Home / ಸಿನೆಮಾ / ವಿಂದ್ಯಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡದ ‘ರುದ್ರಿ’ಗೆ ಎರಡು ಪ್ರಶಸ್ತಿ

ವಿಂದ್ಯಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡದ ‘ರುದ್ರಿ’ಗೆ ಎರಡು ಪ್ರಶಸ್ತಿ

Spread the love

ಕನ್ನಡ ಸಿನಿಮಾ ‘ರುದ್ರಿ’ಗೆ ವಿಂದ್ಯಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಎರಡು ಪ್ರಮುಖ ಪ್ರಶಸ್ತಿ ನೀಡಲಾಗಿದೆ.

ಬೀರಬಲ್ಲ ಹುಟ್ಟಿದ ಮಧ್ಯಪ್ರದೇಶದ ಸಿಧಿಯಲ್ಲಿ ಜನವರಿ 8 ರಿಂದ ಜನವರಿ 10 ರ ವರೆಗೆ ವಿಂದ್ಯಾ ಅಂತರರಾಷ್ಟ್ರೀಯ ಸಿನಿಮೋತ್ಸವ ನಡೆಯಿತು.

ವಿಂದ್ಯಾ ಸಿನಿಮಾ ಉತ್ಸವದಲ್ಲಿ ‘ರುದ್ರಿ’ನಲ್ಲಿ ನಟಿಸಿರುವ ಪಾವನಾ ಗೌಡ ಅವರಿಗೆ ಉತ್ತಮ ನಟಿ ಪ್ರಶಸ್ತಿ ದೊರೆತಿದೆ. ಜೊತೆಗೆ ಸಿನಿಮಾ ಉತ್ಸವದ ಎರಡನೇ ಅತ್ಯುತ್ತಮ ಫೀಚರ್ ಫಿಲಂ ಎಂಬ ಹೆಗ್ಗಳಿಕೆಗೆ ಸಹ ‘ರುದ್ರಿ’ ಭಾಜನವಾಗಿದೆ.

46 ದೇಶಗಳ ಸುಮಾರು 350 ಕ್ಕೂ ಹೆಚ್ಚು ಸಿನಿಮಾಗಳು ಸಿನಿಮಾ ಉತ್ಸವದಲ್ಲಿ ಭಾಗವಹಿಸಿದ್ದವು. ಅಂತಿಮ ಸುತ್ತಿನಲ್ಲಿ ರುದ್ರಿ ಜೊತೆಯಲ್ಲಿ ಇನ್ನೂ 14 ಸಿನಿಮಾಗಳು ಇದ್ದವು. ಕೊನೆಗೆ ‘ರುದ್ರಿ’ ಎರಡನೇ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿಗೆ ಭಾಜನವಾಯಿತು. ಪ್ರಶಸ್ತಿಯನ್ನು ನಿರ್ದೇಶಕ ಬಡಿಗೇರ್ ದೇವೇಂದ್ರ ಸ್ವೀಕರಿಸಿದರು.

‘ರುದ್ರಿ’ ಸಿನಿಮಾಕ್ಕೆ ಪ್ರಶಸ್ತಿ ಬಂದಿದ್ದಕ್ಕೆ ಚಿತ್ರತಂಡ ಅತೀವ ಸಂತಸ ವ್ಯಕ್ತಪಡಿಸಿದ್ದು, ಪ್ರಶಸ್ತಿಯು ಇಡೀಯ ಚಿತ್ರತಂಡದ ಶ್ರಮದ ಫಲ ಎಂದಿದೆ.


Spread the love

About Laxminews 24x7

Check Also

ಪುನೀತ್​ ರಾಜ್​ಕುಮಾರ್ ಅವರು​ ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷ

Spread the love ಕನ್ನಡದ ಹೆಸರಾಂತ ನಟ ಪುನೀತ್​ ರಾಜ್​ಕುಮಾರ್ ಅವರು​ ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷವಾಗುತ್ತಿದೆ. ಪುಣ್ಯಸ್ಮರಣೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ