Breaking News

ನಾನು ಯಾವ ವಿಚಾರದಲ್ಲೂ ಆತುರದಲ್ಲಿಲ್ಲ. ದೆಹಲಿಯ ಕಾಂಗ್ರೆಸ್ ಕಾರ್ಯಾಲಯ ನಮಗೆ ದೇವಾಲಯವಿದ್ದಂತೆ; ಡಿಸಿಎಂ

Spread the love

ನಾನು ಯಾವ ವಿಚಾರದಲ್ಲೂ ಆತುರದಲ್ಲಿಲ್ಲ.
ದೆಹಲಿಯ ಕಾಂಗ್ರೆಸ್ ಕಾರ್ಯಾಲಯ ನಮಗೆ ದೇವಾಲಯವಿದ್ದಂತೆ; ಡಿಸಿಎಂ ಡಿ.ಕೆ.ಶಿವಕುಮಾರ್
ನಾನು ಯಾವ ವಿಚಾರದಲ್ಲೂ ಆತುರದಲ್ಲಿಲ್ಲ.
ದೆಹಲಿಯ ಕಾಂಗ್ರೆಸ್ ಕಾರ್ಯಾಲಯ ನಮಗೆ ದೇವಾಲಯವಿದ್ದಂತೆ
ಪಕ್ಷದ ಹಿರಿಯ ನಾಯಕರ ಸಲಹೆ, ಸೂಚನೆಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ
ನಾನು ಯಾವ ವಿಚಾರದಲ್ಲೂ ಆತುರದಲ್ಲಿಲ್ಲ. ದೆಹಲಿಯ ಕಾಂಗ್ರೆಸ್ ಕಾರ್ಯಾಲಯ ನಮಗೆ ದೇವಾಲಯವಿದ್ದಂತೆ. ದೆಹಲಿಯಿಲ್ಲದೆ ನಾವೇನೂ ಅಲ್ಲ, ಪಕ್ಷಕ್ಕೆ ದೊಡ್ಡ ಇತಿಹಾಸವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ಪಕ್ಷದ ಹಿರಿಯ ನಾಯಕರ ಸಲಹೆ, ಸೂಚನೆಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿ ಎಂದು ಉತ್ತರಿಸಿದರು.
ಒಕ್ಕಲಿಗ ಸಂಘವು ಬೆಂಬಲ ನೀಡುತ್ತಿರುವ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಿರ್ದಿಷ್ಟವಾಗಿ ಒಂದು ಸಮುದಾಯದ ಬಗ್ಗೆ ವ್ಯಾಖ್ಯಾನ ಬೇಡ. ಕಾಂಗ್ರೆಸ್ ನನಗೆ ಒಂದು ಸಮುದಾಯ. ಒಕ್ಕಲಿಗ ಸಮುದಾಯ ನನ್ನನ್ನು ಇಷ್ಟಪಡಬಹುದು, ಅದು ಬೇರೆ ವಿಚಾರ. ಆದರೆ ನಾನು ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಸೇರಿದಂತೆ ಎಲ್ಲ ಸಮುದಾಯಗಳನ್ನು ಇಷ್ಟಪಡುವೆ. ಒಕ್ಕಲಿಗ ಸಮುದಾಯವೂ ಹಿಂದುಳಿದ ಸಮುದಾಯವೇ ಎಂದು ಹೇಳಿದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ