Breaking News

ಅಪಾರ್ಟ್​ಮೆಂಟ್ ಗೋಡೆ ಮೇಲೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಬರಹ

Spread the love

ಬೆಂಗಳೂರು: ನಗರದ ಅಪಾರ್ಟ್ ಮೆಂಟ್ ಗೋಡೆಯೊಂದರ ಮೇಲೆ ಬಾಂಬ್ ಸ್ಫೋಟಿಸುವುದಾಗಿ ಬರೆದು ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಲ್ಫೈನ್ ಪಿರಮಿಡ್ ಅಪಾರ್ಟ್ಮೆಂಟ್ ನ ಗೋಡೆ ಮೇಲೆ ಈ ಬೆದರಿಕೆಯ ಬರಹ ಪತ್ತೆಯಾಗಿದೆ.

ಅಪಾರ್ಟ್ ಮೆಂಟ್ ನಿವಾಸಿಗಳು ಇದನ್ನು ಕಂಡು ಕೂಡಲೇ ಮಾಹಿತಿ ನೀಡಿದ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ‘ಪಾಕಿಸ್ತಾನದಿಂದಲೇ ನಾನು ಭಾರತವನ್ನು ಸ್ಫೋಟಿಸುತ್ತೇನೆ’ ಎಂದು ಕಂದು ಬಣ್ಣದಲ್ಲಿ ಇಂಗ್ಲಿಷ್ ನಲ್ಲಿ ಬರೆಯಲಾಗಿದೆ. ನೂರಾರು ಫ್ಲಾಟ್ ಗಳಿರುವ ಈ ಅಪಾರ್ಟ್ ಮೆಂಟ್ ನ ಕ್ಲಬ್ ಹೌಸ್ ಗೋಡೆ ಬದಿಯಲ್ಲಿ ಬೆದರಿಕೆ ಇರುವ ಬರಹ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಡೆ ಬರಹ ಕುರಿತಂತೆ ಸಿಸಿಟಿವಿ ಪರಿಶೀಲಿಸಿದಾಗ ಸುಮಾರು 12 ರಿಂದ 13 ವರ್ಷದ ಮೂವರು ಹೆಣ್ಣುಮಕ್ಕಳು ಬರೆದಿರುವಂತೆ ಕಂಡುಬಂದಿದೆ. ಸದ್ಯ ಪೊಲೀಸರು ಗಂಭೀರ ಸ್ವರೂಪವಲ್ಲದ ಅಪರಾಧ ಪ್ರಕರಣ (ಎನ್ ಸಿಆರ್ ) ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಮೇಲ್ನೊಟಕ್ಕೆ ಮಕ್ಕಳೇ ಬರೆದಿರುವುದು ಗೊತ್ತಾಗಿದೆ‌. ಮಕ್ಕಳಿಗೆ ಯಾರಾದರೂ ಬರೆಯಲು ಸೂಚಿಸಿದ್ದಾರಾ? ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ