Breaking News

ಇಂದಿನಿಂದ ಎರಡು ರಾತ್ರಿ ಹಾರ್ವೆಸ್ಟ್ ಮೂನ್

Spread the love

ಉಡುಪಿ : ಈ ವರ್ಷದ ಮೊದಲ ಸೂಪರ್‌ಮೂನ್ ಆದ ‘ಹಾರ್ವೆಸ್ಟ್ ಮೂನ್’ ಅ.6, 7ರ ರಾತ್ರಿ ಸಂಭವಿಸಲಿದ್ದು, ಖಗೋಳಪ್ರಿಯರ ಕಣ್ಣಿಗೆ ರಸದೌತಣವಾಗಲಿದೆ. ಇತರ ಸೂಪರ್‌ಮೂನ್‌ಗಿಂತ ವಿಭಿನ್ನವಾದ ಹಾರ್ವೆಸ್ಟ್ ಮೂನ್ ವೇಳೆ ಚಂದ್ರನ ಬೆಳಕು ಅತ್ಯಂತ ಪ್ರಕಾಶಮಾನವಾಗಿರಲಿದೆ.

ಈ ಹಿಂದೆ 2020ರಲ್ಲಿ ಈ ವಿಸ್ಮಯ ಘಟಿಸಿತ್ತು. ಅಪರೂಪವೆಂಬಂತೆ ಎರಡು ರಾತ್ರಿ ಹಾರ್ವೆಸ್ಟ್ ಮೂನ್ ಇರುವ ಕಾರಣ ಭಾರತ, ಅಮೆರಿಕ, ಬ್ರಿಟನ್ ಸೇರಿ ಹಲವು ದೇಶಗಳಲ್ಲಿ ಇದನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಖಗೋಳಶಾಸ್ತ್ರಜ್ಞ ಡಾ. ಭಟ್ ಏನಂತಾರೆ? ಈ ವರ್ಷದ ಸೂಪರ್ ಮೂನ್​ಗಳ ಸರದಿ ಇಂದಿನಿಂದ ಪ್ರಾರಂಭಗೊಳ್ಳುತ್ತಿದೆ. ಈ ವರ್ಷಾಂತ್ಯದ ಅಕ್ಟೋಬರ್ 7, ನವೆಂಬರ್ 5 ಹಾಗೂ ಡಿಸೆಂಬರ್ 4ರ ಹುಣ್ಣಿಮೆಗಳೆಲ್ಲ ಸೂಪರ್​ಮೂನ್​ಗಳೇ ಆಗಿರಲಿವೆ. ಭೂಮಿ ಹಾಗೂ ಚಂದ್ರನ ಸರಾಸರಿ ದೂರ 3 ಲಕ್ಷದ 84 ಸಾವಿರ ಕಿಲೋ ಮೀಟರ್​. ಇಂದು ಸುಮಾರು 3 ಲಕ್ಷದ 61 ಸಾವಿರ ಕಿಲೋ ಮೀಟರ್​ಗೆ ಬರುವ ಚಂದ್ರ, ಸುಮಾರು 23 ಸಾವಿರ ಕಿಲೋ ಮೀಟರ್​ ಸಮೀಪ ಬಂದು ಸುಮಾರು 18 ಅಂಶ ದೊಡ್ಡದಾಗಿ ಕಾಣಿಸಲಿದ್ದಾನೆ. ಈ ಹಿನ್ನೆಲೆಯಲ್ಲಿ ಬೆಳದಿಂಗಳು ಹೆಚ್ಚು. ಹುಣ್ಣಿಮೆಯ ಸೊಬಗು ಸವಿಯಲು ಚೆಂದ. ಶರತ್ಕಾಲದ ಆಶ್ವಯುಜವು ಆಕಾಶಕ್ಕೆ ಭವ್ಯ. ಹಾಗಾಗಿ ಸರಾಸರಿ ಹುಣ್ಣಿಮೆಗಿಂತ ಚಂದ್ರ ಸ್ವಲ್ಪ ದೊಡ್ಡದಾಗಿ ಕಾಣಿಸಲಿದ್ದಾನೆ. ತಿಳಿ ಬಿಳಿ ತೇಲುವ ಮೋಡಗಳ ಮಧ್ಯೆ ಬೆಳದಿಂಗಳಲ್ಲಿ ಚಂದ್ರ ಇನ್ನೂ ಚೆಂದವಾಗಿ ಕಾಣಿಸಿಕೊಳ್ಳಲಿದೆ. ಅದರಲ್ಲೂ ಈಗ ಬಂದಿರುವ ಶರತ್ಕಾಲದ ಸೂಪರ್ ಮೂನ್​ನ ಬೆಳದಿಂಗಳನ್ನು ಎಲ್ಲರೂ ಸವಿಯಬೇಕು. ಅಲ್ಲಲ್ಲಿ ತೇಲುವ ಮಂಜುಗಡ್ಡೆಗಳ ಬಿಳಿ ಹಳದಿ ವರ್ತುಲದ ಹ್ಯಾಲೋ ಕೂಡಾ ಕಾಣಸಿಗಬಹುದು. ಪ್ರಕೃತಿಯ ವೈಭವವನ್ನು ಆರಾಧಿಸಿ, ಆಸ್ವಾದಿಸಿ ಎನ್ನುತ್ತಾರೆ ಉಡುಪಿಯ ಖಗೋಳಶಾಸ್ತ್ರಜ್ಞ ಡಾ. ಎ ಪಿ ಭಟ್.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ