: ನಾನು ಬೀಫ್ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ? ನೀನು ಯಾರಯ್ಯ ಅದನ್ನೆಲ್ಲ ಕೇಳೋದಕ್ಕೆ? ಆಹಾರ ನನ್ನ ಹಕ್ಕು ಯಾವುದನ್ನು ತಿನ್ನಬೇಕು ಎನ್ನುವುದು ನನಗೆ ಬಿಟ್ಟದ್ದು, ಅದನ್ನು ಕೇಳುವುದಕ್ಕೆ ನೀನು ಯಾರು ಅಂತ ನೇರವಾಗಿ ಆಹಾರದ ಬಗ್ಗೆ ಪ್ರಶ್ನೆ ಮಾಡುವವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.ಅವರು ಮಂಗಳವಾರ ಬೀದರ್ ಜಿಲ್ಲೆಯ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ಸಂವಿಧಾನ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, RSSನವರು ಗೋವುಗಳ ಬಗ್ಗೆ ಮಾತಾಡುತ್ತಾರೆ ಅಲ್ವಾ? ಅವರು ಯಾವತ್ತು ಆದ್ರೂ, ಸಗಣಿ, ಗಂಜಲ ಎತ್ತಿದ್ದಾರಾ? ಎಂದು ಮಾರ್ಮಿಕಕವಾಗಿ ಪ್ರಶ್ನೆ ಮಾಡಿದರು. ಇನ್ನೂ ಇದೇ ವೇಳೆ ಅವರು ನನಗೆ ಬೇಕಾಗಿರುವುದನ್ನು ತಿನ್ನುವುದು ನನ್ನ ಆಹಾರದ ಹಕ್ಕು ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಾನು ಬೀಫ್ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ? ನೀನು ಯಾರಯ್ಯ ಅದನ್ನೆಲ್ಲ ಕೇಳೋದಕ್ಕೆ? : ಸಿದ್ದರಾಮಯ್
Spread the love
Spread the love