Breaking News

ಸರ್ಕಾರವೇ ನಕ್ಸಲರಿಗೆ ಶರಣಾಗಿದೆ: ಅರ್ಬನ್ ನಕ್ಸಲರ ಕುರಿತು ವಾಗ್ದಾಳಿ ನಡೆಸಿದ ಶಾಸಕ ಸಿ.ಟಿ.ರವಿ

Spread the love

ಸರ್ಕಾರವೇ ನಕ್ಸಲರಿಗೆ ಶರಣಾಗಿದೆ: ಅರ್ಬನ್ ನಕ್ಸಲರ ಕುರಿತು ವಾಗ್ದಾಳಿ ನಡೆಸಿದ ಶಾಸಕ ಸಿ.ಟಿ.ರವಿ

ರಾಜ್ಯದಲ್ಲಿ ನಕ್ಸಲರ್ ಶರಣಾಗತಿಗೆ ಸಂಬಂಧಿಸಿದಂತೆ ಸರ್ಕಾರವೇ ನಕ್ಸಲರಿಗೆ ಶರಣಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು. ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು ನಕ್ಸಲರು ಸರ್ಕಾರಕ್ಕೆ ಕಂಡಿಷನ್ ಹಾಕುತ್ತಿದ್ದಾರೆ.

ಶರಣಾಗಿರುವದು ನಕ್ಸಲರೋ ಅಥವಾ ಸರ್ಕಾರವೋ ಎಂದು ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯ ನವರ ಸಾಪ್ಟ್ ವೇ ಯಿಂದ ಅರ್ಬನ್ ನಕ್ಸಲರು ಡಿಪೆಂಡ್ ಮಾಡ್ತಾ ಇದ್ಸಾರೆ

. ಬಹುತೇಕ ಅವರ ಒಡ್ಡೋಲಗದಲ್ಲಿ ನಕ್ಸಲರ ಮಾನಿಟರಿಂಗ್ ಅರ್ಬನ್ ನಕ್ಸಲರೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ‌ ನಕ್ಸಲರಿಗೆ ನೆರವು ನೀಡುತ್ತಿದ್ದವರು ಯಾರು? ಆಯುಧಗಳನ್ನು ಪೂರೈಸುತ್ತಿದ್ದವರು ಯಾರು ಎಂದು ಶರಣಾಗತಿ ಯಾವ ಕಾರಣಕ್ಕೆ? ನಕ್ಸಲ್ ಶರಣಾಗತಿ ಸಂದರ್ಭದ ದುರುಪಯೋಗ ಆಗ್ತಿದೆಯಾ? ಈ ನಕ್ಸಲರ ಕುರಿತು ಪೂರ್ಣ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ವಿರುದ್ಧ ಎಂಎಲ್‌ಸಿ ರವಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಯ್ತು. ಇವರ ಸಾಧನೆ ಏನು ಅಂದ್ರೆ ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರ ಎಂದು ಕಿಡಿಕಾರಿದರು. ಮುಡಾ, ವಾಲ್ಮೀಕಿ, ಅಬಕಾರಿ ಇಲಾಖೆ ಹಗರಣಗಳಾದವು. ಆರೋಗ್ಯ ಖಾತೆಗೆ ಅನಾರೋಗ್ಯ ಬಡಿದಿದೆ, ಬಾಣಂತಿಯರು, ಶಿಶುಗಳ ಸರಣಿ ಸಾವು ನಿಂತಿಲ್ಲ.

ಜೀವರಕ್ಷಕ ಔಷಧಗಳೇ ಕಳಪೆ, ಇದು ಆಘಾತಕಾರಿ ವಿಚಾರ. ಪ್ರಾಮಾಣಿಕ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಈ ಸರ್ಕಾರ ಕೊಟ್ಟಿದೆ .ಅಧಿಕಾರಿಗಳು, ಸರ್ಕಾರಿ ನೌಕರರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹರಿಹಾಯ್ದರು.
#INNEWS #BELAGAVI #belgaumnews #belg


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ