Breaking News

ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಮೋದಿ ಚಾಲನೆ

Spread the love

ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಮೋದಿ ಚಾಲನೆ
ಪ್ರಧಾನಿ ಮೋದಿಗೆ ಭಾರತ ಭಾಗ್ಯವಿಧಾತ ಬಿರುದು ನೀಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿ
ರಾಮ ಮಂದಿರ ಆಂದೋಲನದಲ್ಲಿ ಉಡುಪಿ ಪಾತ್ರ ಸ್ಮರಿಸಿದ ಮೋದಿ
ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಮೋದಿ ಚಾಲನೆ
ಪ್ರಧಾನಿ ಮೋದಿಗೆ ಭಾರತ ಭಾಗ್ಯವಿಧಾತ
ಬಿರುದು ನೀಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿ
ಲಕ್ಷಕಂಠ ಭಗವದ್ಗೀತಾ ಸಮಾವೇಶದಲ್ಲಿ ಮೋದಿ ಭಾಗಿ
ಲಕ್ಷಕಂಠ ಭಗವದ್ಗೀತಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಕರಾವಳಿಯ ಪುಣ್ಯಭೂಮಿ ಉಡುಪಿಗೆ ಆಗಮಿಸಿ ಕೃಷ್ಣದರ್ಶನ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ‘ಭಾರತ ಭಾಗ್ಯವಿದಾತ’ ಬಿರುದು ನೀಡಿ ಸನ್ಮಾನ ಮಾಡಿದ್ದಾರೆ.
ಉಡುಪಿ ಶ್ರೀಕೃಷ್ಣನ ಮಠಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಪೂಜಾ, ಕೈಂಕರ್ಯಗಳಲ್ಲಿ ಭಾಗಿಯಾಗಿ ಶ್ರೀಕೃಷ್ಣನ ಆಶೀರ್ವಾದ ಪಡೆದುಕೊಂಡರು. ನಂತರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತೀರ್ಥಮಂಟಪ ಅನಾವರಣದಲ್ಲಿ ಪಿಎಂ ಮೋದಿ ಭಾಗಿಯಾದರು. ಬಳಿಕ ಲಕ್ಷಕಂಠ ಪಾರಾಣದಲ್ಲಿ ಭಾಗವಹಿಸಿ 7 ನಿಮಿಷಗಳ ಕಾಲ ಶ್ಲೋಕ ಪಠಣ ಮಾಡಿದ ನರೇಂದ್ರ ಮೋದಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಜೈ ಶ್ರೀಕೃಷ್ಣ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಲ್ಲಿ ಉಡುಪಿ ಪಾತ್ರವನ್ನು ಪ್ರಸ್ತಾಪಿಸಿದ್ದು,
ವಿಶ್ವೇಶ ತೀರ್ಥ ಸ್ವಾಮೀಜಿ ರಾಮ ಮಂದಿರ ಆಂದೋಲನ ನಡೆಸಿದ್ದು ವಿಶ್ವ ಅರಿತಿದೆ.ಅಯೋಧ್ಯೆಯಿಂದ ಉಡುಪಿಯವರೆಗೆ ಅಸಂಖ್ಯ ಸಂಖ್ಯೆಯಲ್ಲಿ ರಾಮ ಭಕ್ತರು ಇದ್ದಾರೆ ಎಂದರು. ನನ್ನ ಜನನ ಗುಜರಾತ್ ನಲ್ಲಿ ಆಗಿದ್ದರೂ ಉಡುಪಿ ಜೊತೆ ಅವಿನಾಭಾವ ಸಂಬಂಧ ಇದೆ.
ಉಡುಪಿಗೆ ಇಂದು ಭೇಟಿ ನೀಡಿದ್ದು ವಿಶಿಷ್ಟ ಅನುಭೂತಿ. ನಾನು ದ್ವಾರಕೆಯಲ್ಲಿ ಹೋಗಿ ಶ್ರೀಕೃಷ್ಣನ ದರ್ಶನ ಪಡೆದಿದ್ದೆ. ಉಡುಪಿಗೆ ಬರುವುದು ಅಂದ್ರೆ ನನಗೆ ಬಹಳ ವಿಶೇಷ. ಹಿಂದೆ ಸ್ವಚ್ಛತಾ ಅಭಿಯಾನದಲ್ಲಿ ಉಡುಪಿ ಮೊದಲ ಸ್ಥಾನ ಬಂದಿತ್ತು ಉಡುಪಿ ಭಾರತೀಯ ಜನತಾ ಪಕ್ಷದ ಕರ್ಮಭೂಮಿಯಾಗಿದೆ. ಬಿಜೆಪಿಗೆ ದಿವಂಗತ ವಿ.ಎಸ್.ಆಚಾರ್ಯರ ಕೊಡುಗೆಸಾಕಷ್ಟಿದೆ.
ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆಯಿಂದ ಮೋಕ್ಷ ಸಾಧ್ಯ. ಲಕ್ಷ ಕಂಠ ಗೀತಾ ಪಾರಾಯಣ ನಮಗೆ ಹೊಸ ಶಕ್ತಿ ನೀಡುತ್ತಿದೆ. ಇಂದು ವಿಶೇಷವಾಗಿ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ನಮಿಸುತ್ತೇನೆ. ಲಕ್ಷ ಕಠ ಗೀತಾ ಪಾರಾಯಣವನ್ನು ಇಂದು ಸಾಕಾರಗೊಳಿಸಿದ್ದಾರೆ ಎಂದು ಉಡುಪಿಯನ್ನು ಕೊಂಡಾಡಿದರು.
ಭಗವದ್ಗೀತೆಯೊಂದಿಗೆ ಮುಂದಿನ ಪೀಳಿಗೆಯನ್ನು ಜೋಡಿಸುವ ಪ್ರಯತ್ನ ಆಗಿದೆ. ಅಯೋಧ್ಯೆಯಲ್ಲಿ ರಾಮಮಂದಿರಲ್ಲಿ ಧರ್ಮ ಧ್ವಜದ ಸ್ಥಾಪನೆಯಾಗಿದೆ. ಅಯೋಧ್ಯೆಯಿಂದ ಉಡುಪಿಯವರೆಗೆ ಅಸಂಖ್ಯ ಸಂಖ್ಯೆಯಲ್ಲಿ ರಾಮ ಭಕ್ತರು ಇದರೊಂದಿಗೆ ಸೇರಿದ್ದಾರೆ. ವಿಶ್ವೇಶ ತೀರ್ಥ ಸ್ವಾಮೀಜಿ ರಾಮ ಮಂದಿರ ಆಂದೋಲನ ನಡೆಸಿದ್ದು ವಿಶ್ವ ಅರಿತಿದೆ.
ಪೆಹಲ್ಗಾಮ್ ದುರಂತದಲ್ಲಿ ಕರ್ನಾಟಕದ ಸಹೋದರರೂ ಜೀವ ತೆತ್ತರು.ಈ ಹಿಂದಿನ ಸರ್ಕಾರಗಳು ಉಗ್ರ ಕೃತ್ಯಗಳಾದಾಗ ಸುಮ್ಮನಿದ್ದವು. ಆದ್ರೆ, ನಾವು ನಾವು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ಆಪರೇಷನ್ ಸಿಂಧೂರ ಮೂಲ ತಕ್ಕ ಉತ್ತರ ಕೊಟ್ಟರು. ಈ ಮೂಲಕ ಭಯೋತ್ಪಾದನೆ ಕೃತ್ಯವನ್ನು ಸಹಿಸುವುದಿಲ್ಲ ಎಂದು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು. ಇನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ನವ ಸಂಕಲ್ಪ ಮಾಡುವಂತೆ ಮನವಿ ಮಾಡಿದರು. ಎಲ್ಲರೂ ಈ ಒಂಭತ್ತು ಸಂಕಲ್ಪ ಮಾಡಿ ವರ್ತಮಾನ ಮತ್ತು ಭವಿಷ್ಯಕ್ಕೆ ಇವು ಅಗತ್ಯ ಎಂದು ಒತ್ತಿ ಹೇಳಿದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ