Breaking News

ಮೆಗ್ಗಾನ್ ಭೋಧನಾಸ್ಪತ್ರೆಯಲ್ಲಿ ಇ- ಫಾರ್ಮಸಿ ಅಳವಡಿಕೆ

Spread the love

ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೆಗ್ಗಾನ್ ಭೋದಾನಾಸ್ಪತ್ರೆಯನ್ನು ಮಧ್ಯ ಕರ್ನಾಟಕದ ಸಂಜೀವಿನಿ ಎಂದು ಕರೆಯಲಾಗುತ್ತಿದೆ. ಈ ಭೋಧನಾಸ್ಪತ್ರೆಯಲ್ಲಿ ಹೊಸದಾಗಿ ಇ- ಫಾರ್ಮಸ್ಸಿ ಜಾರಿಗೆ ತರಲಾಗಿದೆ. ಇದರಿಂದ ಆಸ್ಪತ್ರೆಯಲ್ಲಿನ ಔಷಧಗಳ ಸೋರಿಕೆ, ಹೊರ ರೋಗಿಗಳಿಗೆ ಹೊರಗಡೆ ಔಷಧಗಳನ್ನು ಬರೆದುಕೊಡುವುದಕ್ಕೆ ತಡೆ ಹಾಕಿದಂತೆ ಆಗಿದೆ. ಅಲ್ಲದೇ ಹೊರ ರೋಗಿಗಳಿಗೆ ಸುಲಭವಾಗಿ ಔಷಧ ಲಭ್ಯವಾಗುವಂತೆ ಮಾಡಲಾಗಿದೆ.

ಶಿವಮೊಗ್ಗದ ಮೆಗ್ಗಾನ್ ಭೋಧನಾಸ್ಪತ್ರೆಯಲ್ಲಿ ನಿತ್ಯ ಎರಡೂವರೆ ಸಾವಿರಕ್ಕೂ ಅಧಿಕ ಹೊರ ರೋಗಿಗಳು ಬರುತ್ತಾರೆ. ಇಲ್ಲಿಗೆ ಶಿವಮೊಗ್ಗ ಸೇರಿದಂತೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಶಿರಸಿ, ಸಿದ್ದಾಪುರ, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ತರಿಕೆರೆ, ಕಡೂರು, ಬಿರೂರಿನಿಂದ ಸಾರ್ವಜನಿಕರು ಹೊರ ರೋಗಿಗಳಾಗಿ ಇಲ್ಲಿಗೆ ಆಗಮಿಸುತ್ತಾರೆ. ಇವರಿಗೆ ಎಲ್ಲ ರೀತಿಯ ಆಸ್ಪತ್ರೆ ಸೌಲಭ್ಯದ ಜೊತೆಗೆ ಔಷಧವು ಸಹ ಲಭ್ಯವಾಗಬೇಕೆಂದು ಇ- ಫಾರ್ಮಸಿಯನ್ನು ಅಳವಡಿಸಲಾಗಿದೆ.ಇ-ಫಾರ್ಮಸ್ಸಿ ಹೇಗೆ ಕಾರ್ಯನಿರ್ವಹಿಸುತ್ತದೆ?: ಇ- ಫಾರ್ಮಸಿ ಆಸ್ಪತ್ರೆಯ ಆಂತರಿಕ ತಂತ್ರಾಂಶವಾಗಿದೆ. ಇದು ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಆದರೆ, ಸರ್ಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಇದು ಮೊದಲ ಬಾರಿಗೆ ಜಾರಿ ಮಾಡಲಾಗಿದೆ. ಇದು ಆಸ್ಪತ್ರೆಯಲ್ಲಿನ ಎಲ್ಲ ಔಷಧಗಳು ಲಭ್ಯ ಇರುವ ಬಗ್ಗೆ ವೈದ್ಯರಿಗೆ ತಿಳಿಸುತ್ತದೆ. ಅಂದರೆ ಒಬ್ಬ ಹೊರ ರೋಗಿ ಒಪಿಡಿಯಲ್ಲಿ ಚೀಟಿ ಮಾಡಿಸಿಕೊಂಡು ವೈದ್ಯರ ಬಳಿ ಹೋದಾಗ, ಅಲ್ಲಿ ವೈದ್ಯರು ಹೊರ ರೋಗಿಯನ್ನು ಪರೀಕ್ಷಿಸಿ, ಅವರಿಗೆ ಅನುಗುಣವಾದ ಔಷಧ ನೀಡುತ್ತಾರೆ. ಮೊದಲು ಚೀಟಿಯಲ್ಲಿ ಔಷಧಗಳ ವಿವರವನ್ನು ಬರೆದು ನೀಡಬೇಕಿತ್ತು. ಈಗ ವೈದ್ಯರು ಹೊರ ರೋಗಿಗೆ ಔಷಧವನ್ನು ನೀಡಲು ತಮ್ಮಲ್ಲಿನ ಕಂಪ್ಯೂಟರ್ ಒಪನ್ ಮಾಡಿದಾಗ​ ಅಲ್ಲಿ ಹೊರ ರೋಗಿಯ ವಿವರ ಲಭ್ಯವಾಗುತ್ತದೆ. ನಂತರ ರೋಗಿಗೆ ಯಾವ ಔಷಧ ನೀಡಬಹುದು ಎಂದು ಪರಿಶೀಲಿಸಿ, ರೋಗಕ್ಕೆ ಅನುಗುಣವಾದ ಔಷಧಗಳು ಕಾಣುವಂತೆ ವ್ಯವಸ್ಥೆ ಮಾಡಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ