ಪ್ರಾಯಾಗರಾಜ ಯಾತ್ರೆ ಮುಗಿಸಿ ತಿರುಗಿ ಬರುವಾಗ ಜಬಲ್ಪುರ ನಗರಕ್ಕೆ ಬಂದು ನಿನ್ನೆ ರಾತ್ರಿ ವಾಸ್ತವ್ಯ ಮಾಡಿದ್ವಿ ಇವತ್ತು ಬೆಳಗ್ಗೆ 7 ಕೆ ಜಳಕ ಪೂಜಾ ಮುಗಿಸಿ ಹೊರಡಬೇಕು ಅನ್ನೋ ಹೊತ್ತಿಗೆ ನಮ್ಮ ಬೆಳಗಾವಿ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ Sandeep Deshpande ಅವರು ಪೋನ್ ಮಾಡಿ ಎಲ್ಲಿದ್ದೀರಿ ನಿನ್ನೆ ನೀವು ಜನಲ್ಪುರ ದಲ್ಲಿ ವಸತಿ ಇದ್ರಿ ಅಲ್ವಾ ಅಂದ್ರು ಹೌದು ಎಂದ ನಂತರ ಅರ್ಜೆಂಟಾಗಿ ಜಿಲ್ಲಾಧ್ಯಕ್ಷರಿಗೆ ಕಾಲ್ ಮಾಡಿ ಅಂತ ಹೇಳಿದ್ರು ಅದರಂತೆ ನಮ್ಮ ಕಿತ್ತೂರು ಬಿಜೆಪಿ ಮಂಡಲ ಅಧ್ಯಕ್ಷರು Shrikar Kulkarni ಅವರು ಸುಭಾಷ ಪಾಟೀಲ್ ಅವರಿಗೆ ಪೋನ್ ಮಾಡಿದಾಗ ಜಬಲ್ಪುರ ಹತ್ತಿರ ಸಿಹೋರ ಎಂಬಲ್ಲಿ ನಮ್ಮ ಗೋಕಾಕ ಗಾಡಿ ಆಕ್ಸಿಡೆಂಟ್ ಆಗಿದೆ ಅಧ್ಯಕ್ಷರೇ ಬೆಗೆ ಅಲ್ಲಿಗೆ ಹೋಗಿ ಎಂದಾಗ ಸುಭಾಷ ಪಾಟೀಲ್ ಸರ್ ಅವರ ಸೂಚನೆಯ ಮೇರೆಗೆ ಅಲ್ಲಿಗೆ ಹೋದಾಗ ಇವತ್ತಿನ ದಿನ ಕರಾಳ ಅನಿಸಿದ್ದಂತೂ ಸತ್ಯ
ಕಂಡು ಕಾಣರಿಯದ ಕರಾಳ ದೃಶ್ಯ ಆ ಅಪಘಾತದಲ್ಲಿ ಕಂಡಿತ್ತು ಸ್ಥಳದಲ್ಲಿಯೇ 6 ಜನ ದುರ್ಮರಣ ಅದರಲ್ಲಿ ಇಬ್ಬರು KSRTC ಡ್ರೈವರ್ ಗಳು ಇದ್ದರೂ ಮತ್ತೆ ಒಬ್ಬ ಯುವಕ ಜೀವನ್ಮರಣ ಹೋರಾಟದಲ್ಲಿ ಇದ್ದಾರೆ ಮತ್ತೊಬ್ಬರು ಅದೃಷ್ಟ ವಶಾತ್ ಬದುಕಿದ್ದರು ಬೇಗನೆ ಅವರನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿ ಅಲ್ಲಿಂದ ಪೊಲೀಸ್ ಥಾನೆಗೆ ಹೋಗಿ ಅಲ್ಲಿ ಮಾಡಬೇಕಾಗಿರುವ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಪಂಚನಾಮೆ ಮುಗಿಸಿ pm ಮಾಡಿಸಿ ಅವರನ್ನ ಕಳಿಸಲು ಅಲ್ಲಿಯ sp ಆಗಿರುವ ಆನಂದ್ ಕಲಾದಗಿ ಅವರು ನಮ್ಮ ಜಮಕಂಡಿಯವರು ಅವರು ಮತ್ತು ಅವರ ಸಂಪೂರ್ಣ ಪೊಲೀಸ್ ಇಲಾಖೆ ಅವರು ಒಂದು ರೂಪಾಯಿಯನ್ನು ನಮ್ಮ ಕಡೆಯಿಂದ ಖರ್ಚು ಮಾಡಿಸದೆ ಸ್ವತಃ ಪೊಲೀಸ್ ಅಧಿಕಾರಿಗಳೇ 35000 ರುಪಾಯಿ ಬಾಡಿಗೆ ಕೊಟ್ಟು ಎರಡು ಆಂಬುಲೆನ್ಸ್ ಮತ್ತು ಒಂದು ಸ್ಕಾರ್ಪಿಯೋ ಗಾಡಿ ಕೊಟ್ಟು ಕಳುಹಿಸಿ ಕೊಟ್ಟರು
ಭಾಷೆ ಬಾರದ ಬದುಕಿ ಉಳಿದ ಸದಾಶಿವ ಅಣ್ಣಾ ನಮ್ಮನ್ನು ನೋಡಿ ನಮಗೆ ಧೈರ್ಯ ಬಂದಂತಾಗಿದೆ ಎಂದು ಕೃತಜ್ಞತಾ ಭಾವದಿಂದ ಹೇಳಿದ್ದು ಇದೆ ಚುರ್ ಅನ್ನುವಾಹಾಗೆ ಇತ್ತು ಮಧ್ಯ ಪ್ರದೇಶ ಪೊಲೀಸ್ ಇಲಾಖೆಗೆ ತುಂಬು ಹೃದಯದ ಧನ್ಯವಾದಗಳು
ಮತ್ತೊಂದು ವಿನಂತಿ ದಯವಿಟ್ಟು ಪ್ರಯಾಗರಾಜ ಪುಣ್ಯಕ್ಷೇತ್ರಕ್ಕೆ ಹೋಗುವ ಮತ್ತು ಬರುವ ಯಾತ್ರಾರ್ಥಿಗಳು ದಯವಿಟ್ಟು ರಾತ್ರಿಯಿಡೀ ಗಾಡಿ ಓಡಿಸದೆ ರಾತ್ರಿ 8 ರಿಂದ 9 ಗಂಟೆಗೆ ಎಲ್ಲಿ ಇರುತ್ತೀರಿ ಅಲ್ಲಿಯೇ ವಾಸ್ತವ್ಯ ಮಾಡಿ ಅಂತ ವಿನಂತಿಸುತ್ತೇವೆ ಹಾಗೆ ಇವತ್ತಿನ ಕಾರ್ಯದಲ್ಲಿ ನನ್ನೊಂದಿಗೆ ಭಾಗಿಯಾಗಿದ್ದ ಶ್ರೀಕರ ಕುಲಕರ್ಣಿ ಸರ್,
Raviraj Inamdar ಮತ್ತು ಶ್ರೀಧರ ನಾಗನೂರ ಸನಾತನಿ ಹಿಂದೂ ಮತ್ತು ವಿಷಯ ತಿಳಿಸಿದ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ ಸರ್ ಅವರಿಗೆ ಧನ್ಯವಾದಗಳು ,
ಮೃತರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ದೇವರು ಕೊಡಲಿ,
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ.
Laxmi News 24×7