Breaking News

ಕಿಚ್ಚ ಸುದೀಪ ಅಭಿಮಾನಿಯಿಂದವೃದ್ಧೆಗೆ ಮನೆ; ಅಭಿಮಾನಿಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ಕಿಚ್ಚ ಸುದೀಪ ಅಭಿಮಾನಿಯಿಂದ ವೃದ್ಧೆಗೆ ಮನೆ

Spread the love

ಕಿಚ್ಚ ಸುದೀಪ ಅಭಿಮಾನಿಯಿಂದವೃದ್ಧೆಗೆ ಮನೆ; ಅಭಿಮಾನಿಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ
ಕಿಚ್ಚ ಸುದೀಪ ಅಭಿಮಾನಿಯಿಂದ ವೃದ್ಧೆಗೆ ಮನೆ
ಒಂದು ಗುಂಟೆ ಜಾಗದಲ್ಲಿ ಸುಸಜ್ಜಿತ ಮನೆ ನಿರ್ಮಾಣ
ಅಭಿಮಾನಿಯ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ
ಸುದೀಪ್ ಜನ್ಮದಿನದಂದು ಉದ್ಘಾಟನೆಗೆ ಸಿದ್ಧತೆ
ಚಲನಚಿತ್ರ ನಟರ ಅಭಿಮಾನಿ ಎಂದರೆ ಕೇವಲ ಹೊಸ ಸಿನಿಮಾ ಬಂದಾಗ ಮಾತ್ರ ಸಿನಿಮಾ ನೋಡಿ ಎಂಜಾಯ್ ಮಾಡುವುದಲ್ಲ. ಕಿಚ್ವ ಸುದೀಪ ಅಭಿಮಾನಿಯೋರ್ವ ವೃದ್ಧೆಗೆ ಮನೆ ಕಟ್ಟಿ ಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಬೆಳಗಾವಿ ತಾಲೂಕಿನ ಮಾವಿನಹೊಳಿ ಗ್ರಾಮದ ರತ್ನವ್ವ ಚಂದೂರ ಎಂಬ ವೃದ್ಧೆ ತನ್ನ 6 ಜನ ಮೊಮ್ಮಕಳೊಂದಿಗೆ ವಾಸವಾಗಿದ್ದಳು. ತಂದೆ, ತಾಯಿಯನ್ನು ಕಳೆದುಕೊಂಡ ಮೊಮ್ಮಕ್ಕಳಿಗೆ ವೃದ್ಧೆಯೇ ಆಸರೆಯಾಗಿದ್ದಾಳೆ. ಮನೆ ಕೆಲಸ ಮಾಡಿ ಮೊಮ್ಮಕ್ಕಳನ್ನು ಸಾಕುತ್ತಿರುವ ಬಡ ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿದ ಅಭಿಮಾನಿ ಮನೆ ಕಟ್ಟಿಕೊಟ್ಟು ಆದಿಶೇಷ ಚಿತ್ರ ನಟ ಸುದೀಪ್ ಜನ್ಮದಿನದಂದು ಮನೆ ಉದ್ಘಾಟನೆ ಮಾಡಲು ಸಿದ್ಧತೆ ಮಾಡಿದ್ದಾರೆ.
ಮನೆಯೂ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದ ಬಡ ಮಹಿಳೆಗೆ ಒಂದು ಗುಂಟೆ ಜಾಗದಲ್ಲಿ ಸುಸಜ್ಜಿತ ಮನೆ ನಿರ್ಮಾಣ ಮಾಡಿದ್ದಾರೆ. ಮನೆಗೆ ಗಿಲಾವ್, ಪೆಂಟಿಂಗ್, ವೈರಿಂಗ್ ಕಾಮಗಾರಿ ಬಾಕಿ ಉಳಿದಿದ್ದು, ಶೀಘ್ರದಲ್ಲಿಯೇ ಮನೆ ನಿರ್ಮಾಣ ಮುಗಿಸಿ ವೃದ್ಧೆಗೆ ಆಸರೆ ಒದಿಸಲು ಭರ್ಜರಿ ತಯಾರಿ ನಡೆಸಿದ್ದಾನೆ.
ದಿಕ್ಕಿಲ್ಲದ ಜೀವಿಗಳಿಗೆ ಆಸರೆಯಾದ ಮಾನವೀಯ ಕಾರ್ಯ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ನಟರ ಅಭಿಮಾನಿಗಳ ಅಭಿಮಾನ ಹೀಗಿರಬೇಕೆಂದು ತೋರಿಸಿಕೊಟ್ಟ ಆದಿಶೇಷನ ಕಾರ್ಯಕ್ಕೆ ಸುದೀಪ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ