Breaking News

ಇದು ಬೆಂಗಳೂರಿನ ಆರ್ಮಿ ಫ್ಯಾಮಿಲಿ

Spread the love

ಡೆಹ್ರಾಡೂನ್/ಬೆಂಗಳೂರು: ಇಲ್ಲಿನ ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ)ಯಲ್ಲಿ 2025ರ ಪಾಸಿಂಗ್​ ಔಟ್​ ಪರೇಡ್ ಶನಿವಾರ​ ನಡೆಯಿತು. ಈ ಪರೇಡ್​ನಲ್ಲಿ 451 ಕೆಡೆಟ್​ಗಳು ಭಾಗಿಯಾಗಿದ್ದು, ತರಬೇತಿ ಪಡೆದು ಸೇನೆಗೆ ಸೇರ್ಪಡೆಯಾದರು. ಈ ವೇಳೆ ಅಭ್ಯರ್ಥಿಗಳ ಕುಟುಂಬಸ್ಥರು ಇದ್ದರು. ಆದರೆ ಬೆಂಗಳೂರಿನ ಕುಟುಂಬವೊಂದು ವಿಶೇಷ ಕಾರಣಕ್ಕೆ ಎಲ್ಲರ ಗಮನ ಸೆಳೆಯಿತು.

ಸೇನಾ ಪಡೆಗಳಲ್ಲಿ ಒಂದೇ ಕುಟುಂಬದ ಮೂವರು: ಹೌದು, ತಂದೆ ವಾಯುಪಡೆಯಲ್ಲಿದ್ದರೆ ಅವರ ಹಿರಿಯ ಮಗ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಕಿರಿಯ ಮಗ ಅನ್ಮೋಲ್ ನವಾದ್ ಭೂಸೇನೆಗೆ ನೇಮಕಗೊಂಡಿದ್ದಾರೆ.

ಬೆಂಗಳೂರು ಮೂಲದ ಅನ್ಮೋಲ್ ನವಾದ್, ದೇಶ ಸೇವೆ ಮಾಡಲು ಮಿಲಿಟರಿ ಸೇರಲು ನಿರ್ಧರಿಸಿ, ಭಾರತೀಯ ಮಿಲಿಟರಿ ಅಕಾಡೆಮಿಯಿಂದ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದರು. ಈ ಮೂಲಕ ಅನ್ಮೋಲ್ ಸೇನಾಧಿಕಾರಿಯಾಗಿ ನೇಮಕಗೊಂಡರು.

ನವಾದ್ ಭೂಸೇನೆಗೆ ನೇಮಕದೊಂದಿಗೆ ಮೂರೂ ಸಶಸ್ತ್ರ ಪಡೆಗಳಲ್ಲಿ ಕುಟುಂಬದ ಮೂವರು ಇದ್ದಂತಾಯಿತು. ಆದರೆ, ಇದಕ್ಕೂ ಮೊದಲು ಸವಾದ್​ ಸಹೋದರ ನೌಕಾಪಡೆಗೆ ಸೇರಿದ್ದರು. ಅನ್ಮೋಲ್ ಅವರ ತಂದೆ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅನ್ಮೋಲ್ ಅವರ ಹಿರಿಯ ಸಹೋದರ ಆರ್ಯನ್ ನವಾದ್ ಭಾರತೀಯ ನೌಕಾಪಡೆಯಲ್ಲಿ ಪೈಲಟ್​ ಆಗಿ ಸೇವೆ ಸಲ್ಲಿಸುತ್ತಿದ್ದರೆ, ಅನ್ಮೋಲ್ ಅವರ ತಂದೆ ಏರ್ ಕಮಾಂಡರ್​ ಬಸಂತ್ ನವಾದ್ ಪ್ರಸ್ತುತ ದೆಹಲಿಯಲ್ಲಿ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ