Breaking News

ಬೆಳಗಾವಿಯಲ್ಲಿ ಮರಾಠಾ ಸಾಮ್ರಾಜ್ಯದ ನೈಜ ಆಯುಧಗಳ ಅನಾವರಣ

Spread the love

ಬೆಳಗಾವಿ : ಹಿಂದವಿ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರಿಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಿಶೇಷ ಗೌರವವಿದೆ. ಅವರ ಪರಾಕ್ರಮ, ಸಾಹಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಒಂದಿಲ್ಲೊಂದು ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಈಗ ಹಳೆಯ ಕಾಲದ ಶಸ್ತ್ರಾಸ್ತ್ರಗಳ ಪ್ರದರ್ಶನವು ಶಿವಾಜಿ ಚರಿತ್ರೆ ಕಟ್ಟಿಕೊಡುತ್ತಿದೆ. ಹೇಗಿದೆ ಪ್ರದರ್ಶನ..? ಯಾವೆಲ್ಲಾ ಶಸ್ತ್ರಗಳಿವೆ..? ಎಂಬುದರ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.

ಛತ್ರಪತಿ ಶಿವಾಜಿ ಕಾಲದ ಕತ್ತಿ-ಗುರಾಣಿಗಳು, ಸೇನಾ ಹಡಗುಗಳ ಮಾದರಿಗಳು, ಅಂಚೆ ಸ್ಟಾಂಪ್​ಗಳು ಮತ್ತು ನಾಣ್ಯಗಳು, ರಂಗೋಲಿಯಲ್ಲಿ ಅರಳಿದ ಸುಂದರ ಚಿತ್ರಗಳು ಮರಾಠಾ ಸಾಮ್ರಾಜ್ಯದ ವೈಭವವನ್ನು ಅನಾವರಣಗೊಳಿಸಿವೆ.ಬೆಳಗಾವಿಯ ಮರಾಠಾ ಮಂದಿರದಲ್ಲಿ ರೋಟರಿ ಕ್ಲಬ್​ ಬೆಳಗಾವಿ ಸೌತ್ ​ವತಿಯಿಂದ ಫೆ.11-14ರ ವರೆಗೆ 4 ದಿನಗಳ ಕಾಲ “ಶಿವಕಾಲೀನ (ಶಿವಾಜಿ ಕಾಲದ) ಶಸ್ತ್ರ ಪ್ರದರ್ಶನ” ಏರ್ಪಡಿಸಲಾಗಿದೆ. ಮೊದಲ ದಿನವೇ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮೊದಲಿಗೆ ಪ್ರದರ್ಶನಕ್ಕೆ ಕಾಲಿಡುತ್ತಿದ್ದಂತೆ ರಂಗೋಲಿಯಲ್ಲಿ ಬಿಡಿಸಿರುವ ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜ, ಸರ ಸೇನಾಧಿಪತಿ ತಾನಾಜಿ ಮಾಲುಸರೆ, ಬಾಜಿಪ್ರಭು ದೇಶಪಾಂಡೆ, ಬಾಲ ಶಿವಾಜಿ, ಮಹಾರಾಣಿ ಜೀಜಾಮಾತಾ ಸೇರಿ ಮತ್ತಿತರ ಚಿತ್ರಗಳು ಕಣ್ಮನ ಸೆಳೆಯುತ್ತಿವೆ. ನಾಶಿಕ್​ ಸಾಯಿ ಆರ್ಟ್ಸ್​ ಕಲಾವಿದರು ಈ ಚಿತ್ರ ಬಿಡಿಸಲು ಸುಮಾರು 40 ಗಂಟೆ ಸಮಯ ತೆಗೆದುಕೊಂಡಿದ್ದಾರೆ.

500ಕ್ಕೂ ಅಧಿಕ ಶಸ್ತ್ರಗಳು : ಮುಂದೆ ಹೋಗುತ್ತಿದ್ದಂತೆ ಶಿವಾಜಿ ಸಾಮ್ರಾಜ್ಯದ ಶಸ್ತ್ರಾಗಾರಕ್ಕೆ ಪ್ರವೇಶಿಸಿದ ಅನುಭವ ಆಗುತ್ತದೆ. ವಿವಿಧ ಪ್ರಕಾರದ ಖಡ್ಗ(ತಲವಾರ್), ಬಿಲ್ಲು, ತ್ರಿಶೂಲ್, ಬಿಲ್ಲು-ಬಾಣ, ಕಟಾರ್, ಡಾಲ್, ತಲವಾರ್​ಗಳು, ಕೊಡ್ಲಿ, ತೋಪು, ಹ್ಯಾಂಡ್ ಪಿಸ್ತೂಲ್, ಹುಲಿ ಉಗುರು, ಭರ್ಜಿಗಳು, ಈಟಿಗಳು, ರಕ್ಷಾ ಕವಚ, ತೋಪು, ಹ್ಯಾಂಡ್ ಗನ್ ಸೇರಿ ಒಂದಾ ಎರಡಾ..? ವಿಜಯನಗರ, ಬ್ರಿಟಿಷ್​​​, ಮೊಘಲರ, ಶಿವಾಜಿ ಮಹಾರಾಜರ ಕಾಲದಲ್ಲಿ ಸೈನಿಕರು, ಸೇನಾಧಿಪತಿಗಳು ಬಳಸಿದ ನೈಜ ಶಸ್ತ್ರಗಳು ಇಲ್ಲಿವೆ. ಮಹಾರಾಷ್ಟ್ರದ ಪುಣೆಯಿಂದ ತರಿಸಿರುವ 500ಕ್ಕೂ ಅಧಿಕ ಆಯುಧಗಳನ್ನು 62 ಪ್ರೇಮ್​ಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇನ್ನು, ಡಚ್ಚ ಕಲಾವಿದನ ಕುಂಚದಲ್ಲಿ ಅರಳಿದ ಶಿವಾಜಿ ಮಹಾರಾಜರ ಹಳೆಯ ಭಾವಚಿತ್ರ ಈ ಪ್ರದರ್ಶನದ ಕೇಂದ್ರಬಿಂದುವಾಗಿದೆ.

EXHIBITION OF WEAPONS OF SHIVAJI PERIOD IN BELAGAVI

ಸೇನಾ ಹಡಗುಗಳ ಮಾದರಿಗಳು : ಅದೇ ರೀತಿ ಸತಾರಾದಿಂದ ಸೇನಾ ಹಡಗುಗಳ ಮಾದರಿ ತರಿಸಲಾಗಿದೆ. ಶಿವಾಜಿ ಬಳಸಿದ ಗಲಬತ್​, ಗುರಾಬ್​, ಪಾಲ್ ಹಡಗುಗಳಿವೆ. ಚೋಲಾ, ಪೋರ್ಚುಗೀಸ್​, ಬ್ರಿಟಿಷ್​ ಕಾಲದ ಸೇನಾ ಹಡಗು, ಅದೇ ರೀತಿ ಈಗಿನ ಭಾರತೀಯ ನೌಕಾದಳಕ್ಕೆ ಸೇರಿದ ಐಎನ್ಎಸ್​ ವಿಕ್ರಾಂತ, ಐಎನ್ಎಸ್ ವಿಶಾಖಪಟ್ಟಣಂ ಮಾದರಿಗಳನ್ನು ಜನರು ಪ್ರದರ್ಶನದಲ್ಲಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಒಟ್ಟು 640 ಮಾದರಿಯ ನೌಕಾಸೇನೆ ಹಡಗುಗಳ ಮಾದರಿಗಳನ್ನು ಸಿದ್ಧಪಡಿಸಿರುವುದು ವಿಶೇಷ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ