Breaking News

ಮಣ್ಣಲ್ಲಿ ಮಣ್ಣಾದ ದೊಡ್ಮನೆಯ ಹಿರಿಜೀವ

Spread the love

ಚಾಮರಾಜನಗರ : ಕನ್ನಡ ಚಿತ್ರರಂಗದ ವರನಟ ಡಾ. ರಾಜ್ ಕುಮಾರ್‌ ಅವರ ಸಹೋದರಿ, ದೊಡ್ಮನೆಯ ಹಿರಿಜೀವವಾಗಿದ್ದ ನಾಗಮ್ಮ ಅವರ ಅಂತಿಮ ವಿಧಿ-ವಿಧಾನ ತಮಿಳುನಾಡಿನ ತಾಳವಾಡಿ ತಾಲೂಕಿನ ಗಾಜನೂರಿನ ತೋಟದಲ್ಲಿ ಶನಿವಾರ ಮಧ್ಯಾಹ್ನ 2ರ ಸುಮಾರಿಗೆ ಜರುಗಿತು.‌

ದೊಡ್ಮನೆ ಹಿರಿಕೊಂಡಿ, ರಾಜ್ ಪರಿವಾರದ ಮಕ್ಕಳನ್ನು ಎತ್ತಿ ಆಡಿಸಿ ಬೆಳೆಸಿದ್ದ ಎಲ್ಲರ ಅಕ್ಕರೆಯ ನಾಗಮ್ಮ ವಯೋಸಹಜವಾಗಿ ಶುಕ್ರವಾರ ನಿಧನರಾದರು‌‌‌. ಅಣ್ಣಾವ್ರು ಬಹಳ ಪ್ರೀತಿಯಿಂದ ಕಟ್ಟಿಸಿದ ಮನೆಯಲ್ಲಿ ನಾಗಮ್ಮರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಗಾಜನೂರಿನ ತೋಟದಲ್ಲಿ ನಾಗಮ್ಮರ ಪುತ್ರರು, ಡಾ. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್, ಪುತ್ರಿ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘಣ್ಣ ಕುಟುಂಬದ ಸದಸ್ಯರು ಹಾಗೂ ಬಂಧು-ಬಳಗ ನಾಗಮ್ಮಗೆ ಅಂತಿಮ ನಮನ ಸಲ್ಲಿಸಿ, ಕಂಬನಿ ಮಿಡಿದರು.

ವರನಟ ಡಾ. ರಾಜ್ ಕುಮಾರ್ ಹಾಗೂ ಸಹೋದರಿ ನಾಗಮ್ಮ ಗುಂಬಳ್ಳಿ ಸಮೀಪದ ಮಠದಲ್ಲಿ ಗುರುವಿನ ಮಕ್ಕಳ ದೀಕ್ಷೆ ಪಡೆದಿದ್ದರಿಂದ, ಗುರುಮಠದ ಸಂಪ್ರದಾಯದಂತೆ ಮಠದ ರಾಘವೇಂದ್ರ ಸ್ವಾಮಿ ನೇತೃತ್ವದ ತಂಡ ವಿಧಿ -ವಿಧಾನವನ್ನು ನೆರವೇರಿಸಿದರು.

ಪತಿ ವೆಂಕಟೇಗೌಡ ಸಮಾಧಿ ಪಕ್ಕದಲ್ಲೇ ವಿಧಿ-ವಿಧಾನದಂತೆ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ, ಮಣ್ಣು ಮಾಡಲಾಯಿತು


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ