Breaking News

ಬೆಳಗಾವಿ-ಮಿರಜ್ ರೈಲು ಸಂಚಾರ ಭಾಗಶಃ ರದ್ದು

Spread the love

ಹುಬ್ಬಳ್ಳಿ, ಫೆಬ್ರವರಿ 26: ವಿವಿಧ ಕಾರ್ಯಾಚರಣೆಯ ಕಾರಣಗಳಿಂದಾಗಿ, ಈಗಾಗಲೇ ತಾತ್ಕಾಲಿಕವಾಗಿ ರದ್ದುಗೊಂಡಿರುವ ಕೆಲವು ರೈಲು (Train) ಸೇವೆಗಳ ರದ್ದತಿಯನ್ನು ಮತ್ತು ಭಾಗಶಃ ರದ್ದತಿಯನ್ನು ವಿಸ್ತರಲಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ (South Western Railway zone) ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

ಮಿರಜ್-ಕ್ಯಾಸಲ್ ರಾಕ್ ರೈಲುಗಳ ಭಾಗಶಃ ರದ್ದತಿ ವಿಸ್ತರಣೆ

ಹುಬ್ಬಳ್ಳಿ ರೈಲ್ವೆ ವಿಭಾಗದ ಕ್ಯಾಸಲ್ ರಾಕ್-ಲೋಂಡಾ ಭಾಗದಲ್ಲಿ ನಡೆಯ ತಿರುವ ರೈಲ್ವೆ ವಿದ್ಯುದೀಕರಣ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳಿಂದಾಗಿ, ಈ ಕೆಳಗಿನ ರೈಲು ಸೇವೆಗಳ ಭಾಗಶಃ ರದ್ದತಿಯನ್ನು ವಿಸ್ತರಿಸಲಾಗಿದೆ.

  1. ರೈಲು ಸಂಖ್ಯೆ 17333: ಮಿರಜ್-ಕ್ಯಾಸಲ್ ರಾಕ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಮಾರ್ಚ್ 31 ರವರೆಗೆ ಲೋಂಡಾ-ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುತ್ತದೆ. ಈ ರೈಲು ಲೋಂಡಾ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.
  2. ರೈಲು ಸಂಖ್ಯೆ 17334: ಕ್ಯಾಸಲ್ ರಾಕ್-ಮಿರಜ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಮಾರ್ಚ್ 31 ರವರೆಗೆ ಕ್ಯಾಸಲ್ ರಾಕ್-ಲೋಂಡಾ ನಡುವೆ ಭಾಗಶಃ ರದ್ದಾಗಿರುತ್ತದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಲೋಂಡಾ ನಿಲ್ದಾಣದಿಂದ ಹೊರಡಲಿದೆ.

ಮೊದಲು, ಈ ರೈಲುಗಳನ್ನು ಫೆಬ್ರವರಿ 28 ರವರೆಗೆ ಭಾಗಶಃ ರದ್ದತಿಗಾಗಿ ಸೂಚಿಸಲಾಗಿತ್ತು, ಅದನ್ನು ಈಗ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.

11 ದಿನಗಳ ಕಾಲ ಬೆಳಗಾವಿ-ಮಿರಜ್ ಕಾಯ್ದಿರಿಸದ ವಿಶೇಷ ರೈಲು ಭಾಗಶಃ ರದ್ದು

ಕುಡಚಿ-ಉಗಾರ ಖುರ್ದ್ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲುಗಳನ್ನು 11 ದಿನಗಳ ಕಾಲ ಕುಡಚಿ-ಮಿರಜ್ ನಿಲ್ದಾಣಗಳ ನಡುವೆ ಭಾಗಶಃ ರದ್ದು ಗೊಳಿಸಲಾಗಿದೆ.

  1. ರೈಲು ಸಂಖ್ಯೆ 07303: ಬೆಳಗಾವಿ-ಮಿರಜ್ ಡೈಲಿ ಕಾಯ್ದಿರಿಸದ ವಿಶೇಷ ರೈಲು, ಫೆಬ್ರವರಿ 27 ರಿಂದ ಮಾರ್ಚ್ 9 ರವರೆಗೆ, ಕುಡಚಿ-ಮಿರಜ್ ನಡುವೆ ಭಾಗಶಃ ರದ್ದಾಗಿರುತ್ತದೆ. ಮತ್ತು ಈ ರೈಲು ಕುಡಚಿಯಲ್ಲಿ ಕೊನೆಗೊಳ್ಳಲಿದೆ.
  2. ರೈಲು ಸಂಖ್ಯೆ 07304: ಮಿರಜ್-ಬೆಳಗಾವಿ ಡೈಲಿ ಕಾಯ್ದಿರಿಸದ ವಿಶೇಷ ರೈಲು, ಫೆಬ್ರವರಿ 27 ರಿಂದ ಮಾರ್ಚ್ 9 ರವರೆಗೆ ಮಿರಜ್-ಕುಡಚಿ ನಡುವೆ ಭಾಗಶಃ ರದ್ದಾಗಿರುತ್ತದೆ. ಮತ್ತು ಈ ರೈಲು ಮಿರಜ್ ಬದಲಿಗೆ ಕುಡಚಿಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ