Breaking News

ಬಂದ್ ಮಾಡಿ ಜನರಿಗೆ ತೊಂದ್ರೆ ಕೊಡೋ ಕೆಲಸ ಮಾಡ್ಬೇಡಿ: B.S.Y. ಮನವಿ

Spread the love

ಬೆಂಗಳೂರು: ನಾಳೆಯ ಕರ್ನಾಟಕ ಬಂದ್‍ಗೆ ಅವಕಾಶ ಇಲ್ಲ. ದಯಮಾಡಿ ಯಾರೂ ಬಂದ್ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕನ್ನಡಪರ ಸಂಘಟನೆಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸುತ್ತೂರು ಮಠದ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳನ್ನು ಬನಶಂಕರಿಯಲ್ಲಿ ಸತ್ತೂರು ಸದನದಲ್ಲಿ ಭೇಟಿ ಮಾಡಿ ಸಿಎಂ ಯಡಿಯೂರಪ್ಪ ಅವರು ಶ್ರೀಗಳ ಆಶೀರ್ವಚನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಾಳೆಯ ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಂದ್ ಮಾಡದಂತೆ ಮನವಿ ಮಾಡಿಕೊಂಡರು. ಬಂದ್ ಮಾಡಿ ಜನರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ. ಬಂದ್ ಮಾಡುವ ಅಗತ್ಯ ಇಲ್ಲ. ಎಲ್ಲ ಸಮಾಜವನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದರು.ಕನ್ನಡಕ್ಕೆ ಏನೇನೋ ಆದ್ಯತೆ ಕೊಡಬೇಕೋ, ಇನ್ನೂ ಹೆಚ್ಚಿನದಾಗಿ ಏನೇನೋ ಕೊಡಬೇಕೋ ಅದನ್ನು ಕೊಡಲು ನಾನು ಸಿದ್ಧನಿದ್ದೇನೆ. ಕನ್ನಡದ ಮುಖಂಡರು ಏನು ಹೇಳ್ತಾರೋ ಅದನ್ನು ನಾನು ಮಾಡಲು ಸಿದ್ಧನಿದ್ದೇನೆ. ದಯಮಾಡಿ ಬಂದ್ ಗೆ ಎಲ್ಲಿಯೂ ಕೂಡ ಅವಕಾಶ ಇಲ್ಲ. ಯಾರು ಕೂಡ ಬಂದ್ ಮಾಡಬೇಡಿ. ದಯವಿಟ್ಟು ಇದಕ್ಕೆ ಎಲ್ಲರು ಸಹಕರಿಸಿಬೇಕು ಎಂದು ಸಿಎಂ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ