Breaking News

10 ದಿನದೊಳಗೆ ಬೆಳೆ ಸಾಲ ನೀಡದಿದ್ದರೇ ಉಗ್ರ ಹೋರಾಟ… ಮುತಗಾ ಪಿಕೆಪಿಎಸ್ ವಿರುದ್ಧ ಡಿಸಿಗೆ ಮನವಿ…

Spread the love

10 ದಿನದೊಳಗೆ ಬೆಳೆ ಸಾಲ ನೀಡದಿದ್ದರೇ ಉಗ್ರ ಹೋರಾಟ…
ಮುತಗಾ ಪಿಕೆಪಿಎಸ್ ವಿರುದ್ಧ ಡಿಸಿಗೆ ಮನವಿ…
ಮುತಗಾ ಪಿಕೆಪಿಎಸನಿಂದ ಕಳೆದ ಮೂರು ವರ್ಷದಿಂದ ರೈತರಿಗೆ ಬೆಳೆ ಸಾಲ ನೀಡಲಾಗಿಲ್ಲ. 10 ದಿನದೊಳಗೆ ಸಾಲ ವಿತರಿಸದಿದ್ದರೇ ಉಗ್ರ ಪ್ರತಿಭಟನೆ ನಡೆಸುವುದಾಗಿ ಮುತಗಾದ ರೈತರು ಎಚ್ಚರಿಕೆಯನ್ನು ನೀಡಿದ್ದಾರೆ.
ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಕ್ಕೆ ಶ್ರೀರಾಮಸೇನಾ ಹಿಂದೂಸ್ಥಾನನ ಸಂಸ್ಥಾಪಕ ರಮಾಕಾಂತ್ ಕೊಂಡೂಸ್ಕರ್ ನೇತೃತ್ವದಲ್ಲಿ ಆಗಮಿಸಿದ ಮುತಗಾದ ರೈತರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮಸೇನಾ ಹಿಂದೂಸ್ಥಾನನ ಸಂಸ್ಥಾಪಕ ರಮಾಕಾಂತ್ ಕೊಂಡೂಸ್ಕರ್ ಒಂದೆಡೇ ಬಿಡಿಸಿಸಿ ಬ್ಯಾಂಕ್ ಜಿಲ್ಲೆಯ ರೈತರಿಗೆ 4 ವರೆ ಸಾವಿರ ಕೋಟಿ ಬೆಳೆ ಸಾಲವನ್ನು ನೀಡಲಾಗಿದೆ
ಎಂದು ಹೇಳುತ್ತದೆ. ಆದರೇ, ಕಳೆದ ಮೂರು ವರ್ಷದಿಂದ ಮುತಗಾ ಪಿಕೆಪಿಎಸ್ ರೈತರಿಗೆ ಸಾಲವನ್ನು ವಿತರಿಸಿಲ್ಲ. 2 ವರ್ಷದಿಂದ ಉಪವಾಸ ಸತ್ಯಾಗ್ರಹ ನಡೆಸಿ, ನಿರಂತರವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಜನಪ್ರತಿನಿಧಿಗಳು ಇದಕ್ಕೆ ಸ್ಪಂದಿಸಿ ಸಾಲ ಕೊಡಿಸಿ, ಭ್ರಷ್ಟಾಚಾರ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದ್ದರು.
ಆದರೇ ಇದು ವರೆಗೂ ಸಾಲ ಸಿಕ್ಕಿಲ್ಲ. 10 ದಿನದೊಳಗೆ ರೈತರಿಗೆ ಸಾಲ ನೀಡದಿದ್ದರೇ, ಮತ್ತೇ ಉಗ್ರ ಹೋರಾಟ ನೀಡಲಾಗುತ್ತದೆ ಎಂದು ರೈತ ಪ್ರಮುಖ ರಮಾಕಾಂತ್ ಕೊಂಡೂಸ್ಕರ್ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮುತಗಾದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ