Breaking News

ಶೇಡಬಾಳದ ಶ್ರೀ ಲಕ್ಷ್ಮಿ ಗುಡಿ ಮಂದಿರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕೊಲ್ಲಾಪುರದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ.

Spread the love

ಶೇಡಬಾಳದ ಶ್ರೀ ಲಕ್ಷ್ಮಿ ಗುಡಿ ಮಂದಿರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕೊಲ್ಲಾಪುರದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ.
ಕಳೆದ ನೂರು ವರ್ಷಗಳಿಂದ ಶ್ರೀ ಲಕ್ಷ್ಮಿ ದೇವಿಯ ಭಕ್ತಿ ಆರಾಧನೆ ಮಾಡುತ್ತಿದ್ದೀರಿ, ನಿಮಗೆ ಒಳ್ಳೆಯದು ಆಗಿದೆ ಇದೇ ರೀತಿ ಭಯ ಭಕ್ತಿ ಇರಲಿ, ಆದರೆ ನಿಮಗೆ ಜನಮ ನೀಡಿದ ತಂದೆ ತಾಯಿ ಮಾತೃದೇವ ಭವ, ಪಿತೃ ದೇವೋ ಭವ ಇದನ್ನು ಮರ್ಯಾದೆ ಅವರ ಮನ ನೋಯಿಸದೆ ಅವರ ಸೇವೆ ಮಾಡಿರಿ ಅಂದರೆ ಮಾತ್ರ ನಿಮಗೆ ದೇವರ ಆಶೀರ್ವಾದ ಮಾಡಬಹುದು ಎಂದು ಕೊಲ್ಲಾಪುರ್ ಸಿದ್ದಗಿರಿ ಕಣಿರಿ ಮಠದ
ಕಾಡುಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಶೇಡಬಾಳದ ಶ್ರೀ ಲಕ್ಷ್ಮಿ ಗುಡಿ ಶತಮಾನೋತ್ಸವದ ಸಮಾರೋಪ ಕಾರ್ಯಕ್ರಮದ ಮುಖ್ಯ ಸಾನಿಧ್ಯ ವಹಿಸಿ ಸ್ವಾಮೀಜಿ ಅವರು ಇಲ್ಲಿಯ ರೈತಪಿ ಕುಟುಂಬದ ಪುರುಷರಿಗೆ ಮಹಿಳೆಯರಿಗೆ ನಿಮ್ಮ ಕಾಯಕ ಹಾಗೂ ಭೂಮಿಯಲ್ಲಿ ಯಾವ ರೀತಿ ಬೆಳೆಗಳನ್ನು ಬೆಳೆಸುವುದು, ದಿನನಿತ್ಯದ ಮಾಡುವ ಕಾಯಕ ಬಗ್ಗೆ ವಿವರವಾಗಿ ಹೇಳಿದರು.
ವಿಜಯಪುರ ಜ್ಞಾನ ಯೋಗ ಆಶ್ರಮದ ಬಸವಲಿಂಗ ಸ್ವಾಮೀಜಿ ಇವರು ಶ್ರೀ ಲಕ್ಷ್ಮಿ, ಶ್ರೀ ಸರಸ್ವತಿ, ಶ್ರೀ ದುರ್ಗೆ ಇವರು ಹೆಣ್ಣು ದೇವರು ಅದೇ ರೀತಿ ಎಲ್ಲ ನದಿಗಳ ನಾಮ ಹೆಣ್ಣ ದೇವರು, ನಮ್ಮ ಭಾರತೀಯ ಸಂಸ್ಕೃತಿ ತಾಯಿಗೆ ಮಹತ್ವ ನೀಡಿದೆ ಇಲ್ಲಿಗೆ ಬಂದಿದ್ದ ಎಲ್ಲ ಮಹಿಳೆಯರು ದೇವಿ ರೂಪದಲ್ಲಿ ಇದ್ದೀರಿ, ನಿಮ್ಮ ಪ್ರಪಂಚಗಳು ನೀಟುವಾಗಿ ಮಾಡಲು ಅತ್ತೆ -ಸೊಸೆ ಇವರಲ್ಲಿ ತಾಯಿ ಮಗಳು ಪ್ರೀತಿ ಇರ್ಬೇಕು ಅಂದರೆ ಮಾತ್ರ ನಿಮ್ಮ ಸಂಸಾರ ಸರಳವಾಗಿ ಸಾಗುತ್ತಿದೆ, ಎಂದು ಹೇಳಿ ಅನೇಕ ಹಿತ್ತನುಡಿ ಮುಖಾಂತರ ಅವರ ಮನ ಪರಿವರ್ತಿಸಿದರು.
ಸಮಾರಂಭದಲ್ಲಿ ಮಂಗಸುಳಿ ಮಠದ ಸಚ್ಚಿದಾನಂದ ಸ್ವಾಮೀಜಿ, ಜ್ಞಾನಾನಂದ ಸ್ವಾಮೀಜಿ, ಹಿತನುಡಿ ಹೇಳಿದರು. ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು ಲಕ್ಷದೀಪೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಿದರು ಮಂದಿರ ಸಮಿತಿಯ ಅಧ್ಯಕ್ಷ ದಾದಾ ಬನಿಜವಾಡ, ಉಪಾಧ್ಯಕ್ಷ ಬಾಳಾಸಾಹೇಬ್ ಜಿರ್ಗಾಳೆ, ಅಶೋಕ್ ವಿಭೂತೇ, ರಾಜಕ ರತ್ನಪಗೊಳ್,
ರಾವಸಾಬ ಮಗದುಮ್ ಬಾಳಾಸಾಬ ಜೈಗೊಂಡ, ಪ್ರಾಚಾರ್ಯ ಬಾಹುಬಲಿ ಬನಿಜವಾಡ, ಪೋಪಟ ಅರವಾ ಡೆ, ರಾಜು ಮಗದುಮ್, ಬಾಹುಬಲಿ ಅರವಾಡೆ, ಗೋಟು ವಿಭೂತೆ, ಮಹಾದೇವ್ ಕಟಗೇರಿ, ಶಂಕರ್ ಕಟಗೇರಿ ಸೇರಿದಂತೆ ಅನೇಕ ಸದ್ಭಕ್ತರು ಐದು ದಿನಗಳ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಲಕ್ಷದೀಪೋತ್ಸವದಲ್ಲಿ ಸಾವಿರಾರು ಸಂಖ್ಯೆಯಿಂದ ಮಹಿಳಾಭಕ್ತರು ಪಾಲ್ಗೊಂಡಿದ್ದರು.
ಕೊಲ್ಲಾಪುರ್ ಜಿಲ್ಲೆಯ ಹಿರಿಯ ಸಮಾಜ ಸೇವಕ, ನಿವೃತ್ತ ಪ್ರಾಚಾರ್ಯ
ಅನ್ನಾಸಾಹೇಬ ಕೋಣೆ ಮಾತನಾಡಿ ಎರಡು ರಾಜ್ಯದ ಗಡಿ ತಾಲೂಕಿನ ಅನೇಕ ಹಳ್ಳಿಗಳಿಗೆ ಇವರಿರುವ ಸಂಪರ್ಕ ಮತ್ತು ಇವರ ಮೇಲಿರುವ ನಂಬಿಕೆ, ಸಾಮಾನ್ಯ ಜನರ ಸೇವೆ ನೀಡಿದ್ದನ್ನು ಗಮನಿಸಿ ಸರ್ಕಾರ ನೀಡಿರುವ ಸಹಕಾರ ರತ್ನ ಪ್ರಶಸ್ತಿ ಒಬ್ಬ ಸೂಕ್ತ ವ್ಯಕ್ತಿಗೆ ನೀಡಿದ ಬಗ್ಗೆ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಸಮಾರಂಭದಲ್ಲಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಹಾವೀರ ಸುಭಾನವರ ಲಕ್ಷ್ಮಿ ಬ್ಯಾಂಕ್ ಸಾಗರ್ ಮಂಗಸುಳೆ, ಮುಖ್ಯ ವ್ಯವಸ್ಥಾಪಕ ಪ್ರದೀಪ್ ಮಗ್ಗೆನವರ, ಕೋಟಿವಾಲೆ, ಚಂದ್ರಕಾಂತ್ ಪಾಟೀಲ್ ಸಕ್ಕರೆ ಕಾರ್ಖಾನೆ ಆಡಳಿತ ಅಧಿಕಾರಿ ವೀರೇಂದ್ರ ಜಾಡರ, ಹಿರಿಯರಾದ ಸುಭಾಷ್ ಕಠಾರೆ, ದಿಲೀಪ್ ಪಾಟೀಲ ಪತ್ರಕರ್ತ ಲಕ್ಷ್ಮಣ್ ಸೂರ್ಯವಂಶಿ, ಎಸ್ ಎಂ ಸಂಪಾಳ್ ನ್ಯಾಯವಾದಿ ರಾಹುಲ್ ಕಟಗೇರಿ ತಾತ್ಯಾಸಾಹೇಬ್ ಧೋತ್ರೆ ಅಜಿತ್ ಕರವ, ಪ್ರಕಾಶ್ ಚೌಗುಲೆ, ವಿದ್ಯಾಧರ ಭಂಡಾರೆ ಸೇರಿದಂತೆ ಅನೇಕರು ಇದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ