Breaking News

ಮಾಜಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆತನಿಗೆ ಥಳಿಸಿ ,ಕಟ್ಟಿ ಹಾಕಿ ನಂತರ ಪೋಲೀಸರಿಗೆ ಒಪ್ಪಿಸಿದ್ದಾರೆ.

Spread the love

ಬೆಳಗಾವಿ- ದೂರದ ಮುಂಡಗೋಡದಿಂದ ಬೆಳಗಾವಿಗೆ ಹಮಾಲಿ ಕೆಲಸಕ್ಕೆಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿ,ಅತ್ಯಾಚಾರ ನಡೆಸಿದ ಆರೋಪಿಯನ್ನು ಹಿಡಿದು ಆತನಿಗೆ ಮನಬಂದಂತೆ ಥಳಿಸಿ ಸ್ಥಳಿಯರು ಆರೋಪಿಯನ್ನು ಪೋಲೀಸರಿಗೆ ಒಪ್ಪಸಿದ ಘಟನೆ ಮಾರ್ಕೆಟ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮುಂಡಗೋಡ ಮೂಲದ ಮಾಜಿ ಗ್ರಾಪಂ ಸದಸ್ಯ ಪರುಶರಾಮ್ ದೇಮಾಣಿ ಮಡಿವಾಳರ ಎಂಬಾತ ಬೆಳಗಾವಿಯ ರವಿವಾರ ಪೇಠೆಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ,ಮಾರ್ಕೆಟ್ ಪೋಲೀಸ್ ಠಾಣೆಯ ಗಲ್ಲಿಯೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈ ಭೂಪ ಎರಡು ದಿನದ ಹಿಂದೆ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ ಪರಾರಿಯಾಗಿದ್ದ,ಇಂದು ಬೆಳಿಗ್ಗೆ ಆತ ಮತ್ತೆ ಬೆಳಗಾವಿಗೆ ಮರಳಿದ ಬಳಿಕ ಸ್ಥಳಿಯರು ಆತನಿಗೆ ಥಳಿಸಿ ,ಕಟ್ಟಿ ಹಾಕಿ ನಂತರ ಪೋಲೀಸರಿಗೆ ಒಪ್ಪಿಸಿದ್ದಾರೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ