Breaking News

“ನೀತಿ ಸಮಿತಿಯಲ್ಲೇ ಸಿ.ಟಿ.ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗಲಾಟೆ ಪ್ರಕರಣ ಪರಿಹಾರ: ಹೊರಟ್ಟಿ

Spread the love

ಬೆಂಗಳೂರು: “ನೀತಿ ಸಮಿತಿಯಲ್ಲೇ ಸಿ.ಟಿ.ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗಲಾಟೆ ಪ್ರಕರಣ ಪರಿಹಾರವಾಗುವ ವಿಶ್ವಾಸವಿದೆ” ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶನಿವಾರ ಮಾತನಾಡಿದ ಅವರು, “ಸದನದಲ್ಲಿ ನಡೆದಿದ್ದನ್ನು ಅಲ್ಲೇ ಮುಗಿಸಬೇಕಿತ್ತು. ಸದನ ನಡೆದಾಗ ನಡೆದಿದ್ದರೆ ಹೀಗೆ ಆಗುತ್ತಿರಲಿಲ್ಲ. ಹೀಗಾಗಿ ಘಟನೆ ಇಷ್ಟು ದೊಡ್ಡದಾಗಿದೆ. ಇದನ್ನು ಎಥಿಕ್ಸ್ ಕಮಿಟಿಗೆ ಕೊಡಲಾಗಿದ್ದು, ವರದಿ ಬರಬೇಕಿದೆ. ಎಥಿಕ್ಸ್ ಕಮಿಟಿಯಲ್ಲಿಯೇ ಶೇ 99ರಷ್ಟು ಸಮಸ್ಯೆ ಪರಿಹಾರವಾಗೋ ವಿಶ್ವಾಸವಿದೆ. ಇಲ್ಲದೇ ಹೋದ್ರೆ ಕಮಿಟಿ ವರದಿಯನ್ನು ಅಧಿವೇಶನದಲ್ಲಿ ಮಂಡಿಸುತ್ತೇವೆ” ಎಂದರು.

“ಈಗಾಗಲೇ ಆ ಕೇಸ್ ಅಂತ್ಯವಾಗಿದೆ. ಬೆಳಗಾವಿಯಲ್ಲೇ ನಾನು ರೂಲಿಂಗ್ ಕೊಟ್ಟಿದ್ದೆ. ಆದರೆ ಇಬ್ಬರೂ ಮತ್ತೆ ದೂರು ಕೊಟ್ಟಿದ್ದಾರೆ. ಇದರ ಮಧ್ಯೆ ಸಂಧಾನ ಮಾಡೋ ಕೆಲಸಕ್ಕೆ ಮುಂದಾಗಿದ್ದೆ. ಆದರೆ ಇದಕ್ಕೆ ಯಾರೂ ಒಪ್ಪಿಲ್ಲ. ಹೀಗಾಗಿ ಪ್ರಕರಣವನ್ನು ಕಮಿಟಿಗೆ ನೀಡಿದ್ದೇನೆ. ಕಮಿಟಿ ವರದಿ ಕೊಟ್ಟ ಮೇಲೆ ಮುಂದಿನ ತೀರ್ಮಾನ ಮಾಡುತ್ತೇನೆ. ಒಂದು ತಿಂಗಳಲ್ಲಿ ವರದಿ ಕೊಡಲು ಹೇಳಿದ್ದೇನೆ. ಈ ವಿಷಯ ಸದನದಲ್ಲಿ ಚರ್ಚೆ ಆಗುವುದಿಲ್ಲ. ಎಥಿಕ್ಸ್ ಕಮಿಟಿಯಲ್ಲಿ ಸಿ.ಟಿ.ರವಿ ‌ಇದ್ದರು. ಈಗ ಅವರದ್ದೇ ಕೇಸ್ ಬಂದಿರೋದ್ರಿಂದ ಅವರನ್ನು ಕಮಿಟಿಯಿಂದ ಕೈಬಿಡಲಾಗಿದೆ” ಎಂದು ತಿಳಿಸಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ