Breaking News

ಉ.ಕ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ್ರೇ … ಪಕ್ಷದ ಹಿರಿಯರ ಅವಕೃಪೆಗೆ ಕಾರಣ…

Spread the love

ಉ.ಕ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ್ರೇ … ಪಕ್ಷದ ಹಿರಿಯರ ಅವಕೃಪೆಗೆ ಕಾರಣ…
ಅಭಿವೃದ್ಧಿಗೆ ಹೋರಾಟ ಮಾಡಿದ್ರೇ ಕಾಲೆಳೆಯುತ್ತಾರೆ; ಮಾಜಿ ಸಚಿವ ಎಸ್.ಆರ್. ಪಾಟೀಲ್
ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೋರಾಟ ಮಾಡಿದ್ರೆ ಕಾಲೆಳೆಯುವ ಕೆಲಸ ಮಾಡ್ತಾರೆ.
ಉತ್ತರ ಕರ್ನಾಟಕದ ರಾಜಕಾರಣಿಗಳು ಅಭಿವೃದ್ದಿಗಾಗಿ ಹೋರಾಟ ಮಾಡಿದ್ರೆ. ಪಕ್ಷದ ಹಿರಿಯರ ಅವಕೃಪೆಗೆ ಕಾರಣರಾಗ್ತಾರೆ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ್ ಹೇಳಿದರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು “ಉತ್ತರ ಕರ್ನಾಟಕದ ಅಭಿವೃದ್ಧಿಯ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ತೋರಿವೆ.
ಈ ಭಾಗದ ಜನತೆಗೆ ಎಲ್ಲಾ ಪಕ್ಷಗಳು ಅನ್ಯಾಯ ಮಾಡಿವೆ. ಉತ್ತರ ಕರ್ನಾಟಕದ ಬಗ್ಗೆ ಯಾವುದೇ ಪಕ್ಷಕ್ಕೂ ನಿಜವಾದ ಕಾಳಜಿ ಇಲ್ಲ. ಎಲ್ಲಾ ಪಕ್ಷಗಳೂ ಈ ಭಾಗವನ್ನು ನಿರ್ಲಕ್ಷ್ಯ ಮಾಡಿವೆ. ಅಭಿವೃದ್ಧಿ ಯೋಜನೆಗಳು ಕೇವಲ ಕಾಗದದಲ್ಲೇ ಉಳಿದಿವೆ,” ಎಂದು ತೀವ್ರವಾಗಿ ಟೀಕಿಸಿದರು.
“ಉತ್ತರ ಕರ್ನಾಟಕ ಪ್ರಾದೇಶಿಕ ಯೋಜನೆ (UKP) ನೆನೆಗುದಿಗೆ ಬಿದ್ದಿದ್ದು ಈಗಾಗಲೇ 60 ವರ್ಷಗಳಾಗಿದೆ. ಇಂತಹ ಸ್ಥಿತಿಯಲ್ಲಿ ರಾಜಕಾರಣಿಗಳಿಗೆ ಈ ಭಾಗದ ಅಭಿವೃದ್ಧಿ ಮಾಡಲು ಮನಸ್ಸಿದೆ ಎಂಬ ನಂಬಿಕೆ ನನಗಿಲ್ಲ.
ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಟ ಮಾಡಿದರೆ, ಕೆಲವರು ಕಾಲೆಳೆಯುವ ಕೆಲಸ ಮಾಡ್ತಾರೆ. ಈ ಭಾಗದ ಜನಪ್ರತಿನಿಧಿಗಳು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದರೆ, ತಮ್ಮದೇ ಪಕ್ಷದ ಹಿರಿಯರ ಅವಕೃಪೆಗೆ ಗುರಿಯಾಗುತ್ತಾರೆ,” ಎಂಬ ಆರೋಪವೂ ಮಾಡಿದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ