Breaking News

ನ್ಯಾಯಾಲಯದ ಆದೇಶ ಬರುವ ತನಕ 3 ತಿಂಗಳ ವರೆಗೆ ಖಾಸಗಿ ಜೈ ಕಿಸಾನ್ ಭಾಜೀ ಮಾರ್ಕೇಟಿನ ವರ್ತಕರಿಗೆ ಎಲ್ಲ ಅನುಕೂಲವನ್ನು ಕಲ್ಪಿಸಿ ಕೊಡಬೇಕೆಂದು ಸಂಸದ ಜಗದೀಶ್ ಶೆಟ್ಟರ್ ಎಪಿಎಂಸಿ ಕಾರ್ಯದರ್ಶಿಗಳಿಗೆ ಸೂಚನೆಯನ್ನು ನೀಡಿದರು.

Spread the love

ನ್ಯಾಯಾಲಯದ ಆದೇಶ ಬರುವ ತನಕ 3 ತಿಂಗಳ ವರೆಗೆ ಖಾಸಗಿ ಜೈ ಕಿಸಾನ್ ಭಾಜೀ ಮಾರ್ಕೇಟಿನ ವರ್ತಕರಿಗೆ ಎಲ್ಲ ಅನುಕೂಲವನ್ನು ಕಲ್ಪಿಸಿ ಕೊಡಬೇಕೆಂದು ಸಂಸದ ಜಗದೀಶ್ ಶೆಟ್ಟರ್ ಎಪಿಎಂಸಿ ಕಾರ್ಯದರ್ಶಿಗಳಿಗೆ ಸೂಚನೆಯನ್ನು ನೀಡಿದರು.
ಲೈಸೆನ್ಸ್ ರದ್ಧಾದ ಜೈ ಕಿಸಾನ್ ಭಾಜೀ ಮಾರ್ಕೇಟಿನ ವರ್ತಕರಿಗೆ ಬೆಳಗಾವಿ ಎಪಿಎಂಸಿಯಲ್ಲಿ ಒದಗಿಸಲಾದ ಅವಕಾಶ ನೀಡಲಾಗುತ್ತಿರುವ ಸೌಲಭ್ಯ, ಎಪಿಎಂಸಿಯಲ್ಲಿನ ಮಳಿಗೆಗಳ ಲಭ್ಯತೆ ಮತ್ತು ಸೌಕರ್ಯಗಳನ್ನು ಇಂದು ಸಂಸದ ಜಗದೀಶ್ ಶೆಟ್ಟರ್ ಅವರು ಭೇಟಿ ನೀಡಿ ಪರಿಶೀಲಿಸಿ ಮಾಹಿತಿಯನ್ನು ಪಡೆದುಕೊಂಡರು. ನಂತರ, ಎಪಿಎಂಸಿ ಸಭಾಗೃಹದಲ್ಲಿ ಖಾಸಗಿ ಜೈ ಕಿಸಾನ್ ಮಾರುಕಟ್ಟೆಯ ವರ್ತಕರು ಮತ್ತು ಎಪಿಎಂಸಿ ಅಧಿಕಾರಿಗಳೊಂದಿಗೆ ಸಂಸದರು ಸಭೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ವರ್ತಕರು ಟ್ರೇಡಿಂಗ್ ಲೈಸೆನ್ಸ್ ಹೊಂದಿದ ವರ್ತಕರಿಗೆ ಎಲ್ಲಿಯೂ ವ್ಯಾಪಾರ ಮಾಡಲೂ ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಕಾಂಟೋನ್ಮೆಂಟ್ ಭಾಜೀ ಮಾರ್ಕೇಟ್ ಬಂದ್ ಆದ ಬಳಿಕ ಎಪಿಎಂಸಿ ಅವರು 3 ವರ್ಷ 8 ತಿಂಗಳುಗಳ ಕಾಲ ವರ್ತಕರನ್ನು ಗೇಟ್ ಹೊರಗಿಟ್ಟಿದ್ದಾರೆ. ಈಗ ತಮ್ಮದೇ ಖಾಸಗಿ ಭಾಜೀ ಮಾರ್ಕೇಟ್ ಆರಂಭಿಸಿದರೂ ಅದಕ್ಕೂ ಅವಕಾಶ ನೀಡಿಲ್ಲ. ನಮಗೆ ಅನ್ಯಾಯವಾಗಿದೆ ಎಂದರು.
ಇನ್ನು ಮತ್ತೋರ್ವ ವರ್ತಕರು ತಮಗೆ ಮಳಿಗೆ ನೀಡುವುದಾಗಿ ಖಾಸಗಿ ಮಾರುಕಟ್ಟೆಯ ವರ್ತಕರನ್ನು ಕರೆಯಿಸಿದ್ದಾರೆ. ಆದರೇ. ಇವರಲ್ಲಿ ಖಾಲಿ 24 ಅಂಗಡಿಗಳಿವೆ. ಆದರೇ ನಾವು 200ಕ್ಕೂ ಅಧಿಕ ವರ್ತಕರು ಇದ್ದೇವೆ. ಟೆಂಡರ್’ನಲ್ಲಿ ಮಳಿಗೆ ಪಡೆಯುವುದು ಸಾಧ್ಯವಿಲ್ಲ. ಬೆಸಮೆಂಟ್’ನಲ್ಲಿ ಮಳಿಗೆಗಳಿವೆ. ಈ ಸಮಸ್ಯೆಗಳನ್ನು ನೀಗಿಸಬೇಕೆಂದು ಆಗ್ರಹಿಸಿದರು.
ಇನ್ನು ಸಂಸದ ಜಗದೀಶ್ ಶೆಟ್ಟರ್ ಅವರು ಮೂರು ತಿಂಗಳ ವರೆಗೆ ರವಿವಾರದ ರೈತರ ಸಂತೆಯಲ್ಲಿ ವರ್ತಕರಿಗೆ ಅನುಕೂಲವಾಗುಂವತೆ ಕಲ್ಪಿಸಬೇಕು. ನ್ಯಾಯಾಲಯದ ಆದೇಶ ಬಂದ ಬಳಿಕ ಮುಂದಿನ ಕ್ರಮವನ್ನು ಕೈಗೊಳ್ಳಬೇಕೆಂದರು. ವರ್ತಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಉಪಮಹಾಪೌರ ಮತ್ತು ಹಾಲಿ ನಗರಸೇವಕಿ ರೇಷ್ಮಾ ಪಾಟೀಲ್, ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ