Breaking News

ಜೈಲರ್ ಮತ್ತು ಕಾರಾಗೃಹ ವೀಕ್ಷಕರು ಹೊಡೆದಾಡಿಕೊಂಡಿರುವ ಘಟನೆ

Spread the love

ಹಾವೇರಿ : ಜೈಲರ್ ಮತ್ತು ಕಾರಾಗೃಹ ವೀಕ್ಷಕರು ಹೊಡೆದಾಡಿಕೊಂಡಿರುವ ಘಟನೆ ನಗರದ ಸಮೀಪವಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಜಿಲ್ಲಾ ಕಾರಾಗೃಹದ ಜೈಲರ್ ತಿಮ್ಮಣ್ಣ ಮತ್ತು ವೀಕ್ಷಕ ಪುಂಡಲೀಕ ಪವಾರ ನಿನ್ನೆ ಮಧ್ಯಾಹ್ನ ಬಡಿದಾಡಿಕೊಂಡಿದ್ದಾರೆ.  ಹೊಡೆದಾಟದ ವೇಳೆ ಇಬ್ಬರೂ ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ವೈಯಕ್ತಿಕ ಕಾರಣ ಮತ್ತು ಕೆಲಸದ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಆರೋಪ ಪ್ರತ್ಯಾರೋಪ ಮಾಡಿಕೊಂಡು ಪರಸ್ಪರ ಇಬ್ಬರು ದೂರು ದಾಖಲಿಸಿದ್ದಾರೆ.

ಘಟನೆ ಕುರಿತಂತೆ ಇಬ್ಬರನ್ನು ಕರೆಯಿಸಿ ಪೊಲೀಸರು ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. ಹಾವೇರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.


Spread the love

About Laxminews 24x7

Check Also

ಮೆಕ್ಕೆಜೋಳ ರಾಶಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು – 4 ಲಕ್ಷ ರೂ. ಮೌಲ್ಯದ ಜೋಳ ಸುಟ್ಟು ಭಸ್ಮ

Spread the love ಹಾವೇರಿ: 8 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ  ರಾಶಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಮೆಕ್ಕೆಜೋಳದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ