Breaking News

ಜೀವಕ್ಕಿಲ್ಲವೇ ಕಿಮ್ಮತ್ತು??? ಹೆದ್ದಾರಿ ಮೇಲೆ ಅಪಾಯಕಾರಿ ಪ್ರವಾಸ… ಸರ್ಕಾರಿ ಸಾರಿಗೆ ಬಸ್ಸಿನ ಬಾಗಿಲಲ್ಲಿ ಜೋತು ಬಿದ್ದು ಪ್ರಯಾಣ

Spread the love

ಜೀವಕ್ಕಿಲ್ಲವೇ ಕಿಮ್ಮತ್ತು??? ಹೆದ್ದಾರಿ ಮೇಲೆ ಅಪಾಯಕಾರಿ ಪ್ರವಾಸ…
ಸರ್ಕಾರಿ ಸಾರಿಗೆ ಬಸ್ಸಿನ ಬಾಗಿಲಲ್ಲಿ ಜೋತು ಬಿದ್ದು ಪ್ರಯಾಣ
ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಕರು ಬಾಗಿಲಿಗೆ ಜೋತು ಬಿದ್ದು, ಪ್ರಯಾಣಿಸುತ್ತಿದ್ದರೂ, ಚಾಲಕ ಮತ್ತು ನಿರ್ವಾಹಕ ಜಾಣ ಕುರುಡುತನ ತೋರಿದ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ಹೌದು, ಈ ದೃಶ್ಯಗಳನ್ನು ಒಂದು ಬಾರಿ ನೀವು ನೋಡಿ ಬಿಡಿ. ಇದು ಬೆಳಗಾವಿ ಸುವರ್ಣಸೌಧದ ಬಳಿಕ ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರಯಾಣಿಸುತ್ತಿರುವ ಬಸ್ಸಿನ ವಿಡ್ಹಿಯೋವಾಗಿದೆ.
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಹಲಗಾ ಗ್ರಾಮಕ್ಕೆ ಸೇವೆಯನ್ನು ಒದಗಿಸಿ ಬಸ್ಸು ಇದಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದು, ಬಸ್ಸಿನ ಬಾಗಿಲಿಗೆ ಯುವಕರು ಜೋತು ಬಿದ್ದು ಪ್ರಯಾಣಿಸುತ್ತಿದ್ದಾರೆ.
ಆದರೇ, ಚಾಲಕನಾಗಲಿ, ನಿರ್ವಾಹಕನಾಗಲಿ ಯಾರೂ ಕೂಡ ಇದನ್ನು ಗಮನಿಸಿಲ್ಲ. ಈ ರೀತಿಯ ಪ್ರಯಾಣ ಅಪಾಯಕ್ಕೆ ಮೂಲವಾಗಿದೆ. ಏನಾದರೂ ಹೆಚ್ಚು ಕಡಿಮೆಯಾದರೇ, ಜೀವದ ಗತಿಯೇನು? ಚಾಲಕ ಮತ್ತು ನಿರ್ವಾಹಕನ ನಿರ್ಲಕ್ಷ್ಯ ಮತ್ತು ಪ್ರಯಾಣಿಕರ ದುಸ್ಸಾಹಸಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ