ಮುಧೋಳದಲ್ಲಿ ಒಳಮೀಸಲಾತಿ ಜಾರಿಗೆ ಸಂಭ್ರಮಾಚರಣೆ!
ಸಚಿವ ಆರ್.ಬಿ. ತಿಮ್ಮಾಪುರಗೆ ಹೂವಿನ ಮಾಳೆ, ಬಾಳೆ ಗೊನೆ ನೀಡಿದ ಯುವಕರ
ಮುಧೋಳದಲ್ಲಿ ಒಳಮೀಸಲಾತಿ ಜಾರಿಗೆ ಸಂಭ್ರಮಾಚರಣೆ!
ಸಚಿವ ಆರ್.ಬಿ. ತಿಮ್ಮಾಪುರಗೆ ಹೂವಿನ ಮಾಳೆ, ಬಾಳೆ ಗೊನೆ ನೀಡಿದ ಯುವಕರು
ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂತಸ
ಎಸ್ಸಿ ಎಡಗೈ ಸಮುದಾಯದ ಮುಖಂಡರು ಯುವಕರಿಂದ ಸನ್ಮಾನ
ರಾಜ್ಯ ಸರ್ಕಾರ ಇತ್ತೀಚೆಗೆ ಒಳಮೀಸಲಾತಿಯನ್ನು ಜಾರಿಗೆ ತಂದ ಹಿನ್ನೆಲೆ, ಮುಧೋಳ ನಗರದಲ್ಲಿ ಸಂಭ್ರಮದ ವಾತಾವರಣ ಕಂಡುಬಂತು. ಈ ಮಹತ್ವದ ನಿರ್ಧಾರಕ್ಕೆ ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಾರ್ವಜನಿಕರು ಸಂಭ್ರಮಾಚರಣೆ ನಡೆಸಿದರು.
ಒಳಮೀಸಲಾತಿ ಜಾರಿಗೆ ರಾಜ್ಯದಲ್ಲಿ ಹಿನ್ನಲೆ ಮೂಡಿದ್ದು, ಮುಧೋಳ ನಗರದಲ್ಲಿ ಭಾರೀ ಸಂಭ್ರಮಾಚರಣೆ ನಡೆಯಿತು. ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಜನತೆ ಸಂತೋಷ ವ್ಯಕ್ತಪಡಿಸಿದರು. ಎಸ್ಸಿ ಎಡಗೈ ಸಮುದಾಯದ ಮುಖಂಡರು ಹಾಗೂ ಯುವಕರು ರಾಜ್ಯದ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ತಿಮ್ಮಾಪುರ ಅವರಿಗೆ ಹೂವಿನ ಮಳೆ ಸುರಿಸಿ, ಬಾಳೆ ಗೊನೆ ನೀಡಿ ಅಭಿನಂದನೆ ಸಲ್ಲಿಸಲಾಯಿತು. ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ವಿವಿಧ ಸಮುದಾಯದ ಜನರು ಭಾಗವಹಿಸಿ ಹರ್ಷ ವ್ಯಕ್ತಪಡಿಸಿದರು.
Laxmi News 24×7