Breaking News

ಬೆಳಗಾವಿ ಪೊಲೀಸರಿಂದ ಡ್ರೋನ್ ಕ್ಯಾಮರಾ ತರಬೇತಿ – ಕಾನೂನು ಸುವ್ಯವಸ್ಥೆಗೆ ಹೊಸ ಆಯಾಮ!”

Spread the love

ಬೆಳಗಾವಿ ಪೊಲೀಸರಿಂದ ಡ್ರೋನ್ ಕ್ಯಾಮರಾ ತರಬೇತಿ – ಕಾನೂನು ಸುವ್ಯವಸ್ಥೆಗೆ ಹೊಸ ಆಯಾಮ!”
ದೊಡ್ಡ ಸಮಾವೇಶ, ರ್ಯಾಲಿಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಡೋನ್ ಕ್ಯಾಮರಾ ಬಳಸುವ ಕುರಿತು ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡಿದೆ.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಅವರು ಡೋನ್ ಹಾರಿಸುವುದು ಹೇಗೆ ಮತ್ತು ಅದನ್ನು ಹೇಗೆ ಮಾನಿಟರ್ ಮಾಡಬೇಕು ಎಂಬುದರ ಕುರಿತು ಸಿಬ್ಬಂದಿಗಳಿಗೆ ತಿಳಿಸಿಕೊಟ್ಟರು. ಇದು ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಹೊಸ ಆಯಾಮ ನೀಡಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರಕಾರದ ಆದೇಶದ ಮೇರೆಗೆ ಪ್ರತಿಯೊಂದು ಪೊಲೀಸ್‌ ಠಾಣೆಗೆ ಡೋಣ್ ಕ್ಯಾಮರಾ ನೀಡಲಾಗುವುದು.
ಮೊದಲ ಹಂತವಾಗಿ ರಾಮದುರ್ಗದ ಐದು ಪೊಲೀಸ್‌ ಠಾಣೆಯ ಸಿಬ್ಬಂದಿಗಳಿಗೆ ಡೋಣ್‌ ತರಬೇತಿ ನೀಡಿ, ಜನಸಂದಣಿ ಇರುವ ಕಡೆಗಳಲ್ಲಿ ಇದನ್ನು ಉಪಯೋಗಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಾಯವಾಗಲಿದೆ ಎಂದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ