Breaking News

ಇಳಕಲ್ ನಗರದಲ್ಲಿ ಗಾಂಜಾ ಘಾಟು

Spread the love

ಇಳಕಲ್ ನಗರದಲ್ಲಿ ಗಾಂಜಾ ಘಾಟು
ಮಧ್ಯದ ಬೆಲೆ ಹೆಚ್ಚಾಗಿರುವುದರಿಂದ ಕಡಿಮೆ ಬೆಲೆಯಲ್ಲಿ ಗಾಂಜಾ ನಶೆ ಮೊರೆ ಹೋಗುತ್ತಿರುವ ಯುವಕರು
16 ರಿಂದ 25 ವಯಸ್ಸಿನ ಯುವಕರೇ ಹೆಚ್ಚಾಗಿ ಗಾಂಜಾ ಸೇವನೆ ಕಾಲೇಜು ವಿದ್ಯಾರ್ಥಿಗಳಿಗೆ
ವಿತರಣೆಯಾಗುತ್ತಿದೆಯಾ ಗಾಂಜಾ ಮತ್ತು ಡ್ರಗ್ಸ್ ಪೊಲೀಸರಿಗೆ ಡ್ರಗ್ಸ್ ಪೆಡ್ಲರಗಳನ್ನೇ ಹುಡುಕುವುದೇ ಸವಾಲ್ ಗಾಂಜಾ ಮಾರುವವರ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದ ಭೀಮ್ ಆರ್ಮಿ ಸಂಘಟನೆಯವರು ಈ ಕುರಿತು ಒಂದು 
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಮಧ್ಯದ ಬೆಲೆ ಹೆಚ್ಚಾಗಿರುವುದರಿಂದ ಕಡಿಮೆ ಬೆಲೆಯಲ್ಲಿ ಗಾಂಜಾ ನಶೆ ಮೊರೆ ಹೋಗುತ್ತಿರುವ ಯುವಕರನ್ನು ಗುರಿಯಾಗಿರಿಸಿಕೊಂಡು ಡ್ರಗ್ಸ್ ಸಪ್ಲೈಯರ್ ಗಳು ಗಾಂಜಾ ಮಾರಾಟ ಮಾಡುತ್ತಿದ್ದಾರೆ ನಗರದ ದುರ್ಗಾದೇವಿ ಗಲ್ಲಿಯ ಬಳಿ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರೋ ಸೂಪರ್ ಮಾರ್ಕೆಟ್ ಕಟ್ಟಡ ಹಾಳು ಕೊಂಪೆಯಾಗಿದೆ ಇಳಕಲ್ ಸುತ್ತಮುತ್ತ ನಿರ್ಜನ ಸ್ಥಳದಲ್ಲಿ ಯುವಕರಿದರೆ ಅಲ್ಲಿ ಗಾಂಜಾ ಅಲ್ಲಿ ಮೂಗಿಗೆ ವಾಸನೆ ಹೊಡೆಯುತ್ತದೆ ಇದ್ದರಿಂದ ಸ್ಥಳಿಯರು ರೋಸಿ ಹೋಗಿದ್ದಾರೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ
ಭೀಮ ಆರ್ಮಿ ಸಂಘಟನೆಯ ಸದಸ್ಯರು ಮಾತನಾಡಿ ಇಳಕಲ ನಗರದಲ್ಲಿ 16 ರಿಂದ 25 ವಯಸ್ಸಿನ ಯುವಕರೇ ಹೆಚ್ಚಾಗಿ ಗಾಂಜಾ ಸೇವನೆ ಮಾಡುತ್ತಿದ್ದಾರೆ ಗಾಂಜಾ ಸೇವಿಸಿ ಜಗಳವಾಡದು ಹುಡಗಿಯರನ್ನು ಚುಡಾಯಿಸುವುದು ಇದ್ದರಿಂದ ಜನರು ರೋಸಿ ಹೋಗಿದ್ದಾರೆ ಗಾಂಜಾ ಸಪ್ಲೈ ಮಾಡುವವರ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು
ಮತ್ತೋರ್ವ ಭೀಮ ಆರ್ಮಿ ಸಂಘಟನೆಯ ಸದಸ್ಯರು ಮಾತನಾಡಿ, ನಾನು ನನ್ನ ಸ್ನೇಹಿತ ವಾಯುವಿಹಾರಕ್ಕೆ ಬಂದಾಗ ನಗರದ ದುರ್ಗಾದೇವಿ ಗಲ್ಲಿಯ ಬಳಿ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರೋ ಸೂಪರ್ ಮಾರ್ಕೆಟ್ ಕಟ್ಟಡದಲ್ಲಿ ಯುವಕರಿಬ್ಬರು ಇದ್ದರು ಅವರು ಎನ ಮಾಡುತ್ತಿದ್ದಾರೆ ಅಂತಾ ಗಮನಿಸಿದಾಗ ಅವರ ಕೈಯಲ್ಲಿ ಕಪ್ಪು ಬಣ್ಣದ ವಸ್ತು ಕೈಯಲ್ಲಿ ಕಾಣಿಸಿತು ಗಾಂಜಾ ಸೇದುತ್ತಿರುವುದು ಕಂಡು ಬಂದಿತ್ತು ಈ ಸೂಪರ್ ಮಾರ್ಕೆಟ್ ಹಾಳು ಕಂಪ್ಪೆಯಾಗಿದೆ ಎಂದರು
ಬಾಗಲಕೋಟೆ ಜಿಲ್ಲೆಯಲ್ಲಿ ವೀಕೆಂಡ್ ಗಳಲ್ಲಿ ಡ್ರಗ್ಸ್ ಗಾಂಜಾ ಸಪ್ಲೈ ಹೆಚ್ಚಾಗಿರುತ್ತದೆ ಡ್ರಗ್ಸ್ ಪೆಡ್ಲರ್ ಗಳನ್ನೇ ಹುಡುಕಿ ಬಾಗಲಕೋಟೆ ಜಿಲ್ಲಾ ಪೊಲೀಸರು ಗಾಂಜಾ ಹಾವಳಿಗೆ ಬ್ರೇಕ್ ಹಾಕಬೇಕಾಗಿದೆ

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ