Breaking News

ಕರವೇ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಬೆಳಗಾವಿಯಲ್ಲಿ ಫಾಲೋವರ್ ಎಂಬ ಮರಾಠಿ ಸಿನಿಮಾ ರದ್ದು

Spread the love

ಬೆಳಗಾವಿ : ಟ್ರೇಲರ್​​ನಲ್ಲಿ ಬೆಳಗಾವಿ ಮಹಾರಾಷ್ಟ್ರದ್ದು ಎಂದು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು “ಫಾಲೋವರ್” ಮರಾಠಿ ಚಿತ್ರ ವಿರುದ್ಧ ಸಿಡಿದೆದ್ದಿದ್ದಾರೆ. ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಸಿನಿಮಾ ಪ್ರದರ್ಶನ‌ ರದ್ದು ಪಡಿಸಲಾಗಿದೆ.

ಗಡಿ ವಿವಾದದ ಬಗ್ಗೆ ಬೆಳಕು ಚೆಲ್ಲುವ ಚಿತ್ರ ಇದಾಗಿದೆ ಎಂದು ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರವೇ ಕಾರ್ಯಕರ್ತರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಫಾಲೋವರ್ ಚಿತ್ರಪ್ರದರ್ಶನವನ್ನು ಟಾಕೀಸ್ ಸಿಬ್ಬಂದಿ ರದ್ದುಪಡಿಸಿದ್ದಾರೆ. ಬೆಳಗಾವಿ ನಗರದ ಬಿಇ ಪದವೀಧರ ಹರ್ಷದ್ ನಲವಡೆ ಈ ಸಿನಿಮಾವನ್ನ ನಿರ್ಮಿಸಿದ್ದಾರೆ.

ಬೆಳಗಾವಿ ಐನಾಕ್ಸ್ ಚಿತ್ರ ಮಂದಿರದಲ್ಲಿ ಇಂದು ರಾತ್ರಿ 8 ಗಂಟೆಗೆ ಮೊದಲ ಪ್ರದರ್ಶನ ನಡೆಯಬೇಕಿತ್ತು. ಈ ಸಿನಿಮಾದ ಟ್ರೇಲರ್​ನಲ್ಲಿ ಯಳ್ಳೂರ ಮಹಾರಾಷ್ಟ್ರ ನಾಮಫಲಕ ವಿವಾದ ಪ್ರಸ್ತಾಪಿಸಲಾಗಿದೆ. ಅದೇ ರೀತಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎಂಬ ವಿಚಾರವನ್ನು ಉಲ್ಲೇಖಿಸಿದ್ದಾರೆ ಎಂದು ಕರವೇ ಕಾರ್ಯಕರ್ತರು ಆರೋಪಿಸಿ, ಚಿತ್ರದ ತಂಡದ ವಿರುದ್ಧ ಕಿಡಿಕಾರಿದರು.

ಸ್ಥಳಕ್ಕೆ ಖಡೇಬಜಾರ್ ಎಸಿಪಿ ಶೇಖರಪ್ಪ, ಸಿಪಿಐ ಅಲ್ತಾಫ್ ಮುಲ್ಲಾ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಕರವೇ ಕಾರ್ಯಕರ್ತರ ಆರೋಪವನ್ನು ಚಿತ್ರತಂಡ ತಳ್ಳಿ ಹಾಕಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ