ದೀಪಾವಳಿ ಬಟ್ಟೆ ಖರೀದಿಗಾಗಿ “ಬಿ.ಎಸ್.ಸಿ”ಯಲ್ಲಿ ಭಾರಿ ಜನಜಂಗುಳಿ…
ದೀಪಾವಳಿ ಬಟ್ಟೆ ಖರೀದಿಗಾಗಿ ಬಿ.ಎಸ್.ಸಿಯಲ್ಲಿ ಜನಜಂಗುಳಿ…ಬ್ರ್ಯಾಂಡೆಡ್ ಬಟ್ಟೆಗಳ ಮೇಲೆ ಶೇ. 10 ರಷ್ಟು ರಿಯಾಯಿತಿ…ಇ.ವಿ. ವಾಹನಗಳಿಗೆ ಚಾರ್ಜಿಂಗ್- ವಾಹನಗಳಿಗೆ ಪಾರ್ಕಿಂಗ್
ಟಿಳಕವಾಡಿಯಲ್ಲಿರುವ ಬಿ.ಎಸ್.ಸಿ ಟೆಕ್ಸಟೈಲ್ ಮಾಲ್…
ದೀಪಾವಳಿ ಹಬ್ಬದ ವೇಳೆ ಬೆಳಗಾವಿಯ ಬಿ.ಎಸ್. ಚನ್ನಬಸಪ್ಪ ಆಂಡ್ ಸನ್ಸ್ ಒಂದೇ ಸೂರಿನಡಿ ಇಡೀ ಕುಟುಂಬಸ್ಥರ ಬಟ್ಟೆಗಳನ್ನು ಒದಗಿಸಿ ಗ್ರಾಹಕರ ಪ್ರೀತಿ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ. ಬಟ್ಟೆ ಖರೀದಿಗಾಗಿ ಗ್ರಾಹಕರು ಭಾರಿ ಸಂಖ್ಯೆಯಲ್ಲಿ ಬಿ.ಎಸ್.ಸಿಗೆ ಭೇಟಿ ನೀಡುತ್ತಿದ್ದಾರೆ.
ಕತ್ತಲೆಯನ್ನು ಕಳೆದು ದೀಪವನ್ನು ಹಚ್ಚಿ ಬಾಳು ಬೆಳಗುವ ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಖುಷಿಯನ್ನು ಇನ್ನಷ್ಟು ಹೆಚ್ಚಿಸಲು ಬೆಳಗಾವಿ ಬಿ.ಎಸ್.ಸಿ ಅರ್ಥಾತ್ ಬಿ.ಎಸ್. ಚನ್ನಬಸಪ್ಪ ಆಂಡ್ ಸನ್ಸ್ ಒಂದೇ ಸೂರಿನಡಿ ಇಡೀ ಕುಟುಂಬಸ್ಥರ ಬಟ್ಟೆಗಳನ್ನು ಕೈಗೆಟಕುವ ದರದಲ್ಲಿ ನೀಡಿ, ಗ್ರಾಹಕರ ಸಂತಸವನ್ನು ದ್ವಿಗುಣಿತಗೊಳಿಸಿದೆ. ಸುಂದರ ಉಡುಪುಗಳು, ಸೀರೆಗಳು, ಮಕ್ಕಳ ಬಟ್ಟೆ, ಚೂಡಿದಾರ್, ಘಾಗರಾ ಸೇರಿದಂತೆ ಗ್ರಾಹಕರ ಇಷ್ಟಕ್ಕೆ ತಕ್ಕಂತಹ ಬಟ್ಟೆಗಳನ್ನು ಇಲ್ಲಿ ಖರೀದಿಸಬಹುದಾಗಿದೆ.
ವಿಶೇಷವಾಗಿ 150 ರಿಂದ ಹಿಡಿದು 1 ಲಕ್ಷ 50 ಸಾವಿರ ಮೌಲ್ಯದ ವರೆಗಿನ ವರೈಟಿ ವರೈಟಿ ಟೈಪ್ ಸೀರೆಗಳು ಇಲ್ಲಿ ಲಭ್ಯಯಿವೆ. 199 ರಿಂದ 7000 ರೂಪಾಯಿಯ ವರೆಗೆ ಕುರ್ತಾ ಪೈಜಾಮಾ ಸೆಟ್ ಲಭ್ಯವಿವೆ.
ಬ್ರ್ಯಾಂಡೆಡ್ ಬಟ್ಟೆಗಳ ಮೇಲೆ ಶೇ. 10 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ ಎಂದು ಅಮಜದ್ ಜಮಾದಾರ ಹೇಳಿದರು.
ಬಟ್ಟೆಗಳನ್ನು ಖರೀದಿಸಲು ಬರುವ ಗ್ರಾಹಕರನ್ನು ಅತ್ಯಂತ ಆತ್ಮೀಯವಾಗಿ ವರ್ತಿಸಿ ಹೃತ್ಪೂರ್ವಕವಾಗಿ ಸಿಬ್ಬಂದಿಗಳು ಸ್ವಾಗತಿಸುತ್ತಾರೆ. ಅಲ್ಲದೇ, ಹೆಚ್ಚಿನ ಖರೀದಾರಿಯ ಮೇಲೆ ಉಡುಗೊರೆಯನ್ನು ಸಹ ನೀಡಲಾಗುತ್ತದೆ.
ಗ್ರಾಹಕರ ಸಹಕಾರ ಕಳೆದ ಮೂರು ವರ್ಷಗಳಿಂದ ಸಿಗುತ್ತಿದ್ದು, ಈ ಬಾರಿಯ ದೀಪಾವಳಿಯನ್ನು ಕೂಡ ಬಿ.ಎಸ್.ಸಿಯೊಂದಿಗೆ ಆಚರಿಸಿ ಎಂದು ಬಿ.ಎಸ್.ಸಿ ಮ್ಯಾನೇಜರ್ ಈರಣ್ಣಾ ಹೇಳಿದರು.
ಇನ್ನು ಬಟ್ಟೆ ಖರೀದಿಸಲು ಬರುವ ಗ್ರಾಹಕರ ವಾಹನಗಳ ಸುರಕ್ಷತೆ ಮತ್ತು ಪಾರ್ಕಿಂಗ್, ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆಯನ್ನು ಕೂಡ ಬಿ.ಎಸ್.ಸಿಯೇ ಒದಗಿಸುತ್ತದೆ.
ಹಾಗಾದರೇ ಇನ್ನೇಕೆ ತಡ ಇಂದೇ ಭೇಟಿ ನೀಡಿರಿ. ಬಿ.ಎಸ್.ಸಿ ದಿ ಟೆಕ್ಸಟೈಲ್ ಮಾಲ್ ಟಿಳಕವಾಡಿ ಬೆಳಗಾವಿ.
Laxmi News 24×7