ಪರಸ್ಪರ ಸಹಕರಿಸಿ ಹೋಳಿ ಮತ್ತು ರಂಗ ಪಂಚಮಿ ಹಾಗೂ ರಮಜಾನ ಹಬ್ಬವನ್ನು ಆಚರಿಸುವಂತೆ ಖಾನಾಪೂರ ಪೋಲಿಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಲಾಲ್ ಸಾಬ್ ಗೌಂಡಿ ಕರೆ
ಖಾನಾಪೂರ ಪೋಲಿಸ್ ಠಾಣೆಯಲ್ಲಿ ಹೋಳಿ ಹಬ್ಬ ಮತ್ತು ರಮಜಾನ ಮಾಸದ ಹಿನ್ನೆಲೆಯಲ್ಲಿ ಶಾಂತತಾ ಸಭೆ ಆಯೋಜಿಸಿತ್ತು
ಈ ಸಭೆಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಲಾಲ್ ಸಾಬ್ ಗೌಂಡಿ ಅವರು ಮಾತನಾಡಿ ಸಣ್ಣ ಪುಟ್ಟ ವಿಷಯಗಳಿಗೆ ವಾದಗಳನ್ನು ಹುಟ್ಟುಹಾಕದೆ ಪರಸ್ಪರ ಸಹಕರಿಸಿ ಹೋಳಿ ಮತ್ತು ರಂಗ ಪಂಚಮಿ ಹಾಗೂ ರಮಜಾನ ಮಾಸವನ್ನು ಬಹಳ ಉತ್ಸಾಹದಿಂದ ಆಚರಿಸುವಂತೆ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಾಗರೀಕರಿಗೆ ಕರೆ ನೀಡಿದರು.ಯಾವುದೇ ಸಣ್ಣ ಪುಟ್ಟ ಅಥವಾ ಪ್ರಮುಖ ಘಟನೆಗಳು ನಡೆದರೆ ತಕ್ಷಣವೇ ಪೋಲಿಸರಿಗೆ ಮಾಹಿತಿ ನೀಡಲು ಮನವಿ ಮಾಡಿದರು.
ಅದರಂತೆಯೇ ಖಾನಾಪೂರದಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗದಂತೆ ಗಾಂಜಾ ಮಾರಾಟ, ಸೇವನೆ ಇದರ ದುಷ್ಪರಿಣಾಮ ಬೀರುವ ರೀತಿಯ ಬಗ್ಗೆ ಮಾಹಿತಿ ನೀಡಿದರು, ಡ್ರಿಂಕ್ ಆಂಡ್ ಡ್ರೈವ್ ಕೇಸ್ ಗಳು ಹೆಚ್ಚಿಗೆ ಆಗುತ್ತಿವೆ ಇದರ ಕುರಿತು ನಾಗರೀಕರು ಗಮನಹರಿಸಬೇಕು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಕುಡಿದು ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರ ವಾಹನಗಳು ಚಾಲನೆ ಮಾಡ್ಬೇಡಿ ಜಾಗೃತಿ ವಹಿಸಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಚಂಬಣ್ಣ ಹೊಸಮನಿ, ಪ್ರಕಾಶ್ ದೇಶಪಾಂಡೆ, ರವಿ ಕಾಡಗಿ, ಪಂಡಿತ್ ಓಗಲೆ,ಗುಡ್ಡು ತೆಕಡಿ ಸೇರಿದಂತೆ ಇನ್ನಿತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ನಗರಸೇವಕರಾದ ಲಕ್ಷ್ಮಣ್ ಮಾದಾರ, ಪ್ರಕಾಶ್ ಬೈಲೂರಕರ,ಪುಟ್ಟು ಹಾವನೂರ, ಮಲ್ಲೇಶಿ ಪೋಲ್ ಸೇರಿದಂತೆ ಹಿಂದೂ, ಮುಸ್ಲಿಂ ಸಮುದಾಯದ ಬಾಂಧವರು ಉಪಸ್ಥಿತರಿದ್ದರು