Breaking News

ಕದ್ರಿ ಪಾರ್ಕ್​ಗೆ ಟೋಲ್ ಮಾದರಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ: 5 ನಿಮಿಷಕ್ಕಿಂತ ಹೆಚ್ಚು ನಿಂತರೆ ಶುಲ್ಕ ಕಟ್

Spread the love

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳೂರಿನ ಕದ್ರಿ ಪಾರ್ಕ್ ರಸ್ತೆ ಅಭಿವೃದ್ಧಿಗೊಂಡಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ಜನರು, ವಾಹನಗಳು ಓಡಾಡುತ್ತಿರುತ್ತವೆ. ಆದರೆ ಇದೀಗ ಈ ರಸ್ತೆಗೆ ಟೋಲ್ ಸಿಸ್ಟಮ್ ರೀತಿಯ ಸ್ಮಾರ್ಟ್ ಪಾರ್ಕಿಂಗ್ ಮಾಡಿ ಶುಲ್ಕ ವಿಧಿಸಲು ಸ್ಮಾರ್ಟ್ ಸಿಟಿ ನಿರ್ಧರಿಸಿದೆ.

ಕದ್ರಿ ಪಾರ್ಕ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಂಗಡಿಗಳನ್ನು ಖಾಸಗಿ ಸಂಸ್ಥೆಯೊಂದು ಟೆಂಡರ್ ಮೂಲಕ ಪಡೆದುಕೊಂಡಿದೆ. ಇದೇ ಸಂಸ್ಥೆ ಕದ್ರಿ ಪಾರ್ಕ್​ನ ಅಂಗಡಿ, ರಸ್ತೆ, ಫುಟ್​ಪಾತ್, ಪಾರ್ಕಿಂಗ್ ಜಾಗವನ್ನು ನಿರ್ವಹಣೆ ಮಾಡಲಿದೆ. ಆದರೆ ಟೆಂಡರ್ ಪಡೆದ ಸಂಸ್ಥೆಗೆ ಇದರಿಂದ ನಿರೀಕ್ಷಿತ ಪ್ರಮಾಣದ ಆದಾಯ ಸಿಗುವುದಿಲ್ಲ. ಆದ್ದರಿಂದ ಕದ್ರಿ ಪಾರ್ಕ್ ರಸ್ತೆಗೆ ಟೋಲ್​ಗೇಟ್ ಮಾದರಿಯಲ್ಲಿ ಶುಲ್ಕ ವಿಧಿಸಲು ಸ್ಮಾರ್ಟ್ ಸಿಟಿ ನಿರ್ಧರಿಸಿದೆ. ಇದಕ್ಕಾಗಿ ಈ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ, ಕ್ಯಾಮರಾ ಬಳಸಿ, ವಾಹನದ ನಂಬರ್ ಪ್ಲೇಟ್ ಇಮೇಜ್ ಸೆರೆಹಿಡಿದು ವಾಹನದ ಫಾಸ್ಟ್​ ಟ್ತಾಗ್​ಗೆ ಲಿಂಕ್ ಮಾಡಲಾಗುತ್ತದೆ. ಪಾರ್ಕ್ ರಸ್ತೆಗೆ ಎಂಟ್ರಿಯಾಗುವ ಎರಡೂ ಕಡೆಗಳಲ್ಲಿ ಈ ಟೋಲ್​ಗೇಟ್ ಮಾದರಿಯ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಈ ರಸ್ತೆಗೆ ವಾಹನಗಳು ಎಂಟ್ರಿಯಾಗಿ 5 ನಿಮಿಷದೊಳಗೆ ಹೊರಗಡೆ ಪಾಸ್ ಆಗಿದಿದ್ದಲ್ಲಿ ನಿಗದಿತ ಶುಲ್ಕ ಕಟ್ ಆಗಲಿದೆ.

Kadri Park Mangalore

ಸ್ಮಾರ್ಟ್ ಸಿಟಿ ಎಂಡಿ ಅರುಣ್ ಪ್ರಭಾ ಅವರು ಮಾತನಾಡಿ, “ಇದು ಟೋಲ್ ಅಲ್ಲ, ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ. ಸ್ಮಾರ್ಟ್ ಸಿಟಿಯಿಂದ ಇಲ್ಲಿ ಅಭಿವೃದ್ದಿ ಕಾರ್ಯ ನಡೆದಿದ್ದು, ಇದರ ನಿರ್ವಹಣೆ ಮಾಡಬೇಕಾಗಿದೆ. ಅದಕ್ಕಾಗಿ ಈ ರೀತಿ ಶುಲ್ಕ ಪಡೆದುಕೊಳ್ಳಲು ನಿರ್ಧರಿಸಲಾಗಿದೆ” ಎಂದರು.

ಆದರೆ, ಕದ್ರಿ ಪಾರ್ಕ್ ರಸ್ತೆಯಲ್ಲಿ ಟೋಲ್ ಮಾದರಿಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ಮಾಡಿ ಶುಲ್ಕ ಪಡೆಯುವ ಕ್ರಮಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಪಾರ್ಕ್ ರಸ್ತೆಗೆ ಟೋಲ್ ರೀತಿಯ ಶುಲ್ಕ ಮಾಡಿದ್ರೆ ಕದ್ರಿ ಪಾರ್ಕ್​ಗೆ ಜನ ಬರೋದು ಹೇಗೆ? ಅಲ್ಲದೆ ಈ ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೂ ತೊಡಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಹೆದ್ದಾರಿಯಂತೆ ಇಲ್ಲಿ ಟೋಲ್ ಬೇಡ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ