Breaking News

ಹೊಸ ವರ್ಷಕ್ಕೆ ಕಿಕ್ಕೇರಿಸಲು ರೆಡಿಯಾಗಿದ್ದ ಡ್ರಗ್ಸ್ ಪೆಡ್ಲರ್‌ಗಳ ಬಂಧನ..!

Spread the love

ಬೆಂಗಳೂರು, ಡಿ.16- ಮಾದಕ ವಸ್ತುಗಳನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಅಂತಾರಾಜ್ಯ ನಾಲ್ವರು ಡ್ರಗ್ ಪೆಡ್ಲರ್‍ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 1 ಕೋಟಿ 15 ಲಕ್ಷ ಬೆಲೆಯ ಹ್ಯಾಶಿಶ್ ಆಯಿಲ್, ಗಾಂಜಾ ವಶಪಡಿಸಿಕೊಂಡಿದ್ದಾರೆ. ತಮಿಳುನಾಡು ಕೃಷ್ಣಗಿರಿಯ ಕಮಲೇಶನ್ (31), ಸತೀಶ್‍ಕುಮಾರ್ (27), ಹೆಬ್ಬಾಳದ ಕೆಂಪಾಪುರದ ತಿರುಪಾಲ್ ರೆಡ್ಡಿ (32) ಮತ್ತು ಆರ್‍ಟಿ ನಗರದ ಏಜಾಜ್ ಪಾಷ (45) ಬಂಧಿತ ಡ್ರಗ್ ಪೆಡ್ಲರ್‍ಗಳು.

ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಹೆಬ್ಬಾಳದ ಕೆಂಪಾಪುರ, ವೆಂಕಟೇಗೌಡ ಲೇಔಟ್‍ನ ಶ್ರೀ ಚೌಡೇಶ್ವರಿ ನಿಲಯ ಎಂಬ ಮನೆಯಲ್ಲಿ ನಾಲ್ವರು ಮಾದಕ ವಸ್ತು ಗಾಂಜಾವನ್ನು ಸಂಗ್ರಹಿಸಿಟ್ಟಿದ್ದಾರೆಂಬ ಮಾಹಿತಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರಿಗೆ ಲಭಿಸಿದೆ.ಈ ಆಧಾರದ ಮೇರೆಗೆ ಸಿಸಿಬಿ ಅಧಿಕಾರಿಗಳ ತಂಡ ಮನೆ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸಿ ಸುಮಾರು 1 ಕೋಟಿ 15 ಲಕ್ಷ ಬೆಲೆಬಾಳುವ 5 ಕೆಜಿ 600 ಗ್ರಾಂ ತೂಕದ ಹ್ಯಾಶಿಶ್ ಆಯಿಲ್, 3 ಕೆಜಿ 300 ಗ್ರಾಂ ತೂಕದ ಗಾಂಜಾ, 1 ಕಾರು, 1 ಬೈಕ್ ಹಾಗೂ 5500ರೂ. ನಗದು ವಶಪಡಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ