Breaking News

ಸು ಫ್ರಮ್ ಸೋ’ ಸಿನಿಮಾ (Su From So Movie) ಮೂರನೇ ವಾರಕ್ಕೆ ಕಾಲಿಟ್ಟಿದೆ

Spread the love

ಸು ಫ್ರಮ್ ಸೋ’ ಸಿನಿಮಾ (Su From So Movie) ಮೂರನೇ ವಾರಕ್ಕೆ ಕಾಲಿಟ್ಟಿದೆ. ಅಚ್ಚರಿಯ ವಿಚಾರ ಏನೆಂದರೆ ಸೋಮವಾರವೂ ಅನೇಕ ಶೋಗಳು ಸೋಲ್ಡ್​​ಔಟ್ ಆಗಿವೆ. ಕನ್ನಡದ ಸಿನಿಮಾ ಒಂದು ಈ ರೀತಿಯಲ್ಲಿ ಮೋಡಿ ಮಾಡುತ್ತಿರುವುದು ಇದೇ ಮೊದಲು ಎಂದರೂ ತಪ್ಪಾಗಲಾರದು. ಈ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 56 ಸಾವಿರ ಮಂದಿ ವೋಟ್ ಮಾಡಿದ್ದು, 9.5 ರೇಟಿಂಗ್ ಪಡೆದುಕೊಂಡಿದೆ. ಈ ಚಿತ್ರದ ಅಬ್ಬರ ಇನ್ನೂ ಕೆಲ ವಾರ ಸಾಗುವ ನಿರೀಕ್ಷೆ ಇದೆ. ಸಿನಿಮಾಗೆ ಬೆಂಗಳೂರಿನಲ್ಲಿ 450ಕ್ಕೂ ಅಧಿಕ ಶೋಗಳು ಸಿಕ್ಕಿವೆ.

‘ಸು ಫ್ರಮ್ ಸೋ’ ಸಿನಿಮಾ ರಿಲೀಸ್ ಆಗಿದ್ದು ಜುಲೈ 25ರಂದು. ಈಗಾಗಲೇ ಸಿನಿಮಾ ಎರಡು ವಾರಗಳನ್ನು ಪೂರ್ಣಗೊಳಿಸಿ, ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೂರನೇ ಸೋಮವಾರ ಸಿನಿಮಾಗೆ ಶುಭ ಸುದ್ದಿಯನ್ನೇ ತಂದಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾಗಳು ಹೌಸ್​ಫುಲ್ ಪ್ರದರ್ಶನ ಕಾಣುತ್ತಿವೆ. ರಾತ್ರಿ ಶೋಗಳಿಗೆ ಒಂದು ದಿನ ಮೊದಲೇ ಬುಕಿಂಗ್ ನಡೆಯುತ್ತಿದ್ದು, ಕೆಲವು ಶೋಗಳು ಫಾಸ್ಟ್ ಫಿಲ್ಲಿಂಗ್ ಹಂತಕ್ಕೆ ಬಂದಿವೆ.

ಇನ್ನು, ‘ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್​ಗಳು ಶೋ ನೀಡುತ್ತಿಲ್ಲ’ ಎಂಬ ಪರಿಸ್ಥಿತಿ ಈಗ ಬದಲಾಗಿದೆ. ‘ಸು ಫ್ರಮ್ ಸೋ’ಗೆ ಅನೇಕ ಮಲ್ಟಿಪ್ಲೆಕ್ಸ್​ಗಳು 10ರಿಂದ 15 ಶೋಗಳನ್ನು ನೀಡುತ್ತಿವೆ. ಈ ಎಲ್ಲಾ ಶೋಗಳು ಹೌಸ್​ಫುಲ್ ಪ್ರದರ್ಶನ ಕಾಣುತ್ತಿವೆ. ಈ ಚಿತ್ರದ ಕಲೆಕ್ಷನ್ ಹೀಗೆಯೇ ಮುಂದುವರಿದರೆ ಇದೇ ವಾರ ಸಿನಿಮಾ 50 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಮೂರನೇ ವಾರ ಚಿತ್ರಕ್ಕೆ ಬೆಳಿಗ್ಗೆ 7.50ಕ್ಕೆ ಶೋ ಪ್ರದರ್ಶನ ಮಾಡುತ್ತಿರುವುದು ಇದೇ ಮೊದಲು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ