Breaking News

ಕರ್ನಾಟಕ ಬಂದ್​: ಕೆಲವು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

Spread the love

ಬೆಂಗಳೂರು : ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಇಂದು ಬಂದ್​ಗೆ ಕರೆ ಕೊಟ್ಟಿದ್ದು, ಕೆಲವು ಜಿಲ್ಲೆಗಳು ನೀರಸ ಪ್ರತಿಕ್ರಿಯೆ ತೋರಿದೆ.​​

ಗಣಿ ನಾಡು ಬಳ್ಳಾರಿಯಲ್ಲಿ ಎಂದಿನಂತೆ ಅಂಗಡಿ-ಮುಂಗಟ್ಟಿನಿಂದ ಹಿಡಿದು ಎಲ್ಲವೂ ತೆರೆದಿದೆ. ಬಸ್​, ಆಟೋ‌ ಸಂಚಾರವಿದ್ದು ಬಳ್ಳಾರಿ ಮಂದಿ ಬಂದ್​ಗೆ ಬೆಂಬಲ ನೀಡಿಲ್ಲ.

ಆದರೆ ಬೆಳಗ್ಗೆ ಹತ್ತು ಗಂಟೆಗೆ ರಾಯಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನೈತಿಕ ಬೆಂಬಲ ಕೊಡಲು ಕನ್ನಡಪರ ಸಂಘಟನೆಗಳು ತೀರ್ಮಾನಿಸಿವೆ. ಈ ಹಿನ್ನೆಲೆ ಬಳ್ಳಾರಿ ರಾಯಲ್ ವೃತ್ತದಲ್ಲಿ ಪೊಲೀಸರು ನಿಯೋಜನೆಗೊಂಡಿದ್ದಾರೆ. ಬಳ್ಳಾರಿ ರಾಯಲ್​ ಸರ್ಕಲ್​, ಮೋತಿ ಸರ್ಕಲ್ ,

ಸಂಗಮ್ ಸರ್ಕಲ್ ಸೇರಿದಂತೆ ಬಳ್ಳಾರಿ ಬಹುತೇಕ ರಸ್ತೆಗಳಲ್ಲಿ ಪ್ರತಿನಿತ್ಯದಂತೆ ವಾಹನ ಸಂಚಾರ ಸಾಗುತ್ತಿದೆ.ವಿಜಯಪುರದಲ್ಲೂ ನೀರಸ ಪ್ರತಿಕ್ರಿಯೆ : ವಿಜಯಪುರ ಜಿಲ್ಲೆಯಲ್ಲಿಯೀ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಇತರ ಸಂಘ ಸಂಸ್ಥೆಗಳು ಸಾಂಕೇತಿಕವಾಗಿ ಬಂದ್​​ಗೆ ಬೆಂಬಲ ನೀಡಿವೆ. ಸದ್ಯ ಸಹಜ ಸ್ಥಿತಿಯಲ್ಲಿರುವ ವಿಜಯಪುರದಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರವಿದೆ. ಹಾಗೇ ಹೋಟೆಲ್, ಬಾರ್ ಅಂಡ್​ ರೆಸ್ಟೋರೆಂಟ್ ಮಾಲ್​ಗಳು ಚಿತ್ರಮಂದಿರಗಳು ಬಂದ್​ಗೆ ಬೆಂಬಲ ನೀಡಿಲ್ಲ.​ ಆರಂಭ ಎಲ್ಲಿಯೂ ಬಂದ್ ಕಂಡು ಬರದೇ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಅಲ್ಲಲ್ಲಿ ಪೊಲೀಸರು ನಿಯೋಜನೆಗೊಂಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ