Breaking News

ದೆಹಲಿಯಲ್ಲಿ ರಾತ್ರಿ ಕಫ್ರ್ಯೂ

Spread the love

ನವದೆಹಲಿ, ಡಿ.31-ರೂಪಾಂತರ ವೈರಸ್ ಕಾರಣ ದೆಹಲಿ ಸರ್ಕಾರ ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆ ತನಕ ನಗರಾದ್ಯಂತ ಕಫ್ರ್ಯೂ ವಿಧಿಸಿದೆ. ಹೊಸ ವರ್ಷ ಆಚರಣೆಗಾಗಿ ನಡೆಸುವ ದೊಡ್ಡ ಗುಂಪು ಗಳನ್ನು ತಪ್ಪಿಸುವ ಸಲುವಾಗಿ ಡಿ.31 ರಾತ್ರಿಯಿಂದ ಜ.1 ವರೆಗೆ ಕಫ್ರ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿದೆ. ಬ್ರಿಟನ್ ಯಿಂದ ಬಂದಿರುವ ರೂಪಾಂತರ ಕೊರೊನಾ ವೈರಾಣು ಪರಿಣಾಮ ಮತ್ತು ಅದರ ಹರಡುವಿಕೆಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಅವರು ಹೊರಡಿಸುವ ಆದೇಶ ಪ್ರಕಾರ 31ರ ರಾತ್ರಿ 11ರಿಂದ ಜ.1 ರ ಬೆಳಗ್ಗೆ 6 ಗಂಟೆ ತನಕ ಕಫ್ರ್ಯೂ ಜಾರಿಯಲ್ಲಿದ್ದು, ನಗರದಲ್ಲಿ 5 ಜನಕ್ಕಿಂತ ಹೆಚ್ಚು ಒಂದು ಕಡೆ ಸೇರುವಂತಿಲ್ಲ ಹಾಗೂ ರಾತ್ರಿ ಪಾರ್ಟಿಗಳನ್ನು ನಡೆಸುವಂತಿಲ್ಲ. ಆದರೆ, ಅಗತ್ಯ ವಸ್ತುಗಳ ಪೂರೈಕೆ ಮತ್ತು ಅಂತಾರಾಜ್ಯ ವಾಹನಗಳ ಓಡಾಟದ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದಿದೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ