Breaking News

ಚಿತ್ರ ಸಂತೆ: ಗಮನ ಸೆಳೆದ ಕ್ಲೇ ಆರ್ಟ್, ಡಾಟ್ ಅಂಡ್ ರಿವರ್ಸ್ ಪೇಂಟಿಂಗ್ಸ್

Spread the love

ಬೆಂಗಳೂರು: ನಗರದ ಕುಮಾರ ಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ತು ಇಂದು ಆಯೋಜಿಸಿರುವ 22ನೇ ಚಿತ್ರ ಸಂತೆಯಲ್ಲಿ ಹಲವು ವಿಧದ ಮನಮೋಹಕ ಚಿತ್ರಕಲೆಗಳು ಕಲಾಭಿಮಾನಿಗಳಿಗೆ ಬೆರಗು ಮೂಡಿಸಿದವು. ಡಾಟ್ ಪೇಂಟಿಂಗ್, ರಿವರ್ಸ್ ಪೇಂಟಿಂಗ್ ಮತ್ತು ಕ್ಲೇ ಆರ್ಟ್ ಮೂಲಕ ಮೂಡಿ ಬಂದ ಕಲಾಕೃತಿಗಳು ಚಿತ್ರಸಂತೆಯ ಮೆರುಗು ಹೆಚ್ಚಿಸಿದವು.

ಡಾಟ್ ಪೇಂಟಿಂಗ್ ವಿಶೇಷತೆಯೇನು? ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ ವೃತ್ತಿಪರ ಚಿತ್ರಕಲಾವಿದ ಉಷಾರಂಜನ್ ಮಂಡಲ್ ಅವರ ಡಾಟ್ ಪೇಂಟಿಂಗ್ ವಿಶೇಷವಾಗಿ ಜನರ ಗಮನ ಸೆಳೆಯಿತು. ತರಹೇವಾರಿ ಪೆನ್ ಬಳಸಿ ಇವರೇ ಮುನ್ನೆಲೆಗೆ ತಂದಿರುವ ಕಲೆ ಇದಾಗಿದೆ.

 

ಚಿತ್ರ ಸಂತೆಯಲ್ಲಿ ಗಮನ ಸೆಳೆದ ಕಲಾಕೃತಿಗಳು

ಇಟಲಿಯಿಂದ ತರಿಸಲಾದ ವಿಶೇಷ ಪೇಪರ್​ನಲ್ಲಿ ಆಕೃತಿ ಮೂಡಿಸಲು 3 ರಿಂದ 4 ತಿಂಗಳ ಕಾಲ ಸಮಯ ಬೇಕು. ಇದಕ್ಕೆ 40 ಸಾವಿರ ರೂ.ದಿಂದ ಲಕ್ಷಗಳವರೆಗೆ ಬೆಲೆ ನಿಗದಿಪಡಿಸಲಾಗಿದೆ. ಸುಮಾರು 35 ಚಿತ್ರಕಲೆಗಳನ್ನು ಜನರು ಇಂದು ಖರೀದಿಸಿದರು.ಈ ಡಾಟ್ ಪೇಂಟಿಂಗ್​​ಗಳನ್ನು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಈ ಪೇಂಟಿಂಗ್​​ನಲ್ಲಿ ವಿನೂತನ ಪೆನ್ ಮತ್ತು ಶಾಹಿ ಬಳಸಲಾಗುತ್ತದೆ. ಇದರಲ್ಲಿನ ಡಿಟೈಲಿಂಗ್ ಬೇರೆ ಚಿತ್ರಕಲೆಗೆ ಹೋಲಿಸಿದರೆ ಅತ್ಯತ್ತಮವಾಗಿದೆ. ಫುಲ್ ಶೀಟ್ ಪೇಂಟ್ ಮಾಡಲು 4 ತಿಂಗಳಿಗಿಂತ ಅಧಿಕ ಸಮಯ ಹಿಡಿಯುತ್ತದೆ. ಚಿತ್ರ ಸಂತೆಯಲ್ಲಿ ಕೂಡ ಒಳ್ಳೆಯ ವಿಮರ್ಶೆ ದೊರೆತಿದೆ ಎಂದು ಉಷಾರಂಜನ್ ಮಂಡಲ್ ಹೇಳಿದರು.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ