Breaking News

ದುಡಿಯುವ ಗಂಡುಮಕ್ಕಳಿಗೆ ಶೇ.15% ಬಸ್​ ಪ್ರಯಾಣ ದರ ಏರಿಕೆ ಭಾರ: ಸಚಿವ ಶಿವಾನಂದ ಪಾಟೀಲ್

Spread the love

ಹಾವೇರಿ: “ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಬಸ್​ ಪ್ರಯಾಣ ದರ ನಮಗಿಂತ ದರ ಹೆಚ್ಚಿದೆ. ನಮ್ಮಲ್ಲಿ ಕಡಿಮೆ ಇದೆ” ಎಂದು ಬಸ್ ಟಿಕೆಟ್ ದರ ಏರಿಕೆಯನ್ನು ಸಚಿವ ಶಿವಾನಂದ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಜೆಪಿಯವರಿಗೆ ಹೋರಾಟ ಮಾಡೋದು ಬಿಟ್ಟು ಬೇರೆ ಏನು ಕೆಲಸ ಹೇಳಿ?.

ಅವರು ಒಂದು ಸಲವಾದರೂ ಅಭಿವೃದ್ಧಿ ಬಗ್ಗೆ ಮಾತಾನಾಡುತ್ತಾರಾ?. ಶಕ್ತಿ ಯೋಜನೆಯಲ್ಲಿ ಬಡ ಜನರನ್ನು ಓಡಾಡಿಸ್ತಿದ್ದೇವೆ ಅಂದರೆ ಅಟ್ ಲೀಸ್ಟ್ ನೋ ಪ್ರಾಫಿಟ್ ನೋ ಲಾಸ್‌ನಲ್ಲಿ ಆದರೂ ಉಳಿಸಬೇಕು ಎಂಬ ಉದ್ದೇಶ ಅಷ್ಟೇ” ಎನ್ನುವ ಮೂಲಕ ಬಸ್​ ಟಿಕೆಟ್​ ದರ ಹೆಚ್ಚಳವನ್ನು ಸಮರ್ಥಿಸಿಕೊಂಡರು.”ಹೆಣ್ಣು ಮಕ್ಕಳಿಗೆ, ಬಡವರಿಗೆ ಏನ್​ ಕೊಡಬೇಕೋ ಅದನ್ನು ಆದಷ್ಟು ಕೊಟ್ಟಿದ್ದೇವೆ.

ದುಡಿಯುವ ಗಂಡುಮಕ್ಕಳಿಗೆ 15% ಬಸ್​ ಪ್ರಯಾಣ ದರ ಏರಿಕೆ ಭಾರ ಆಗಬಹುದು. ನಾನು ಇಲ್ಲ ಅಂತ ಹೇಳಲ್ಲ. ಪ್ರತಿ ನಿತ್ಯ ಓಡಾಡುತ್ತಿರೋರಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿದ್ದಾರೆ. ಗಂಡುಮಕ್ಕಳು ಓಡಾಡಲ್ಲ, ನೀವು ಉಲ್ಟಾ ಹೇಳುತ್ತಿದ್ದೀರಿ” ಎಂದು ಮಾಧ್ಯದಮವರಿಗೆ ಹೇಳಿದರು.ವಿಧಾನ ಪರಿಷತ್​ ಸದಸ್ಯ ಸಿ. ಟಿ. ರವಿ ಪ್ರಕರಣದಲ್ಲಿ ಸಿಐಡಿಗೆ ಸ್ಥಳ ಮಹಜರು ಮಾಡಲು ಸದ್ಯ ಅವಕಾಶ ನೀಡುವುದಿಲ್ಲ ಎಂಬ ವಿಧಾನ ಪರಿಷತ್ ಸಭಾಪತಿ ಬಸವರಾಜ್​ ಹೊರಟ್ಟಿ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಸಚಿವ ಶಿವಾನಂದ ಪಾಟೀಲ್, “ಆ ಘಟನೆ ನಡೆದಾಗ ನಾನು ಸದನದಲ್ಲೇ ಇರಲಿಲ್ಲ” ಎಂದು ಹೇಳಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ