Breaking News

ಗೋಕಾಕ್ ತಾಲೂಕಿನಜಾತ್ರೆ ಗಲಾಟೆ ಕೊಲೆಯಲ್ಲಿ ಅಂತ್ಯ

Spread the love

ಬೆಳಗಾವಿ, ಜನವರಿ 20: ರೀಲ್ಸ್ ಹಾಕಿ ಉರಿಸಿದ್ದಕ್ಕೆ ಕುಸ್ತಿ ಪೈಲ್ವಾನ್​ ಅ​ನ್ನು ಸಿನಿಮಾ ಶೈಲಿಯಲ್ಲಿ ಸ್ಕೆಚ್ ಹಾಕಿ ಕೊಲೆ (kill) ಮಾಡಿರುವಂತಹ ಘಟನೆ ಜ.15ರಂದು ಜಿಲ್ಲೆಯ ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಪ್ರಕಾಶ್ ಇರಟ್ಟಿ(26) ಕೊಲೆಯಾದ ಯುವಕ. ಇಬ್ಬರು ಬಾಲಾಪರಾಧಿ ಸೇರಿ ಒಟ್ಟು 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವಿಚಂದ್ರ ಪಾತ್ರೋಟ್, ಉಮೇಶ್ ಕಂಬಾರ್, ಮಾರುತಿ ವಡ್ಡರ್, ಅಭಿಷೇಕ್ ಪಾತ್ರೋಟ್, ಮನೋಜ್ ಪಾತ್ರೋಟ್, ವಿಜಯ್ ಕುಮಾರ್ ನಾಯಿಕ್ ಸೇರಿ ಇಬ್ಬರು ಬಾಲಾಪರಾಧಿಗಳು ಬಂಧಿತರು. ಪ್ರಕಾಶ್ ಚಲನವಲನ ಬಗ್ಗೆ ಮಾಹಿತಿ ನೀಡಲು ಆರೋಪಿಗಳು ಅಪ್ರಾಪ್ತರನ್ನು ಇನ್ಫಾರ್ಮರ್ ಆಗಿ ಬಳಸಿಕೊಂಡಿದ್ದರು.

ಜಾತ್ರೆ ಗಲಾಟೆ ಕೊಲೆಯಲ್ಲಿ ಅಂತ್ಯ: ಸಿನಿಮಾ ರೀತಿಯಲ್ಲಿ ಸ್ಕೆಚ್ ಹಾಕಿ ಕುಸ್ತಿ ಪೈಲ್ವಾನ್​ ಹತ್ಯೆ

ಪೈಲ್ವಾನ್ ಕೊಲೆಗೆ ಕಾರಣವಾಯ್ತು ಆ ಎರಡು ರೀಲ್ಸ್

ಕೊಳವಿ ಜಾತ್ರೆಯಲ್ಲಿ ಪ್ರಕಾಶ್ ಇರಟ್ಟಿ ಮತ್ತು ರವಿಚಂದ್ರ ಪಾತ್ರೋಟ್ ನಡುವೆ ಗಲಾಟೆಯಾಗಿತ್ತು. ಗಲಾಟೆ ಬಳಿಕ ಎರಡು ರೀಲ್ಸ್ ಹಾಕಿ ರವಿಚಂದ್ರ ನನ್ನು ಕೊಲೆಯಾದ ಪ್ರಕಾಶ್ ಉರಿಸಿದ್ದಾನೆ.​​ ಹೂಲಿಕಟ್ಟಿ ಗ್ರಾಮದ ಶಿವಲಿಂಗೇಶ್ವರ ಜಾತ್ರೆಗೆ ಪ್ರಕಾಶ್ ಹೋಗಿದ್ದಾನೆ. ಪ್ರಕಾಶ್ ಬರುವುದನ್ನು ಕಾದು ಕುಳಿತಿದ್ದ ಆರೋಪಿಗಳು ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಹೇಳಿದ್ದಿಷ್ಟು

ಪ್ರಕರಣ ಕುರಿತಾಗಿ ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್​ ಪ್ರತಿಕ್ರಿಯಿಸಿದ್ದು, ಜ.14‌ರಂದು ಗೋಕಾಕ್ ತಾಲೂಕಿನ ಕೊಳವಿ ಹುಲಿಕಟ್ಟಿ ಗ್ರಾಮದ ಮಧ್ಯೆ ಕೊಲೆಯಾಗಿತ್ತು. ಕೊಳವಿ ಗ್ರಾಮದ ಪ್ರಕಾಶ್ ಇರಟ್ಟಿ ಎಂಬಾತ ಕೊಲೆಯಾಗಿದ್ದ. ಹುಲಿಕಟ್ಟಿ ಜಾತ್ರೆ ಮುಗಿಸಿ ವಾಪಾಸ್ ಮನೆಗೆ ಹೋಗುವಾಗ ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ